More

    ಚುನಾವಣಾ ಅಫಿಡವಿಟ್ ಸಮರ್ಪಕವಾಗಿರಲಿ

    ಮಸ್ಕಿ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವಾಗ ಚುನಾವಣೆ ಆಯೋಗದ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಚುನಾವಣಾ ಅಧಿಕಾರಿ ಆರ್.ದೇವಿಕಾ ಹೇಳಿದರು.

    ಪಟ್ಟಣದ ತಾಪಂ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ರ‌್ಯಾಲಿ ಹಾಗೂ ಜನ ಸೇರಿಸಲು ಚುನಾವಣೆ ಅಧಿಕಾರಿಗಳಿಂದ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅಭ್ಯಥಿಗಳು ಏ.13ರೊಳಗೆ ಅನುಮತಿ ಪಡೆದುಕೊಳ್ಳಬೇಕು. ಅಭ್ಯರ್ಥಿಗಳು ನಾಮಪತ್ರದೊಂದಿಗೆ ಅಫಿಡವಿಟ್ ಸಲ್ಲಿಸುವ ಸಮಯದಲ್ಲಿ ಅಗತ್ಯವಿರುವ ಮಾಹಿತಿಯನ್ನು ಸಂಪೂರ್ಣವಾಗಿ ಸಲ್ಲಿಸಬೇಕು ಎಂದರು.

    ಅಫಿಡವಿಟ್‌ನಲ್ಲಿ ಕಾಲಂಗಳನ್ನು ಖಾಲಿ ಬಿಟ್ಟರೆ, ಪರಿಶೀಲನೆ ಸಮಯದಲ್ಲಿ ಮಾಹಿತಿ ಕೊರತೆ ಇದ್ದರೆ ನಾಮಪತ್ರ ತಿರಸ್ಕರಿಸಲಾಗುವುದು. ಆದ್ದರಿಂದ ಸಂಪೂರ್ಣ ಮಾಹಿತಿಯೊಂದಿಗೆ ನಾಮಪತ್ರ ಸಲ್ಲಿಸಬೇಕೆಕು. ಅಭ್ಯರ್ಥಿಗಳು ಅಧಿಕೃತವಾಗಿ ನಾಮಪತ್ರಗಳನ್ನು ಸಲ್ಲಿಸಿದ ನಂತರ ಚುನಾವಣೆ ಪ್ರಚಾರಕ್ಕೆ ಒಬ್ಬ ಅಭ್ಯರ್ಥಿಗೆ 3 ವಾಹನಗಳ ಬಳಕೆಗೆ ಅವಕಾಶವಿರುತ್ತದೆ. ಪ್ರಚಾರ ಕರಪತ್ರ ಹಂಚಲು, ರ‌್ಯಾಲಿ, ಸಭೆ, ಸಮಾರಂಭಗಳನ್ನು ನಡೆಸಲು ಎಸ್‌ಎಫ್‌ಟಿ ತಂಡದಿಂದ ಇಂತಿಷ್ಟು ಸಮಯದವರೆಗೆ ಎಂದು ಅನುಮತಿ ಪಡೆದುಕೊಳ್ಳಬೇಕು ಎಂದರು. ಒಂದು ವೇಳೆ ಅನುಮತಿ ಪಡೆಯದಿದ್ದರೆ ಅಂತಹವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು. ಎಆರ್‌ಒ ಅರಮನೆ ಸುಧಾ, ಅಧಿಕಾರಿಗಳಾದ ಅರುಣಕುಮಾರ, ರಮೇಶ ಸಳ್ಳೇದ್, ಬಸನಗೌಡ ಮುದಬಾಳ, ಮಲ್ಲಿಕಾರ್ಜುನ ಭಾವಿಕಟ್ಟಿ, ಬಸವರಾಜ ಕಡಬೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts