More

    ಗ್ರಾಮಜ್ಯೋತಿ ಗೋಲ್​ಮಾಲ್ ಸಿಎಂ ಗಮನಕ್ಕೆ

    ಸಾಗರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಲ್ಲಿ ಹಲವು ಲೋಪಗಳಿದ್ದು ಪರಿಣಾಮಕಾರಿ ಅನುಷ್ಠಾನ ಆಗಿಲ್ಲ. ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮೆಸ್ಕಾಂ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ಇಂದು ನನ್ನ ಬಳಿ ಬಳಸಗೋಡಿನ 5 ಕುಟುಂಬಗಳು ಆಗಮಿಸಿ ತಮ್ಮ ಮನೆಗಳಿಗೆ ಮೀಟರ್ ಅಳವಡಿಸಿದ್ದಾರೆ. ವಿದ್ಯುತ್ ಕಂಬ ಹಾಕಿಲ್ಲ ಎಂದು ದೂರು ಸಲ್ಲಿಸಿದ್ದಾರೆ. ಇಂತಹ ಬಹಳಷ್ಟು ದೂರುಗಳು ಬಂದಿವೆ ಎಂದರು.

    ಬಡತನ ರೇಖೆಗಿಂತ ಕೆಳಗಿರುವವರಿಗೆ ರೂಪಿಸಿದ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಂತೆ ಕಾಣುತ್ತಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೀಡಿರುವ ಪಟ್ಟಿ ತಾಳೆ ಆಗುತ್ತಿಲ್ಲ. ನಕಲಿ ಹೆಸರು ಸೇರಿಸಿ ಬಿಲ್ ಪಡೆಯುವ ಯತ್ನ ನಡೆದಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಸ್ಥಳದಲ್ಲಿಯೇ ಮೆಸ್ಕಾಂ ಎಂಡಿಗೆ ದೂರವಾಣಿಯಲ್ಲಿ ಸಂರ್ಪಸಿ, ಸಾಗರ ತಾಲೂಕಿನಲ್ಲಿ ದೀನದಯಾಳ್ ಯೋಜನೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಗಮನಕ್ಕೆ ತಂದರು. ನ.23ರ ಬೆಳಗ್ಗೆ 11ರೊಳಗೆ ಫಲಾನುಭವಿಗಳು, ಆಗಿರುವ ಕೆಲಸಗಳ ಕುರಿತು ಸಂಪೂರ್ಣ ವಿವರ ನೀಡುವಂತೆ ತಾಕೀತು ಮಾಡಿದರು. ಮೆಸ್ಕಾಂ ಅಧಿಕಾರಿ ವೆಂಕಟೇಶ್, ಚನ್ನಕೇಶವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts