More

    ರಕ್ತ ಪರೀಕ್ಷೆ ವೇಳೆ ಮದ್ಯಪಾನದ ಜತೆಗೆ ಡ್ರಗ್ಸ್ ಸೇವನೆ ಬಗ್ಗೆಯೂ ಪರೀಕ್ಷೆ

    ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಪ್ರಾಣಹಾನಿಗೆ ಡ್ರಗ್ಸ್ ಸೇವನೆಯೂ ಕಾರಣವಾಗಿದ್ದು, ರಕ್ತ ಪರೀಕ್ಷೆಯಲ್ಲಿ ಈ ಕುರಿತಾಗಿ ವೈದ್ಯಕೀಯ ವರದಿ ಪಡೆಯಲಾಗುತ್ತಿದೆ.

    ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಂಟಿ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್, ಡ್ರಗ್ಸ್ ವ್ಯಸನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ ಎಂದರು.

    ಈ ಮೊದಲು ಅಪಘಾತಗಳು ಸಂಭವಿಸಿದಾಗ ಸಾವನ್ನಪ್ಪಿದವರು ಮತ್ತು ಗಾಯಗೊಂಡವರು ಮದ್ಯ ಸೇವನೆ ಮಾಡಿರುವುದನ್ನು ದೃಢಪಡಿಸಿಕೊಳ್ಳಲು ರಕ್ತ ಸಂಗ್ರಹಿಸಿ ವೈದ್ಯಕೀಯ ವರದಿ ಪಡೆಯಲಾಗುತ್ತಿತ್ತು. ಇದೀಗ ಅಪಘಾತಕ್ಕೆ ಡ್ರಗ್ಸ್ ಸೇವನೆ ಸಹ ಪ್ರಮುಖ ಕಾರಣವಾಗುತ್ತಿದೆ. ಆದರಿಂದ ರಕ್ತ ಪರೀಕ್ಷೆ ವೇಳೆ ಡ್ರಗ್ಸ್ ಸೇವಿಸಿರುವ ಬಗ್ಗೆಯೂ ವರದಿ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಒಂದು ವೇಳೆ ಡ್ರಗ್ಸ್ ಸೇವನೆ ಖಚಿತವಾದರೆ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗುತ್ತದೆ. ಸಾಮಾನ್ಯವಾಗಿ ಅಪಘಾತಗಳ ಸಂಬಂಧ ಐಪಿಸಿ 304 (ಎ) ಅಡಿಯಲ್ಲಿ (ಅಸ್ವಾಭಾವಿಕ ಘಟನೆ) ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗುತ್ತದೆ. ಡ್ರಗ್ಸ್ ಸೇವಿಸಿದ್ದರೆ ಐಪಿಸಿ 304 (ಉದ್ದೇಶಪೂರ್ವಕವಲ್ಲದ ಕೊಲೆ) ಅಡಿಯಲ್ಲಿ ಪ್ರಕರಣ ದಾಖಿಸಲಾಗುತ್ತದೆ.

    ಈ ಕೃತ್ಯದಲ್ಲಿ ತಪ್ಪಿತಸ್ಥರಿಗೆ 7 ವರ್ಷ ಅಥವಾ ಜೀವಾವಧಿ ಶಿಕ್ಷೆ ಮತ್ತು ದಂಡ ಸಹ ವಿಧಿಸಹುದಾಗಿದೆ.
    ಈಗಾಗಲೇ ನಗರದಲ್ಲಿ ಅಪಘಾತ ಪ್ರಕರಣಗಳಲ್ಲಿ ಮೃತ ಅಥವಾ ಗಾಯಾಳುಗಳ ರಕ್ತ ಪರೀಕ್ಷೆಯಲ್ಲಿ ನಡೆಸಿದಾಗ ಡ್ರಗ್ಸ್ ಸೇವನೆ ದೃಢವಾಗಿ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ವ್ಹೀಲಿಂಗ್ ಕೃತ್ಯದಲ್ಲಿ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಬಂಧಿಸಿದ್ದ ಆರೋಪಿಯ ವೈದ್ಯಕೀಯ ತಪಾಸಣೆ ವೇಳೆ ಡ್ರಗ್ಸ್ ವ್ಯಸನ ಬಯಲಾಯಿತು. ಆತನ ಮೇಲೂ ಕಾಮಾಕ್ಷಿಪಾಳ್ಯ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಅನುಚೇತ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts