More

    ಮೆಕ್ಕೆಜೋಳಕ್ಕೂ ಇ ಟೆಂಡರ್


    ಈವರೆಗೆ ಪರಸ್ಪರ ಒಪ್ಪಂದದ ಮೂಲಕ ಸ್ಥಳೀಯ ಎಪಿಎಂಸಿಯಲ್ಲಿ ಮಾರಾಟವಾಗುತ್ತಿದ್ದ ಮೆಕ್ಕೆಜೋಳವು ಫೆ. 10ರಿಂದ ಇ ಟೆಂಡರ್ ಮೂಲಕ ನಡೆಯಲಿದೆ. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವ ನಿರೀಕ್ಷೆ ಇಮ್ಮಡಿಗೊಂಡಿದೆ. ನಗರದ ಎಪಿಎಂಸಿ ಸಭಾಭವನದಲ್ಲಿ ಸೋಮವಾರ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮಾರುಕಟ್ಟೆಯಲ್ಲಿನ ಖರೀದಿದಾರರು ಹಾಗೂ ದಲ್ಲಾಲ್ಲರ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದಾರೆ.

    ಇದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದ್ದು, ಫೆ. 10ರಿಂದ ಮೆಕ್ಕೆಜೋಳ ಮಾರಾಟವನ್ನು ಇ ಟೆಂಡರ್ ಮೂಲಕ ನಡೆಸಲು ಎಪಿಎಂಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾವೇರಿ ಎಪಿಎಂಸಿಯಲ್ಲಿ ಈಗಾಗಲೇ ಹತ್ತಿ ಹಾಗೂ ಶೇಂಗಾ ಬೆಳೆಗಳನ್ನು ಇ ಟೆಂಡರ್ ಮೂಲಕ ಹರಾಜು ಮಾಡಿ ಮಾರಾಟ ಮಾಡಲಾಗುತ್ತಿದೆ.

    ಮೆಕ್ಕೆಜೋಳ ಅದರ ವ್ಯಾಪ್ತಿಗೆ ಸೇರಿರಲಿಲ್ಲ. ಹೀಗಾಗಿ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತಿರಲಿಲ್ಲ. ಇದರಿಂದ ಬೇಸತ್ತ ರೈತರು ಇತ್ತೀಚಿನ ದಿನಗಳಲ್ಲಿ ಎಪಿಎಂಸಿಗಳತ್ತ ಬರದೇ ತಮಗೆ ಅನುಕೂಲಕರ ಬೆಲೆ ಸಿಕ್ಕ ಕಡೆಯಲ್ಲಿ ಮಾರಾಟ ಮಾಡುತ್ತಿದ್ದರು. ಅಲ್ಲದೆ, ಕೆಲವು ವಂಚಕರು ಹುಟ್ಟುಕೊಂಡು ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ನೀಡುವ ಆಮಿಷವೊಡ್ಡಿ ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ವಂಚಿಸುತ್ತಿದ್ದ ಪ್ರಕರಣಗಳು ನಡೆದಿದ್ದವು. ಇದನ್ನೆಲ್ಲಾ ಗಮನಿಸಿದ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ದಾವಣಗೆರೆ ಎಪಿಎಂಸಿಯಲ್ಲಿ ಮೆಕ್ಕೆಜೋಳವನ್ನು ಇ ಟೆಂಡರ್ ಮೂಲಕ ಮಾರಾಟ ಮಾಡುತ್ತಿದ್ದು, ಇಲ್ಲಿಯೂ ಅದೇ ಮಾದರಿ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದರು. ಇದರ ಜೊತೆಗೆ ಜ. 27ರಂದು ಏರ್ಪಡಿಸಲಾಗಿದ್ದ ಎಪಿಎಂಸಿ ವಿಡಿಯೋ ಸಂವಾದದಲ್ಲಿ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಕರಿಗೌಡ ಅವರು ಎಲ್ಲ ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳವನ್ನು ಇ ಟೆಂಡರ್ ಮೂಲಕ ಖರೀದಿಗೆ ಮುಂದಾಗುವಂತೆ ಸೂಚನೆ ನೀಡಿದ್ದರು. ಇದರನ್ವಯ ಸೋಮವಾರದ ಸಭೆಯಲ್ಲಿ ಅಧ್ಯಕ್ಷರು ಈ ನಿರ್ಣಯ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts