More

    ಚುನಾವಣಾ ಆಯೋಗದ ಅಧಿಕಾರ ಮೊಟಕು ಬೇಡ; ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸರ್ಕಾರಕ್ಕೆ ಆಗ್ರಹ

    ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾ.ಭಕ್ತವತ್ಸಲ ಆಯೋಗದ ವರದಿ ಅಂಗೀಕರಿಸಿರುವುದು ಸರಿ. ಆದರೆ, ರಾಜ್ಯ ಚುನಾವಣಾ ಆಯೋಗದ ಅಧಿಕಾರ ಮೊಟುಕುಗೊಳಿಸಬಾರದು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಈ ಆಯೋಗ ರಚನೆ ಮಾಡಲಾಗಿತ್ತು. ಸರ್ಕಾರದ ನಿಲುವನ್ನು ಬಹುತೇಕ ಸ್ವಾಗತ ಮಾಡಬಹುದು.

    ರಾಜ್ಯ ಚುನಾವಣಾ ಆಯೋಗದ ಅಧಿಕಾರದಲ್ಲಿ ಸರ್ಕಾರ ವಿನಾಕಾರಣ ಮೂಗು ತೀರಿಸುವ ಕೆಲಸವಾಗಿದೆ. ಇದರಿಂದ ಮೀಸಲಾತಿ ಮತ್ತು ಚುನಾವಣಾ ಪಾರದರ್ಶಕತೆಗೆ ಧಕ್ಕೆ ಒದಗಲಿದೆ. ಹಾಗಾಗಿ ಚುನಾವಣಾ ಆಯೋಗದ ಹಕ್ಕು ಮೊಟಕುಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು ಎಂದು ಹೇಳಿದರು.

    ಹಿಂದುಳಿಗೆ ಸರ್ಕಾರ ಸುರಕ್ಷಿತವಲ್ಲ

    ಶಿವಮೊಗ್ಗದ ರಾಗಿಗುಡ್ಡ ಘಟನೆಯಿಂದ ಹಿಂದೂಗಳಿಗೆ ಸಿದ್ದರಾಮಯ್ಯ ಸರ್ಕಾರ ಸುರಕ್ಷಿತವಲ್ಲ ಎಂಬ ಭಾವನೆ ಬರುತ್ತಿದೆ. ಆಸ್ತಿಪಾಸ್ತಿ ಹಾನಿಗೀಡಾದವರಿಗೆ ಪರಿಹಾರ ನೀಡಿಲ್ಲ. ಈ ಘಟನೆಯನ್ನು ಸಣ್ಣದೆಂದು ಬಿಂಬಿಸಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

    ಕಾಶ್ಮೀರಿ ಪಂಡಿತರ ನೋವು ನೆನಪು

    ರಾಗಿಗುಡ್ಡ ಜನ ನಮಗೆ ಬದುಕಲು ಬಿಡಿ. ನಾವು ಕಲಿಸಿದ ಮಕ್ಕಳೇ ನಮ್ಮ ಮನೆಗೆ ಕಲ್ಲು ಹೊಡೆಯುವ ಸ್ಥಿತಿ ಬಂದಿದೆ. ಕಾಶ್ಮೀರಿ ಪಂಡಿತರ ನೋವನ್ನು ರಾಗಿಗುಡ್ಡದ ಜನ ಅನುಭವಿಸುತ್ತಿದ್ದಾರೆ. ಹಿಂದುಗಳ ಮೇಲೇ ಅಧಿಕಾರದಲ್ಲಿರುವವರು ಆರೋಪ ಮಾಡುತ್ತಾರೆ.

    ವೇಷ ಮರೆಸಿಕೊಂಡು ಬಿಜೆಪಿಯವರು ಈ ಗಲಭೆಗೆ ಕಾರಣರಾಗಿದ್ದಾರೆ ಅಂತಾ ಬಿಂಬಿಸಲಾಗುತ್ತಿದೆ. ಆರೇಳು ಕಾರು ಜಖಂ ಆಗಿವೆ. ಅನೇಕ ಮನೆ ಗಾಜು ಒಡೆದಿದ್ದಾರೆ. ಒಂದೊಂದು ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇಂತ ಪರಿಸ್ಥಿತಿಯಲ್ಲಿ ಸರ್ಕಾರ 75 ಸಾವಿರ ನಷ್ಟವೆಂದು ವರದಿ ತರಿಸಿಕೊಳ್ಳುವ ಮೂಲಕ ಈ ಪ್ರಕರಣವನ್ನು ಸಣ್ಣದೆಂದು ಬಿಂಬಿಸುವ ಪ್ರಯತ್ನ ನಡೆಸಿದೆ ಎಂದರು.

    ನಷ್ಟಕ್ಕೆ ಪರಿಹಾರ ಕೊಡುತ್ತಿಲ್ಲ:

    ನಷ್ಟಕ್ಕೆ ಪರಿಹಾರ ಘೋಷಣೆ ಮಾಡುತ್ತಿಲ್ಲ.ಗೃಹ ಮಂತ್ರಿ ಭೇಟಿ ಕೊಟ್ಟರೂ ಅವರು ರಾಜ್ಯದಲ್ಲೇ ಇಲ್ಲ. ಸಿದ್ದರಾಮಯ್ಯ ತಪ್ಪು ಆಡಳಿತ ಕೊಡುತ್ತಿದ್ದಾರೆ. ನೊಂದವರಿಗೆ ಈ ಸರ್ಕಾರದಲ್ಲಿ ಸ್ಪಂದನೆ ಇಲ್ಲ ಎಂದು ಹೇಳಿದರು.

    ಶಾಸಕ ಎಸ್.ಟಿ. ಸೋಮಶೇಖರ್ ಅಸಮಾಧಾನದ ಮಾತು ಕೇಳಿದ್ದೇನೆ. ಅವರ ಅಸಮಾಧಾನ ವಿಚಾರಗಳ ಬಗ್ಗೆ ಎಲ್ಲಿ ಚರ್ಚೆ ಆಗಬೇಕೋ ಅಲ್ಲಿ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts