More

    ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?

    ನವದೆಹಲಿ: ಇತ್ತೀಚೆಗೆ ಕೆಲ ದಿನಗಳಿಂದ ಸೌರ ಮಾರುತ ಬಂದು ಮೊಬೈಲ್‍ ನೆಟ್ವರ್ಕ್‍ಗೆ ಸಮಸ್ಯೆ ಆಗಲಿದೆ, ಉಪಗ್ರಹಳಿಗೆ ಸಮಸ್ಯೆಯಾಗಲಿದೆ ಎನ್ನುವಂತಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಹಾಗಾದರೆ ಸೌರ ಮಾರುತ ಎಂದರೇನು? ಅವು ಭೂಮಿಯ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ? ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಸುದ್ದಿಗಳ ಅಸಲಿಯತ್ತು ಏನು? ಈ ಕುರಿತಾದ ಮಾಹಿತಿ ಇಲ್ಲಿದೆ.

    ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?

    ಇಂದು (ಜು.15) ಮತ್ತು ನಾಳೆ (ಜು.16) ಸಿಎಂಇ ಮೋಡಗಳು ಭೂಮಿಗೆ ಅಪ್ಪಳಿಸಲಿವೆ ಎಂದು ನಾಸಾ ಭವಿಷ್ಯ ನುಡಿದಿದೆ. ಇದು ಉತ್ತರ ಧ್ರುವದ ಬಳಿ ವರ್ಣರಂಜಿತ ಅರೋರಾಗಳ ರಚನೆಗೆ ಕಾರಣವಾಗಲಿದೆ. ಇದನ್ನು ಅಮೆರಿಕದ 17 ರಾಜ್ಯಗಳಲ್ಲಿ ಕಾಣಬಹುದು. ಆದರೆ… ಸೌರ ಮಾರುತಗಳು ಸಂವಹನ ಮತ್ತು ಇಂಟರ್ನೆಟ್ ವ್ಯವಸ್ಥೆಯನ್ನು ಹಾನಿಗೊಳಿಸಬಹುದು ಎನ್ನುವ ಆತಂಕ ಜನರಲ್ಲಿದೆ.

    ಏನಿದು ಕೊರೋನಲ್ ಮಾಸ್ ಇಜೆಕ್ಷನ್‍?

    ಸೌರ ಮಾರುತಗಳು ಸೂರ್ಯನ ಮೇಲ್ಮೈನಿಂದ ಹುಟ್ಟಿ ಸೌರ ಮಂಡಲದಾದ್ಯಂತ ಹಾದು ಹೋಗುತ್ತವೆ. ಅವುಗಳ ಪರಿಣಾಮವು ಭೂಮಿಯ ವಾತಾವರಣದಲ್ಲಿಯೂ ಗೋಚರಿಸುತ್ತದೆ. ಬಲವಾದ ಸೌರ ಮಾರುತವು ಸೂರ್ಯನ ಮೇಲ್ಮೈಯಿಂದ ಪುಟಿದೇಳುತ್ತದೆ. ಇದನ್ನು ಕೊರೊನಾಲ್ ಮಾಸ್ ಇಜೆಕ್ಷನ್ (ಸಿಎಂಇ) ಎಂದು ಕರೆಯಲಾಗುತ್ತದೆ. ಈ ಸೌರ ಬಿರುಗಾಳಿಗಳು ಗಂಟೆಗೆ ಕೆಲವು ಮಿಲಿಯನ್ ಮೈಲುಗಳ ವೇಗದಲ್ಲಿ ಚಲಿಸಬಲ್ಲವು.

    ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?

    11 ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಘಟನೆ…

    ಸೌರ ಮಾರುತಗಳು ಸಾಕಷ್ಟು ಶಕ್ತಿಯನ್ನು ಹಾಗೆಯೇ ವಿಕಿರಣವನ್ನೂ ಬಿಡುಗಡೆ ಮಾಡುತ್ತವೆ.. ಈ ಬಿರುಗಾಳಿಗಳು ಕೆಲವೊಮ್ಮೆ ಶತಕೋಟಿ ಪರಮಾಣು ಬಾಂಬ್‍ಗಳಷ್ಟು ಶಕ್ತಿಯನ್ನು ಹೊಂದಿರುತ್ತವೆ. ಸೌರ ಮಾರುತಗಳು ಪ್ರತಿ 11 ವರ್ಷಗಳಿಗೊಮ್ಮೆ ಸಂಭವಿಸುತ್ತವೆ. ಕೆಲವೊಮ್ಮೆ ಅವು ದಿನದಲ್ಲೂ ಕಂಡು ಬರುತ್ತವೆ.

    ಸೌರ ಮಾರುತಗಳು ಹುಟ್ಟುವುದು ಹೇಗೆ?

    ಸೂರ್ಯನ ಮೇಲ್ಮೈಯನ್ನು ಕೊರೊನಾ ಎಂದು ಕರೆಯಲಾಗುತ್ತದೆ. ಇದು ಶಕ್ತಿಯುತ ಕಾಂತೀಯ ಕ್ಷೇತ್ರಗಳನ್ನು ಒಳಗೊಂಡಿದೆ. ಕೆಲವೊಮ್ಮೆ ಅವು ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಇದನ್ನು CME ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಭಾರಿ ಸ್ಫೋಟಗಳು ಸಂಭವಿಸುತ್ತವೆ. ಅವು ಶತಕೋಟಿ ಟನ್ ತೂಕದ ದ್ರವ್ಯವನ್ನು ಅಂತರಿಕ್ಷಕ್ಕೆ ಚಿಮ್ಮಿಸುತ್ತವೆ. ಈ ದ್ರವ್ಯ ಕೆಲವೊಮ್ಮೆ ಒಂದು ಗಂಟೆಯಲ್ಲಿ ಕೆಲವು ಮಿಲಿಯನ್ ಮೈಲುಗಳ ವೇಗದಲ್ಲಿ ಸಂಚರಿಸುತ್ತವೆ. ಅದನ್ನೇ ಸೌರ ಮಾರುತ ಎನ್ನುವುದು. ಈ ಬಿಸಿ ಬಿರುಗಾಳಿಗಳು ಸೌರವ್ಯೂಹದಲ್ಲಿ ಪ್ರಯಾಣ ಮಾಡುವಾಗ ಗ್ರಹಗಳು ಮತ್ತು ಅವುಗಳ ಚಂದ್ರರೊಂದಿಗೆ ಡಿಕ್ಕಿ ಹೊಡೆಯಬಹುದು.

    ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?

    ಸೌರ ಬಿರುಗಾಳಿಗಳು ಭೂಮಿಯ ಉತ್ತರ ಧ್ರುವದ ಬಳಿ ಅರೋರಾಗಳು ರೂಪುಗೊಳ್ಳಲು ಕಾರಣವಾಗುತ್ತವೆ. ಈ ವರ್ಣರಂಜಿತ ಆಕಾಶವು ಸೌರ ಮಾರುತದ ಭಾಗವಾಗಿದ್ದ ಒಂದಷ್ಟು ದ್ರವ್ಯರಾಶಿ ಭೂಮಿಯ ವಾತಾವರಣಕ್ಕೆ ಬಂದಾಗ ಕಾಣಿಸಿಕೊಳ್ಳುತ್ತದೆ. ಆಗ ಆಕಾಶದಲ್ಲಿ ಹೆಚ್ಚಿನ ಹಸಿರು ಬೆಳಕು ಗೋಚರಿಸುತ್ತದೆ. ಅವು ಆಕಾಶದಲ್ಲಿ ಕೆಲವು ಸಾವಿರ ಕಿಲೋಮೀಟರ್ ದೂರದವರೆಗೆ ವಿಸ್ತರಿಸುತ್ತವೆ.

    ಸೌರಮಾರುತದ ಪರಿಣಾಮಗಳೇನು?

    ಸೌರ ಬಿರುಗಾಳಿಗಳು ಭೂಮಿಯ ಮೇಲೆ ವಿಕಿರಣವನ್ನು ಹೆಚ್ಚಿಸಿವೆ. ರೇಡಿಯೋ ಸಂವಹನಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಉಪಗ್ರಹ ಮತ್ತು ಜಿಪಿಎಸ್ ಸಂಕೇತಗಳು ಹಾನಿಗೊಳಗಾಗಬಹುದಾಗಿದ್ದು ಉಪಗ್ರಹಗಳ ಕಕ್ಷೆಯೂ ಬದಲಾಗಬಹುದು. ಆದರೆ ಆ ಪ್ರಮಾಣದಲ್ಲಿ ಹಾನಿ ಆಗಲು ಸೌರ ಮಾರುತವೂ ಅಷ್ಟೇ ಪ್ರಮಾಣದಲ್ಲಿ ಬಲಶಾಲಿ ಆಗಿರಬೇಕಾಗುತ್ತದೆ.

    ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?

    ಸೌರ ಬಿರುಗಾಳಿಗಳು ಭೂಮಿಯ ಮೇಲೆ ವಿಕಿರಣವನ್ನು ಹೆಚ್ಚಿಸಿವೆ. ಅವುಗಳಿಂದ ವಿದ್ಯುತ್ ಮಾರ್ಗಗಳು ಹಾನಿಗೊಳಗಾಗಬಹುದಾಗಿದ್ದು ವಿದ್ಯುತ್ ಸರಬರಾಜನ್ನು ಕಡಿತಗೊಳಿಸಬಹುದು. ಇದು ನಾಸಾ ಗಗನಯಾತ್ರಿಗಳು, ಅಂತರಿಕ್ಷದಲ್ಲಿರುವ ಸಿಬ್ಬಂದಿ ಮತ್ತು ಎತ್ತರದ ವಿಮಾನಗಳಲ್ಲಿನ ಹಾರಾಡುವ ಪ್ರಯಾಣಿಕರಿಗೆ ಅಪಾಯಕಾರಿಯಾಗಿದೆ.

    ಹಿಂದೆ ಸೌರ ಮಾರುತದಿಂದ ಹಾನಿ ಆಗಿತ್ತೆ?

    ಈ ಹಿಂದೆ ಸೌರ ಮಾರುತಗಳು ಭೂಮಿಗೆ ಅಪ್ಪಳಿಸಿದ್ದರಿಂದ ಭೂಮಿಯಲ್ಲಿನ ಸಂವಹನ ವ್ಯವಸ್ಥೆ ತೊಂದರೆಗೆ ಈಡಾಗಿತ್ತು. ಅಂತಹ ಘಟನೆ 1859ರಲ್ಲಿ ನಡೆದಿತ್ತು. ಆಗ ಟೆಲಿಗ್ರಾಫ್ ವ್ಯವಸ್ಥೆಗಳು ಸುಟ್ಟುಹೋದವು. ಅರೋರಾಗಳು ದಕ್ಷಿಣ ಕೆರಿಬಿಯನ್ ವರೆಗೂ ಕಂಡುಬಂದಿದ್ದವು.

    ಮೇ 1921ರಲ್ಲಿ, ಸೌರ ಚಂಡಮಾರುತವು ಟೆಲಿಗ್ರಾಫ್ ಮತ್ತು ವಿದ್ಯುತ್ ವೈಫಲ್ಯಗಳಿಗೆ ಕಾರಣವಾಗಿತ್ತು. ಇದು 20 ನೇ ಶತಮಾನದ ಅತ್ಯಂತ ಶಕ್ತಿಶಾಲಿ ಸೌರ ಚಂಡಮಾರುತವಾಗಿತ್ತು. ಮಾರ್ಚ್ 1989ರಲ್ಲಿ, ಸೌರ ಮಾರುತವು ಅಪ್ಪಳಿಸಿದಾಗ ಕೆನಡಾದ ಕ್ವಿಬೆಕ್ನಲ್ಲಿ 9 ಗಂಟೆಗಳ ಕಾಲ ವಿದ್ಯುತ್ ಸರಬರಾಜನ್ನು ಕಡಿತಗೊಂಡಿತ್ತು. ಅದೇ ವೇಳೆ ಅಮೆರಿಕದಲ್ಲಿ ಟ್ರಾನ್ಸ್ಫಾರ್ಮರ್ಗಳು ಸಹ ಹಾನಿಗೊಳಗಾಗಿದ್ದವು.

    ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?

    2003ರಲ್ಲಿ ಹ್ಯಾಲೋವೀನ್ ಸೌರ ಬಿರುಗಾಳಿಗಳು ಫ್ಲೋರಿಡಾ ಮತ್ತು ಟೆಕ್ಸಾಸ್ನಲ್ಲಿ ವರ್ಣರಂಜಿತ ಅರೋರಾಗಳಿಗೆ ಕಾರಣವಾದವು. ಅದರಿಂದಾಗಿ ಉಪಗ್ರಹಗಳು ಹಾನಿಗೊಳಗಾಗಿದ್ದವು. ಆ ಸಂದರ್ಭ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ವಿಕಿರಣದಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಿದ್ದರು.

    ಏನಿದು ಸೌರ ಮಾರುತ? ಅದರ ರೇಡಿಯೇಷನ್‍ನಿಂದ ಸಮಸ್ಯೆ ಆಗುವುದು ನಿಜವೇ?

    ಜುಲೈ 2012ರಲ್ಲಿ, ಬೃಹತ್ ಸೌರ ಬಿರುಗಾಳಿ ಇತ್ತು. ಭೂಮಿಯು ಅದರಿಂದ ತಪ್ಪಿಸಿಕೊಂಡಿತು. ಅದು ಭೂಮಿಗೆ ಅಪ್ಪಳಿಸಿದ್ದರೆ. ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಗಳು ಉಂಟಾಗುವ ನಿರೀಕ್ಷೆಯಿತ್ತು. ಹೀಗಾಗಿ ಈ ಬಾರಿ ಅಪ್ಪಳಿಸಲಿರುವ ಸೌರ ಮಾರುತದಿಂದಾಗಿ ಸಂವಹನದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗುತ್ತಿಲ್ಲ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts