More

    ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ; ಟಿಎಂಸಿ, ಎನ್​ಸಿಪಿ, ಸಿಪಿಐಗೆ ಮುಖಭಂಗ

    ನವದೆಹಲಿ: ರಾಷ್ಟ್ರೀಯ ಚುನಾವಣಾ ಆಯೋಗವು ಸೋಮವಾರ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದ್ದು ಟಿಎಂಸಿ, ಎನ್​​ಸಿಪಿ, ಸಿಪಿಐಗೆ ನೀಡಿದ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹಿಂಪಡೆದಿದೆ.

    ಸೋಮವಾರ ಈ ಕುರಿತು ಆದೇಶ ಹೊರಡಿಸಿರುವ ಚುನಾವಣಾ ಆಯೋಗವು ರಾಷ್ಟ್ರೀಯ ಲೋಕದಳ, ಭಾರತ ರಾಷ್ಟ್ರ ಸಮಿತಿ, ಮಣಿಪುರದ ಪಿಡಿಎ, ಪುದುಚ್ಚೆರಿಯ ಪಿಎಂಕೆ, ಪಶ್ಚಿಮ ಬಂಗಾಳದ ಆರ್​ಎಸ್​ಪಿ, ಮಿಜೋರಾಂನ ಎಂಪಿಸಿ ಪಕ್ಷಗಳಿಗೆ ನೀಡಿದ್ದ ಪ್ರಾದೇಶಿಕ ಪಕ್ಷಗಳ ಸ್ಥಾನಮಾನವನ್ನು ಹಿಂಪಡೆದಿದೆ.

    ಎಎಪಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ

    ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷವು ದೆಹಲಿ, ಗೋವಾ, ಪಂಜಾಬ್​ ಹಾಗೂ ಗುಜರಾತ್​ನಲ್ಲಿ ಮಾಡಿದ ಚುನಾವಣಾ ಸಾಧನೆಯ ಮೇರೆಗೆ ಅವರ ಪಕ್ಷಕ್ಕೆ ಆಯೋಗವು ರಾಷ್ಟ್ರೀಯ ಸ್ಥಾನಮಾನವನ್ನು ನೀಡಿದೆ.

    ಇದನ್ನೂ ಓದಿ: ವಿವಿ ಪುರ-ಜಯನಗರ ಪೊಲೀಸರ ಜಂಟಿ ಕಾರ್ಯಾಚರಣೆ; 8.52 ಕೋಟಿ ರೂ. ಮೌಲ್ಯದ ಡ್ರಗ್ಸ್​ ಜಪ್ತಿ

    ವಿಪಕ್ಷಗಳಿಗೆ ಶಾಕ್​ ನೀಡಿದ ಆಯೋಗ

    ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಹರಿಹಾಯುತ್ತ ಬಂದಿದ್ದ ವಿಪಕ್ಷಗಳಾದ ಟಿಎಂಸಿ, ಎನ್​ಸಿಪಿ, ಸಿಪಿಐ ಪಕ್ಷಗಳಿಗೆ ನೀಡಲಾಗಿದ್ದ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನವನ್ನು ಹಿಂಪಡೆದಿರುವ ಚುಣಾವಣಾ ಆಯೋಗವು ಪ್ರಾದೇಶಿಕ ಪಕ್ಷದ ಸ್ಥಾನಮಾನ ನೀಡಿದೆ.

    ಉತ್ತರಪ್ರದೇಶದ ರಾಷ್ಟ್ರೀಯ ಲೋಕದಳ, ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್​ ನೇತೃತ್ವದ ಬಿಆರ್​ಎಸ್​ ಪಕ್ಷಕ್ಕೆ ಆಂಧ್ರಪ್ರದೇಶದಲ್ಲಿ ನೀಡಲಾಗಿದ್ದ ಪ್ರಾದೇಶಿಕ ಪಕ್ಷದ ಸ್ಥಾನಮಾನವನ್ನು ಆಯೋಗ ಹಿಂಪಡೆದಿದೆ.

    ಚುನಾವಣಾ ಆಯೋಗ ಸ್ಪಷ್ಟನೆ

    ಈ ಕುರಿತು ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗವು ನಾಗಾಲ್ಯಾಂಡ್​ ಹಾಗೂ ಮೇಘಾಲಯದಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಪಡೆದ ಮತಗಳ ಆಧಾರದ ಮೇಲೆ ಎನ್​ಸಿಪಿ-ಟಿಎಂಸಿ ಪಕ್ಷಗಳನ್ನು ಅಲ್ಲಿನ ಪ್ರಾದೇಶಿಕ ಪಕ್ಷಗಳ ಸ್ಥಾನಮಾನ ನೀಡಲಾಗಿದೆ.

    ಬಿಜೆಪಿ, ಕಾಂಗ್ರೆಸ್​, ಎಎಪಿ, ಬಿಎಸ್​ಪಿ, ಎನ್​ಪಿಪಿ, ಸಿಪಿಐ(ಎಂ) ಪಕ್ಷಗಳು ರಾಷ್ಟ್ರೀಯ ಪಕ್ಷಗಳಾಗಿ ಉಳಿಯಲಿವೆ ಎಂದು ರಾಷ್ಟ್ರೀಯ ಚುನಾವಣಾ ಆಯೋಗ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts