More

    ಎಲ್ಲೆಲ್ಲೋ ಹೋಗಿ ಮೀಟಿಂಗ್ ಮಾಡ್ತೀರಿ, ರೈತ-ಕೂಲಿಕಾರನ ಸಾವಿಗೆ ಬೆಲೆ ಇಲ್ಲವೇ? ಜಿಲ್ಲಾಧಿಕಾರಿಗೆ ತರಾಟೆ

    ಹಾಸನ: ಎಲ್ಲೆಲ್ಲೋ ಹೋಗಿ ಮೀಟಿಂಗ್ ಮಾಡ್ತೀರಿ. ರೈತ ಮತ್ತು ಕೂಲಿಕಾರ್ಮಿಕನ ಸಾವಿಗೆ ಬೆಲೆ ಇಲ್ಲವೇ? ಈ ಭಾಗದಲ್ಲಿ ಪದೇಪಡೆ ಕಾಡಾನೆ ದಾಳಿಯಾಗುತ್ತಿದ್ದು, ರೈತರು-ಕಾರ್ಮಿಕರು ಬಲಿಯಾಗುತ್ತಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ವಿರುದ್ಧ ರೈತರು ಕಿಡಿಕಾರಿದ್ದಾರೆ.

    ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದಲ್ಲಿ ಬುಧವಾರ ಸಂಜೆ ಕಾಡಾನೆ ದಾಳಿಗೆ ಕೂಲಿಕಾರ್ಮಿಕ ವಸಂತ್ (55) ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ವಸಂತ್​ರ ಮೃತದೇಹ ಇಟ್ಟುಕೊಂಡು ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ರೈತರು ಜಿಲ್ಲಾಧಿಕಾರಿ ಆರ್.ಗಿರೀಶ್​ಗೆ ತರಾಟೆಗೆ ತೆಗೆದುಕೊಂಡರು. ನಮ್ಮ ಸಾವಿಗೆ ಬೆಲೆ ಇಲ್ವಾ? ಎಂದು ಪ್ರಶ್ನಿಸಿದರು. ಸ್ಥಳದಲ್ಲೇ ಇದ್ದ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಫೋನಾಯಿಸಿದರು. ಇದನ್ನೂ ಓದಿರಿ ಮನೆ ತೆರವು ಕಾರ್ಯಾಚರಣೆ: ವಿಷಕುಡಿದ ಮಹಿಳೆಯರು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ

    ಇದೇ ಮಂಗಳವಾರ (ಫೆ.16) ತುರ್ತುಸಭೆ ಮಾಡಿ ಕಾಡಾನೆ ಹಾವಳಿಗೆ ತಡೆ ಹಾಗೂ ರೈತರ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ಶಾಸಕರಿಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.

    ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಸಂತ್​ ಮೇಲೆ ನಿನ್ನೆ ಸಂಜೆ ಒಂಟಿಸಲಗ ದಾಳಿ ಮಾಡಿತ್ತು. ಬುಧವಾರ ಬೆಳಗ್ಗೆ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ ರೈತರು ಮತ್ತು ಗ್ರಾಮಸ್ಥರು ಜಿಲ್ಲಾಡಳಿತ, ಅರಣ್ಯ ಇಲಾಖೆ, ಅರಣ್ಯ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು.

    ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ನಿವಾಸಿಗಳು ಭಯದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಕಾಡಾನೆ ದಾಳಿಗೆ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡಾನೆ ಹಾವಳಿಯಿಂದ ಮುಕ್ತಿ ಪಡೆಯಲು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

    ಪ್ರೇಮಿಗಳ ದಿನ ಹುಡುಗಿಯರ ಕಾಟ ತಾಳಲಾರೆ ಪ್ಲೀಸ್​ 5 ದಿನ ರಜೆ ಕೊಡಿ ಸರ್..!​

    ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

    ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts