More

    ಶಿಥಿಲಾವಸ್ಥೆಯ ಕಟ್ಟಡದಲ್ಲೇ ಮಕ್ಕಳಿಗೆ ಶಿಕ್ಷಣ

    ಚಿದಾನಂದ ಮಾಣೆ ರಟ್ಟಿಹಳ್ಳಿ

    ಪಟ್ಟಣದ ಮೌಲಾನಾ ಆಜಾದ್ ಮಾದರಿ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಆತಂಕದಲ್ಲೇ ಪಾಠ ಕೇಳುವಂತಾಗಿದೆ. ಹೊಸ ಕಟ್ಟಡ ನಿರ್ವಣಕ್ಕೆ ಮೂರು ವರ್ಷಗಳ ಹಿಂದೆಯೇ 50 ಲಕ್ಷ ರೂ. ಮಂಜೂರಾಗಿದ್ದರೂ ನಿವೇಶನ ಹುಡುಕುವ ನೆಪದಲ್ಲಿ ಕಾಲಹರಣ ಮಾಡಲಾಗುತ್ತಿದೆ.

    ಮೌಲಾನಾ ಆಜಾದ್ ಮಾದರಿ ಶಾಲೆ ಪಟ್ಟಣದಲ್ಲಿ 2018-19ರಂದು ಆರಂಭವಾಗಿದೆ. ಈ ಶಾಲೆಯಲ್ಲಿ ಶೇ. 75ರಷ್ಟು ಅಲ್ಪಸಂಖ್ಯಾತ ಮಕ್ಕಳು ಮತ್ತು ಶೇ. 25ರಷ್ಟು ಇತರೆ ವರ್ಗದ ವಿದ್ಯಾರ್ಥಿಗಳು 6ರಿಂದ 10ನೇ ತರಗತಿಯವರೆಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಪ್ರಾರಂಭದಲ್ಲಿ ಈ ಶಾಲೆಯು ಪಟ್ಟಣದ ಅಂಜುಮನ್-ಎ-ಇಸ್ಲಾಂ ಕಮಿಟಿಯ ಆಂಗ್ಲೋ ಉರ್ದು ಪ್ರೌಢ ಶಾಲೆಯಲ್ಲಿ ಆರಂಭಿಸಲಾಗಿತ್ತು. ಪ್ರಸ್ತುತ ಅಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

    ಶಾಲೆಯಲ್ಲಿ 250 ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೂ ಸುಸಜ್ಜಿತ ಕಟ್ಟಡ ನಿರ್ವಿುಸದಿರುವುದು ವಿಪರ್ಯಾಸ ಎಂದು ಶಿಕ್ಷಣ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಶಾಲಾ ಕೊಠಡಿಯ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಮೇಲ್ಛಾವಣಿಯ ಹೆಂಚುಗಳು ಒಡೆದು ಹೋಗಿವೆ. ಮಳೆಗಾಲದಲ್ಲಿ ಎಲ್ಲ ಕೊಠಡಿಗಳಲ್ಲೂ ನೀರು ಸೋರುತ್ತವೆ. ಯಾವಾಗ ಕಟ್ಟಡ ಕುಸಿದು ಬೀಳುವುದೋ ಎನ್ನುವ ಆತಂಕದಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ. ಹೆಂಚು ಕಳಚಿ ಮಕ್ಕಳ ಮೇಲೆ ಬಿದ್ದರೆ ಯಾರು ಜವಾಬ್ದಾರರು ? ಇಂಥ ಅಪಾಯದ ಸ್ಥಿತಿಯಲ್ಲಿ ಶಿಕ್ಷಣ ನೀಡುವುದು ಶಿಕ್ಷಕರಿಗೂ ಸಮಸ್ಯೆಯಾಗಿದೆ. ಕೊಠಡಿಗಳ ಕೊರತೆ ಇರುವುದರಿಂದ ಪಕ್ಕದಲ್ಲಿನ ಅಪೂರ್ಣವಾಗಿರುವ ಕಟ್ಟಡದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವ್ಯಾಪ್ತಿಯಲ್ಲಿ ಒಟ್ಟು 6 ಎಕರೆ 15 ಗುಂಟೆ ಭೂಮಿ ಇದ್ದು, ಇದರಲ್ಲಿ 1 ಎಕರೆಯನ್ನು ಮೌಲಾನಾ ಆಜಾದ್ ಶಾಲೆಗೆ ನೀಡುವ ಕುರಿತು 2018ರಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ಎಲ್ಲ ಸದಸ್ಯರು ಒಮ್ಮತದಿಂದ ಠರಾವು ಮಾಡಿದ್ದಾರೆ. ಆದರೆ, ಈ ಠರಾವಿಗೆ ಬೆಂಗಳೂರಿನ ಪಿ.ಯು. ಬೋರ್ಡ್ ಮಂಡಳಿ ಸ್ಪಂದಿಸದೇ ಇರುವುದರಿಂದ ಜಮೀನು ನೀಡಿಕೆ ನನೆಗುದ್ದಿಗೆ ಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts