More

    ಅಪಾಯದ ಸ್ಥಿತಿಯಲ್ಲಿ ವಿದ್ಯುತ್ ಕಂಬ

    ಹಿರೇಕೆರೂರ: ಪಟ್ಟಣದ ತಂಬಾಕದ ನಗರದಲ್ಲಿ ಕಾರ್ಮಿಕ ಭವನ ಕಟ್ಟಡದ ಪ್ರಮುಖ ರಸ್ತೆಗೆ ಹೊಂದಿಕೊಂಡು ವಿದ್ಯುತ್ ಕಂಬವೊಂದು ಉರುಳುವ ಸ್ಥಿತಿಯಲ್ಲಿದೆ. ಕೂಡಲೆ ಸರಿಪಡಿಸುವಂತೆ ನಿವಾಸಿಗಳು ಹೆಸ್ಕಾಂ ಇಲಾಖೆಗೆ ಆಗ್ರಹಿಸಿದ್ದಾರೆ.

    ಕಂಬ ಬಾಗಿರುವ ಬಗ್ಗೆ ಲೈನ್‌ಮನ್‌ಗಳ ಗಮನಕ್ಕೆ ತಂದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ತಾಲೂಕಿನ ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಮಳೆಗಾಲವಾದ್ದರಿಂದ ಆಕಸ್ಮಾತ್ ವಿದ್ಯುತ್ ಕಂಬ ನೆಲಕ್ಕುರುಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಪಾಯ ಸಂಭವಿಸುವ ಮೊದಲೇ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಂಬವನ್ನು ಸರಿಪಡಿಸಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.

    ‘ನಮ್ಮ ಮನೆಯ ಮುಂದಿನ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬ ಬಾಗಿ ವರ್ಷಗಳೆ ಉರುಳಿವೆ. ಈ ಬಗ್ಗೆ ಲೈನ್‌ಮನ್‌ಗಳ ಗಮನಕ್ಕೆ ತರಲಾಗಿತ್ತು. ಅವರು ಏನೂ ಆಗಲ್ಲ ಅಂದಿದ್ದರು. ಆದರೆ, ಕಂಬ ದಿನೇ ದಿನೆ ವಾಲುತ್ತಲೆ ಇದೆ. ಅನಾಹುತ ಆಗುವ ಮುಂಚಿತವಾಗಿ ಇದನ್ನು ಸರಿಪಡಿಸಬೇಕಿದೆ’ ಎನ್ನುತ್ತಾರೆ ನಿವಾಸಿ ಪರಮೇಶಪ್ಪ ಡಮ್ಮಳ್ಳಿ.

    ಕಾರ್ಮಿಕ ಭವನಕ್ಕೆ ಕಾಂಪೌಂಡ್ ನಿರ್ಮಿಸಲಾಗುತ್ತಿತ್ತು. ಅದಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಕಂಬವನ್ನು ಸರಿಪಡಿಸಲು ಹೋಗಿರಲಿಲ್ಲ. ಎರಡು ದಿನದೊಳಗೆ ಹಳೆಯ ಕಂಬವನ್ನು ಕಿತ್ತು ಹೊಸ ಕಂಬ ಅಳವಡಿಸಲಾಗುವುದು.
    ನೂರಹ್ಮದ್, ಹೆಸ್ಕಾಂ ಶಾಖಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts