More

    ಕೋಲಾರದಲ್ಲಿ ಕಾವೇರಿದ ಮತ ಪ್ರಚಾರ

    ಕೋಲಾರ ವಿಧಾನ ಸಭೆ ಕ್ಷೇತ್ರದ ಅಭ್ಯರ್ಥಿಗಳಿಂದ ಮತದಾರರನ್ನು ಸೆಳೆಯಲು ಕಸರತ್ತು

    ಕೋಲಾರ: ತೀವ್ರ ಕುತೂಹಲ ಕೆರಳಿಸಿರುವ ಕೋಲಾರ ವಿಧಾನಸಭಾ ಕ್ಷೇತ್ರ ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಗಳಿಂದ ಬಿರುಸಿನ ಪ್ರಚಾರ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ಕಸರತ್ತು ನಡೆಸುತ್ತಿದ್ದಾರೆ.
    ಬಿಜೆಪಿ ಮತ್ತು ಜೆಡಿಎಸ್​ ನಾಲ್ಕೈದು ದಿನಗಳಿಂದ ಕ್ಷೇತ್ರಗಳನ್ನು ನಡೆಸುವ ಮೂಲಕ ಮತದಾರರನ್ನು ತಲುಪುವ ಕೆಲಸ ಮಾಡುತ್ತಿವೆ.
    ಕಾಂಗ್ರೆಸ್​ನಲ್ಲಿ ಅಭ್ಯರ್ಥಿ ಘೋಷಣೆ ತಡವಾದ ಕಾರಣ ಕೊನೇ ಗಳಿಗೆಯಲ್ಲಿ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್​ ಅವರು ಅಭ್ಯರ್ಥಿಯಾಗಿದ್ದು, ನಾಲ್ಕೆದು ದಿನಗಳಿಂದ ಅಭ್ಯರ್ಥಿ ಜತೆಯಲ್ಲಿ ಕಾಂಗ್ರೆಸ್​ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಎಂಎಲ್​ಸಿಗಳಾದ ನಜೀರ್​ ಅಹ್ಮದ್​, ಅನಿಲ್​ಕುಮಾರ್​, ಶಾಸಕ ಶ್ರೀನಿವಾಸಗೌಡ ಪ್ರಚಾರದ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈಗಾಗಲೇ ನರಸಾಪುರ, ವಕ್ಕಲೇರಿ ಹೋಬಳಿಗಳನ್ನು ಮುಗಿಸಿ ಕಸಬಾ ಹೋಬಳಿಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪ್ರಚಾರ ಹಮ್ಮಿಕೊಂಡಿದ್ದಾರೆ.
    ಪ್ರಚಾರ ತಡವಾದರೂ ಬಿರುಸಿನ ಪ್ರಚಾರ ಕೈಗೊಳ್ಳುವ ಮೂಲಕ ವಿವಿಧ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮತದಾರರನ್ನು ತಲುಪುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
    ಸಿದ್ದರಾಮಯ್ಯ ಕ್ಷೇತ್ರಕ್ಕೆ ಬರುತ್ತಾರೆಂದು ನಂಬಿಕೊಂಡಿದ್ದ ಕಾಂಗ್ರೆಸ್​ ಕೊನೇ ಗಳಿಗೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಮುಂದಾಗಿದೆ. ಜತೆಗೆ ಚದುರಿಹೋಗಿದ್ದ ಕಾಂಗ್ರೆಸ್​ ಮುಖಂಡರು ಸಾಥ್​ ನೀಡತೊಡಗಿದ್ದಾರೆ.
    ಕಾಂಗ್ರೆಸ್​ ಪ್ರಚಾರಕ್ಕೆ ಬ್ರೇಕ್​ ಹಾಕುವ ಕೆಲಸಕ್ಕೆ ಜೆಡಿಎಸ್​ ಮತ್ತು ಬಿಜೆಪಿ ಮುಂದಾಗುತ್ತಿದೆ. ಕಾಂಗ್ರೆಸ್​ ಮುನ್ನುಗ್ಗುತ್ತಿರುವ ಕಡೆಗಳಲ್ಲಿ ಹಿಂದೆಯೇ ತೆರಳಿ ಜೆಡಿಎಸ್​ ಹಾಗೂ ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​ ಮಾಡ ತೊಡಗಿವೆ. ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ವರ್ತೂರು ಆರ್​. ಪ್ರಕಾಶ್​ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಒಂದು ಬಾರಿ ಪರಾಭವಗೊಂಡು ಈ ಬಾರಿ ಬಿಜೆಪಿಯಿಂದ ಸ್ವರ್ಧೆಗೆ ಮುಂದಾಗಿದ್ದಾರೆ. ಕಾಲಾವಕಾಶ ಇದ್ದ ಕಾರಣ ಕ್ಷೇತ್ರವನ್ನು ಎರಡು ಮೂರು ಬಾರಿ ಸುತ್ತಿ ಮತದಾರರನ್ನು ತಲುಪುವ ಕೆಲಸ ಮಾಡಿದ್ದಾರೆ. ಜೆಡಿಎಸ್​ ಅಭ್ಯರ್ಥಿ ಸಿಎಂಆರ್​ ಶ್ರೀನಾಥ್​ ಕಳೆದ ಎರಡು ವರ್ಷಗಳಿಂದ ಕೋಲಾರದಿಂದ ಸ್ಪರ್ಧಿಸುವ ಆಲೋಚನೆಯಲ್ಲಿ ಸಮಾಜ ಸೇವೆಯ ಮೂಲಕ ಕ್ಷೇತ್ರದಾದ್ಯಂತ ಸಂಚರಿಸಿದ್ದಾರೆ.

    ಕೋಲಾರದಲ್ಲಿ ಕಾವೇರಿದ ಮತ ಪ್ರಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts