More

    ಬಿರುಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬ, ಮರಗಳು!


    ತೇರದಾಳ: ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸಂಜೆ ಅಂದಾಜು ಒಂದು ಗಂಟೆಗಳವರೆಗೆ ಮಿಂಚು, ಗಾಳಿ ಸಹಿತ ಭಾರಿ ಪ್ರಮಾಣದ ಮಳೆ ಸುರಿಯಿತು.

    ತಲೆಸುಡುವ ಬಿಸಿಲಿಗೆ ಬೆಂದುಹೋದ ಜನತೆ, ಪ್ರಾಣಿ ಪಕ್ಷಿಗಳು ಹಾಗೂ ಬಿರುಕು ಬಿಟ್ಟ ಭೂಮಿಗೆ ಸುರಿದ ಮಳೆಯಿಂದಾಗಿ ತಂಪಿನ ವಾತಾವರಣ ನಿರ್ಮಾಣವಾಯಿತು. ಸಂಜೆಯಿಂದಲೇ ಭಾರಿ ಪ್ರಮಾಣದ ಗಾಳಿ ಬೀಸಿದ್ದರಿಂದಾಗಿ ಗ್ರಾಮೀಣ ಪ್ರದೇಶ ಸೇರಿ ಪಟ್ಟಣದ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿನ ಮರ ರಸ್ತೆಗೆ ಬಿದ್ದ ಪರಿಣಾಮ ಠಾಣೆ ಕಾಂಪೌಂಡ್ ಒಡೆದು ಹೋಗಿದೆ.

    ಪಕ್ಕದ ಟಿಸಿ ಸುಟ್ಟಿದೆ. ವಿದ್ಯುತ್ ಕಂಬ, ಟಿಸಿ ಸೇರಿ ವಿದ್ಯುತ್ ತಂತಿಗಳು ಕಟ್ ಆಗಿರುವುದರಿಂದ ಪಟ್ಟಣ ಹಾಗೂ ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗೆವರೆಗೆ ವಿದ್ಯುತ್ ವ್ಯತ್ಯಯವಾಯಿತು.
    ಹೆಸ್ಕಾಂ ಸಿಬ್ಬಂದಿ ಬೆಳಗ್ಗೆಯಿಂದಲೇ ರಿಪೇರಿ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts