More

    1 ರಿಂದ 9ನೇ ತರಗತಿ ಫಲಿತಾಂಶ : ಸಾಟ್ಸ್​​ ಅಪ್​ಲೋಡ್​ಗೆ ಕಾಲಾವಕಾಶ

    ಬೆಂಗಳೂರು : 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಫಲಿತಾಂಶವನ್ನು ಸ್ಟೂಡೆಂಟ್​ ಅಚೀವ್​ಮೆಂಟ್​ ಟ್ರಾಕಿಂಗ್​ ಸಿಸ್ಟಂ(ಎಸ್​ಎಟಿಎಸ್​) ಮೂಲಕ ಅಪ್​ಲೋಡ್​ ಮಾಡಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ರಾಜ್ಯ ಶಿಕ್ಷಣ ಇಲಾಖೆ ವಿಸ್ತರಿಸಿದೆ.

    ರಾಜ್ಯದಲ್ಲಿ ಸೆಮಿಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಶಿಕ್ಷಕರು ಕಚೇರಿಗೆ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಾದ ಎಸ್​ಎಟಿಎಸ್​ನಲ್ಲಿ ಅಪ್​ಲೋಡ್​ ಮಾಡುವುದು ಕಷ್ಟವೆಂದು ಹೇಳಿ ದಿನಾಂಕವನ್ನು ವಿಸ್ತರಿಸಬೇಕೆಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರುಪ್ಸಾ, ಕರ್ನಾಟಕ) ಇಲಾಖೆಯನ್ನು ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಇಲಾಖೆಯು, ರಾಜ್ಯದಲ್ಲಿ ಲಾಕ್​ಡೌನ್​ ಮುಗಿದ ಮೂರು ದಿನಗಳೊಳಗೆ ಅಪ್​ಲೋಡ್​ ಮಾಡಲು ಅವಕಾಶ ನೀಡಿದೆ. ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಈ ಬಗ್ಗೆ ಸೂಚನೆ ನೀಡಿದೆ.

    ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

    ಕೇಂದ್ರ ನೀಡಿರುವ ವೆಂಟಿಲೇಟರ್​ಗಳ ಆಡಿಟ್​ : ಪ್ರಧಾನಿ ಮೋದಿ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts