More

    ವಿಜ್ಞಾನಿಗಳಿಂದಷ್ಟೇ ಅಲ್ಲ, ಕಾಲಜ್ಞಾನದಲ್ಲೂ ಭೂಕಂಪದ ಎಚ್ಚರಿಕೆ; ದೇಶಕ್ಕೆ ಕಾದಿದ್ಯಾ ಭಾರಿ ಗಂಡಾಂತರ?

    ವಿಜಯಪುರ: ಭಾರತದಲ್ಲಿ ಸದ್ಯದಲ್ಲೇ ಭೂಕಂಪ ಸಂಭವಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಾಲಜ್ಞಾನದಲ್ಲೂ ಭೂಕಂಪದ ಎಚ್ಚರಿಕೆ ಕಂಡುಬಂದಿದೆ. ಪರಿಣಾಮವಾಗಿ ದೇಶಕ್ಕೆ ಭಾರಿ ಗಂಡಾಂತರ ಕಾದಿದೆಯಾ ಎಂಬ ಆತಂಕವೂ ಕಾಡಲಾರಂಭಿಸಿದೆ.

    ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಮಠದಲ್ಲಿ ಪ್ರತಿ ಶಿವರಾತ್ರಿಯ ಬಳಿಕ ನುಡಿಯಲಾಗುವ ಕಾಲಜ್ಞಾನ ಭವಿಷ್ಯ ಪ್ರಸಿದ್ಧಿ ಪಡೆದಿದ್ದು, ಈ ಸಲದ ಕಾಲಜ್ಞಾನದಲ್ಲಿ ಭೂಕಂಪದ ಎಚ್ಚರಿಕೆ ಇದೆ. ಬಬಲಾದಿ ಮಠದ ಸ್ವಾಮೀಜಿ ಸಿದ್ರಾಮಯ್ಯ ಹೊಳಿಮಠ ಬಬಲಾದಿ ಮಠದ ಕಾಲಜ್ಞಾನ 2023ರ ಭವಿಷ್ಯ ನುಡಿದಿದ್ದಾರೆ.

    ಭೂಮಿ ಕುಪ್ಪಳಿಸೀತು…

    ಅಲ್ಲಲ್ಲಿ.. ಮೂಲೆಗಳಲ್ಲಿ ಭೂಮಿ ಕುಪ್ಪಳಿಸೀತೋ ಮಕ್ಕಳಿರ್ಯಾ ಎಂದು ಭವಿಷ್ಯ ನುಡಿದಿರುವ ಅವರು ಭೂಕಂಪ ಸಂಭವಿಸುವ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ. ಸಜ್ಜನರು ಕೂಡ ದುರ್ಜನರು ಆಗುತ್ತಾರೆ, ನಮ್ಮ ನಮ್ಮಲ್ಲಿ ಜಗಳ ಹೊಡೆದಾಟಗಳೂ ಆಗಲಿವೆ ಎಂದಿರುವ ಅವರು ಜಲಪ್ರಳಯದ ಎಚ್ಚರಿಕೆಯನ್ನೂ ನೀಡಿ ಇನ್ನೊಂದು ಸೂತಕದ ಛಾಯೆ ಐತಿ ಎಂದಿದ್ದಾರೆ.

    ಜಲಪ್ರಳಯ ಸಂಭವ..

    ಯಾವುದೋ ಒಂದು ದಿಕ್ಕಿನಲ್ಲಿ ಜಲ ಪ್ರಳಯವಾಗಲಿದೆ ಎಂದ ಸಿದ್ರಾಮಯ್ಯ ಸ್ವಾಮೀಜಿ, ಕೆಲವೊಂದು ಕಡೆ ಭೂಮಿ ಕುಪ್ಪಳಿಸಲಿದೆ ಎಂದಿದ್ದಾರೆ. ಮಾತ್ರವಲ್ಲ, ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆಗಳು ಹೆಚ್ಚಲಿವೆ, ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ತಿರುವು ಉಂಟಾಗಲಿದೆ ಎಂದೂ ಹೇಳಿದ್ದಾರೆ.

    ಇದನ್ನೂ ಓದಿ: ಭಾರತದಲ್ಲೂ ಶೀಘ್ರದಲ್ಲೇ ಭಾರಿ ಭೂಕಂಪ ಸಾಧ್ಯತೆ!; ತಜ್ಞರ ಎಚ್ಚರಿಕೆ

    ತಂದೆ-ತಾಯಿಯರ ಮೇಲೆ ಪ್ರೀತಿ ಹೆಚ್ಚಳ..

    ಪ್ರಜೆಗಳಲ್ಲಿ ಏರುಪೇರು, ಆಳುವ ಪ್ರಭುಗಳಿಗೆ ಸುಭಿಕ್ಷೆ ಇದೆ. ಜಾತಿ-ಮತ, ಬೇಧ-ಭಾವಕ್ಕೆ ಹೆಚ್ಚಿನ ಒಲವಿರಲಿದೆ. ಮಕ್ಕಳಿಗೆ ತಂದೆ-ತಾಯಿ ಮೇಲೆ ಹೆಚ್ಚಿನ ಪ್ರೀತಿ ಉಂಟಾಗಲಿದೆ. ಇದರಿಂದ ವೃದ್ಧಾಶ್ರಮ ಕಡಿಮೆಯಾಗಲಿವೆ. ವೈಶಾಖ-ಜೇಷ್ಠ ಮಾಸದಲ್ಲಿ ಸುಖಶಾಂತಿ ಸಿಗಲಿದೆ. ದನಕರುಗಳಿಗೆ ಬಂದ ರೋಗ ತಗ್ಗುವ ಕಾಲ ಸಮೀಪಿಸಿದೆ, ಗಡಿಕಾಯುವ ಯೋಧರಿಗೆ ಜಯ ಉಂಟಾಗುವುದು ಎಂಬುದನ್ನೂ ಹೇಳಿದ್ದಾರೆ.

    300 ವರ್ಷಗಳಿಂದ ಭವಿಷ್ಯ: ಬಬಲಾದಿ ಮಠದಲ್ಲಿ ಕಳೆದ 300 ವರ್ಷಗಳಿಂದ ಕಾಲಜ್ಞಾನ ನುಡಿಯುತ್ತ ಬರಲಾಗಿದ್ದು, ಅಂದಿನಿಂದ ಇಂದಿನವರೆಗೂ ಇಲ್ಲಿ ನುಡಿದ ಭವಿಷ್ಯಗಳು ಸತ್ಯವಾಗುತ್ತ ಬಂದಿವೆ ಎನ್ನಲಾಗಿದೆ.

    ಇದನ್ನೂ ಓದಿ: 6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ

     

    ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts