More

    ಪಿಡಿಒ, ಕಾರ್ಯದರ್ಶಿಗೆ ಚುನಾವಣಾ ಕರ್ತವ್ಯ: ಗ್ರಾಮ ಪಂಚಾಯಿತಿಯಲ್ಲಿ ಕೇಳೋರಿಲ್ಲ ಸಾರ್ವಜನಿಕರ ಸಮಸ್ಯೆ

    ಕೆ.ಆರ್.ಸಾಗರ(ಮಂಡ್ಯ): ಲೋಕಸಭಾ ಚುನಾವಣಾ ಕರ್ತವ್ಯಕ್ಕೆಂದು ಗ್ರಾಮ ಪಂಚಾಯಿತಿಯಿಂದಲೂ ಪಿಡಿಒ ಹಾಗೂ ಕಾರ್ಯದರ್ಶಿಯನ್ನು ನಿಯೋಜನೆ ಮಾಡಿರುವ ಪರಿಣಾಮ ಕೆಲಸವಾಗದ ಸಾರ್ವಜನಿಕರು ಪರದಾಡುವಂತಾಗಿದೆ.
    ಜಿಲ್ಲೆಯಲ್ಲಿ ಮದ್ದೂರು ತಾಲೂಕು ಹೊರತುಪಡಿಸಿ ಉಳಿದ 6 ತಾಲೂಕುಗಳಲ್ಲಿ ಪಿಡಿಒ ಮತ್ತು ಕಾರ್ಯದರ್ಶಿಯನ್ನು ಚೆಕ್‌ಪೋಸ್ಟ್ ಸೇರಿದಂತೆ ಚುನಾವಣೆಯ ವಿವಿಧ ಕರ್ತವ್ಯಗಳಿಗೆ ನಿಯೋಜನೆ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರ ಕೆಲಸ ಮಾಡಲು ಸಾಧ್ಯವಾಗದಂತಾಗಿದೆ. ಅಧಿಕಾರಿಗಳು ಬೆರಳಚ್ಚು ನೀಡದೆ ಯಾವುದೇ ದಾಖಲಾತಿಗಳು ಗ್ರಾಪಂನಲ್ಲಿ ದೊರೆಯುವುದಿಲ್ಲ. ಆದ್ದರಿಂದ ಸಾರ್ವಜನಿಕರು ಗ್ರಾಪಂಗೆ ಬಂದು ಕೆಲಸವಾಗದೇ ವಾಪಸ್ ಹೋಗುವಂತಾಗಿದೆ.
    ಚುನಾವಣೆ ಕರ್ತವ್ಯ ನೆಪವೊಡ್ಡಿ ಅಧಿಕಾರಿಗಳು ಮೂರು ದಿನಕೊಮ್ಮೆ ಬರುತ್ತಾರೆ. ಇದರ ಮಾಹಿತಿ ಇಲ್ಲದೆ ಕಚೇರಿಗೆ ಬರುವ ಸಾರ್ವಜನಿಕರು ಕಾಯುತ್ತಾ ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬರ ಪರಿಸ್ಥಿತಿ ಉಂಟಾಗಿ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಸ್ಥಳೀಯವಾಗಿ ಈ ರೀತಿ ಸಮಸ್ಯೆಗಳನ್ನು ಬಗೆಹರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯತೆ ಇದ್ದು, ಇದರ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಾಗಿದೆ.

    ಪಿಡಿಒ ಮತ್ತು ಕಾರ್ಯದರ್ಶಿ ಇಬ್ಬರನ್ನು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಗ್ರಾಪಂನಲ್ಲಿ ಕೆಲಸಗಳು ನಡೆಯುತ್ತಿಲ್ಲ. ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಈಗ ನೀರಿನ ಸಮಸ್ಯೆ ಕೂಡ ಹೆಚ್ಚುತ್ತಿದ್ದು, ಇದರ ಬಗ್ಗೆ ಗಮನಹರಿಸಲು ಪಿಡಿಒ ಅಗತ್ಯವಿದೆ. ಮೈಸೂರು ಜಿಲ್ಲೆಯಲ್ಲಿ ಪಿಡಿಒ ನಿಯೋಜನೆ ಮಾಡಿಲ್ಲ. ಆದರೆ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ನಿಯೋಜಿಸಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮವಹಿಸಲಿ.
    ರವಿಶಂಕರೇಗೌಡ
    ಗ್ರಾ.ಪಂ ಉಪಾಧ್ಯಕ್ಷ, ಕೆ.ಆರ್.ಸಾಗರ

    ಪಿಡಿಒ, ಕಾರ್ಯದರ್ಶಿಗೆ ಚುನಾವಣಾ ಕರ್ತವ್ಯ: ಗ್ರಾಮ ಪಂಚಾಯಿತಿಯಲ್ಲಿ ಕೇಳೋರಿಲ್ಲ ಸಾರ್ವಜನಿಕರ ಸಮಸ್ಯೆ

    ನಾವು ಚುನಾವಣೆ ಕರ್ತವ್ಯ ನಿರ್ವಹಿಸಲು ಸಿದ್ಧ. ಆದರೆ ಹಗಲು ರಾತ್ರಿ ಚೆಕ್‌ಪೋಸ್ಟ್‌ನಲ್ಲಿ ಕೆಲಸ ನಿರ್ವಹಿಸಿ, ಮತ್ತೆ ಹೇಗೆ ಗ್ರಾ.ಪಂನಲ್ಲಿ ಕರ್ತವ್ಯ ಮಾಡುವುದು. ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆ ಬಗೆಹರಿಸಬೇಕು. ಬೇರೆ ಜಿಲ್ಲೆಯಲ್ಲಿ ಪಿಡಿಒಗಳಿಗೆ ವಿನಾಯಿತಿ ಇದೆ. ನಮ್ಮಲ್ಲಿ ಕೂಡ ಅದೇ ನಿಯಮ ಜಾರಿಯಾಗಬೇಕು.
    ಹೆಸರೇಳಲಿಚ್ಛಿಸದ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts