More

    ಶಾಲೆಗಳಿಗೆ ಸೌಕರ್ಯ ಕಲ್ಪಿಸಲು ಪ್ರಯತ್ನ

    ಶಿಗ್ಲಿ: ಶಾಲೆಗಳು ದೇವಸ್ಥಾನವಿದ್ದಂತೆ. ಮಕ್ಕಳು ಜ್ಞಾನ ದೇಗುಲಕ್ಕೆ ಕೈಮುಗಿದು ಒಳಗೆ ಬರಬೇಕು. ಶಿಕ್ಷಕರು ಹೇಳುವ ವಿಷಯಗಳನ್ನು ಗಮನವಿಟ್ಟು ಆಲಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಶಾಸಕ ಡಾ. ಚಂದು ಲಮಾಣಿ ಹೇಳಿದರು.

    ಶಿಗ್ಲಿ ಗ್ರಾಮದ ಎಸ್. ಎಸ್. ಕೂಡ್ಲುಮಠ ಶಾಲೆಯಲ್ಲಿ ಶಾಲಾ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕುಗಳಲ್ಲಿನ ಬಹಳಷ್ಟು ಶಾಲೆಗಳಲ್ಲಿ ಶೌಚಗೃಹ, ಶುದ್ಧ ಕುಡಿಯುವ ನೀರು, ಕೆಲವು ಮಕ್ಕಳಿಗೆ ಆಟವಾಡುವ ಕ್ರೀಡಾಂಗಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಸರ್ಕಾರದಿಂದ ಅನುದಾನ ತಂದು ಇಂತಹ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

    ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಅಧ್ಯಕ್ಷ ಎನ್.ಸಿ. ಹುನಗುಂದ, ಉಪಾಧ್ಯಕ್ಷ ಸೋಮಣ್ಣ ಡಾಣಗಲ್, ಎಸ್.ಪಿ. ಬಳಿಗಾರ, ಫಕೀರೇಶಪ್ಪ ಕಾಳಪ್ಪನವರ, ಎಚ್.ಎಫ್. ತಳವಾರ, ವೀರಣ್ಣ ಅಕ್ಕೂರ, ಸಿ.ಎಂ. ರಾಗಿ, ಡಿ.ವೈ. ಹುನಗುಂದ, ಮುದಕಣ್ಣ ಗಾಡದ, ಶಂಭು ಹುನಗುಂದ, ಸಿದ್ಧರಾಮಪ್ಪ ಪವಾಡದ, ಎಸ್.ಎನ್. ಕಳ್ಳಿಹಾಳ, ಈರಣ್ಣಾ ಅಳ್ಳಳ್ಳಿ, ಬಸಣ್ಣಾ ಕಳಸದ, ಮುಖ್ಯ ಶಿಕ್ಷಕ ಸಿ.ಬಿ. ಮೊಗಲಿ, ಎಲ್.ಪಿ. ಲಮಾಣಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts