More

    ಅಫ್ಘಾನಿಸ್ತಾನದಿಂದ ಭಾರತ ಸರ್ಕಾರ ತೆರವುಗೊಳಿಸಿದ ಜನರೆಷ್ಟು? ಸಂಪೂರ್ಣ ಮಾಹಿತಿ ನೀಡಿದ ಸಚಿವ ಜೈಶಂಕರ್

    ನವದೆಹಲಿ: ಅಫ್ಘಾನಿಸ್ತಾನದಿಂದ ಈವರೆಗೆ 565 ಜನರನ್ನು ಭಾರತ ಸರ್ಕಾರ ತೆರವುಗೊಳಿಸಿದೆ ಎಂದು ವಿದೇಶಾಂಗ ಸಚಿವ ಎಸ್​.ಜೈಶಂಕರ್​ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಸನ್ನಿವೇಶದ ಬಗ್ಗೆ ಇಂದು ಸರ್ವಪಕ್ಷಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್​, ಎಲ್ಲಾ ಭಾರತೀಯರನ್ನೂ ಅಲ್ಲಿಂದ ತೆರವುಗೊಳಿಸುವ ಸರ್ವಪ್ರಯತ್ನವನ್ನೂ ಸರ್ಕಾರ ನಡೆಸುತ್ತಿದೆ ಎಂದಿದ್ದಾರೆ.

    ಒಟ್ಟು 565 ಜನರನ್ನು ಕಾಬುಲ್​​ನಿಂದ ತೆರವುಗೊಳಿಸಿದ್ದು, ಇವರಲ್ಲಿ 175 ಜನ ಎಂಬೆಸಿಯ ಸಿಬ್ಬಂದಿ, 263 ಇತರ ಭಾರತೀಯ ನಾಗರೀಕರು, ಹಿಂದೂಗಳು ಮತ್ತು ಸಿಖ್ಖರು ಸೇರಿದಂತೆ 112 ಅಫ್ಘನ್​ ನಾಗರೀಕರು ಮತ್ತು 15 ವಿದೇಶೀಯ ನಾಗರಿಕರಿದ್ದಾರೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ತಾಲಿಬಾನ್​ ಡೆಪ್ಯುಟಿ ಅಬ್ದುಲ್ ಘನಿ ಬರಾದರ್​ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ?!

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೈಶಂಕರ್​, “ಆಪರೇಷನ್​ ‘ದೇವಿ ಶಕ್ತಿ’ ಹೆಸರಲ್ಲಿ 6 ತೆರವು ವಿಮಾನಗಳು ಕಾರ್ಯನಿರ್ವಹಿಸಿವೆ. ಬಹುತೇಕ ಭಾರತೀಯರನ್ನು ನಾವು ಅಫ್ಘಾನಿಸ್ತಾನದಿಂದ ಕರೆತಂದಿದ್ದೇವೆ. ನಿನ್ನೆ ಭಾರತೀಯ ವಿಮಾನ ಹೊರಡುವ ವೇಳೆಗೆ ಎಲ್ಲರೂ ಬರುವುದಕ್ಕೆ ಸಾಧ್ಯವಾಗಿಲ್ಲ. ಆದರೆ ಪ್ರತಿಯೊಬ್ಬರನ್ನೂ ಕರೆತರಲು ಪ್ರಯತ್ನ ನಡೆಯುತ್ತಿದೆ” ಎಂದು ಹೇಳಿದರು. (ಏಜೆನ್ಸೀಸ್)

    ಕಾಶ್ಮೀರದ ಬಗ್ಗೆ ನಾಲಿಗೆ ಹರಿಬಿಟ್ಟವರನ್ನು ತೆಗೆದುಹಾಕಲು, ಪಿಪಿಸಿಸಿ ಅಧ್ಯಕ್ಷ ಸಿಧುಗೆ ಸೂಚನೆ

    ಹಿರಿಯ ನಟ ದೊಡ್ಡಣ್ಣ ಅನಾರೋಗ್ಯ: ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts