More

    ಚಂದನವನದಲ್ಲಿ ಅನಿಕಾಳ ಡ್ರಗ್ಸ್ ದಂಧೆ ಹೀಗಿತ್ತು… ‘ಲವ್ ಡೋಸ್’, ‘ಬಿ ಮನಿ’ ಅಂದ್ರೇನು ಗೊತ್ತಾ?

    ಬೆಂಗಳೂರು: ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಎನ್​ಸಿಬಿ ಬಲೆಗೆ ಬೀಳುತ್ತಿದ್ದಂತೆ ಸ್ಫೋಟಕ ರಹಸ್ಯ ಹೊರಬಿದ್ದಿದೆ. ಡ್ರಗ್ಸ್​ ದಂಧೆ ಹೇಗಿತ್ತು? ಕೋಡ್​ವರ್ಡ್​ ಏನು? ಕೂತಲ್ಲೇ ಹೇಗೆಲ್ಲ ವ್ಯವಹಾರ ಕುದುರಿಸುತ್ತಿದ್ದಳು? ಎಂಬುದರ ಬಗ್ಗೆ ಸ್ವತಃ ಎ1 ಆರೋಪಿ ಅನಿಕಾಳೇ ಬಾಯ್ಬಿಟ್ಟಿದ್ದಾಳೆ.

    ಚಂದನವನದಲ್ಲಿ ಅನಿಕಾಳ ಡ್ರಗ್ಸ್ ದಂಧೆ ಹೀಗಿತ್ತು... 'ಲವ್ ಡೋಸ್', 'ಬಿ ಮನಿ' ಅಂದ್ರೇನು ಗೊತ್ತಾ?ಅನಿಕಾಗಳ ಡ್ರಗ್ಸ್ ದಂಧೆಯ ಕೋಡ್ ನೇಮ್ “ಬಿಮನಿ”. ಇದೇ ಹೆಸರು ಅವಳ ನಂಬರ್​ನ ಐಡಿ ನೇಮ್ ಕೂಡ ಆಗಿತ್ತು. ಇವಳ ಸೋಷಿಯಲ್​ ಮಿಡೀಯಾ ಅಕೌಂಟ್ ನೇಮ್ ಕೂಡ ‘B Money’. ಸೋಷಿಯಲ್ ಮೀಡಿಯಾ ಆ್ಯಪ್​ ಮೂಲಕ ದಂಧೆ ನಡೆಸುತ್ತಿದ್ದ ಅನಿಕಾ, ಅದಕ್ಕಾಗಿ ವಾಟ್ಸ್ಆ್ಯಪ್​ ಮತ್ತು ಟೆಲಿಗ್ರಾಮ್ ಆ್ಯಪ್ ಬಳಸುತ್ತಿದ್ದಳು. ಈ ಆ್ಯಪ್​ಗಳ ಮೂಲಕವೇ ಕಸ್ಟಮರ್​ಗಳನ್ನು ಸಂಪರ್ಕಿಸುತ್ತಿದ್ದಳು. ಈಕೆ ಮಾರಾಟ ಮಾಡುತ್ತಿದ್ದ ಮಾದಕ ವಸ್ತು MDMA ಮತ್ತು LSDಗೆ ಪ್ರತ್ಯೇಕ ಹೆಸರನ್ನೂ ಇಟ್ಟಿದ್ದಳು. ಪಿಂಕ್ ಬಣ್ಣದ ಎಂಡಿಎಂಎಗೆ ‘ರೆಡ್ ಬುಲ್’, LSDಗೆ ‘ಲವ್ ಡೋಸ್’ ಎಂದು ಕೋಡ್​ ನೇಮ್​ ಇಟ್ಟು ಮಾರಾಟ ಮಾಡುತ್ತಿದ್ದಳು.

    ಇದನ್ನೂ ಓದಿರಿ ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಬಾಯ್ಬಿಟ್ಲು ಸ್ಫೋಟಕ ರಹಸ್ಯ, ಕನ್ನಡ ನಟ-ನಟಿಯರೇ ಗಿರಾಕಿಗಳು!

    ವಿದ್ಯಾರ್ಥಿಗಳು, ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರು, ಮ್ಯೂಸಿಕ್ ಡೈರೆಕ್ಟರ್​ಗಳನ್ನು ನೇರವಾಗಿ ಭೇಟಿ ಮಾಡದೆ ಕೂತಲ್ಲೇ ವ್ಯವಹಾರ ನಡೆಸುತ್ತಿದ್ದಳು. ಇವರಿಗೆಲ್ಲ ಡ್ರಗ್ಸ್ ಸಪ್ಲೈ ಮಾಡಲು ಅನಿಕಾಗೆ ಸಾಥ್ ಕೊಟ್ಟದ್ದು ಕೊಚ್ಚಿ‌ ಮೂಲದ ಅನೂಪ್ ಮತ್ತು ಚೆನ್ನೈನ ರಿಜೇಶ್ ರವಿಚಂದ್ರನ್, ಇವರಿಬ್ಬರೂ ಅನಿಕಾಳಿಂದ ಪಡೆದ ಡ್ರಗ್ಸ್​ ಅನ್ನು ಸಾಫ್ಟ್ ಟಾಯ್ಸ್ (ಬಟ್ಟೆಯ ಬೊಂಬೆಗಳು)ನಲ್ಲಿ ಇಟ್ಟು ಕೋರಿಯರ್ ಮೂಲಕ ಕಳುಹಿಸುತ್ತಿದ್ದರು. ಇದರ ಜತಗೆ ನೇರವಾಗಿ ಪಾರ್ಟಿಗಳಿಗೆ ಮತ್ತು ಕೆಲವರ ಪಿಓ ಬಾಕ್ಸ್​ಗಳಿಗೆ ಕಳುಹಿಸುತ್ತಿದ್ದರು.

    ಚಂದನವನದಲ್ಲಿ ಅನಿಕಾಳ ಡ್ರಗ್ಸ್ ದಂಧೆ ಹೀಗಿತ್ತು... 'ಲವ್ ಡೋಸ್', 'ಬಿ ಮನಿ' ಅಂದ್ರೇನು ಗೊತ್ತಾ?ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಅನಿಕಾ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ನೈಜೀರಿಯಾ ಮೂಲದ ಆ್ಯಂಡಿ ಜುಂಬೋ ಎಂಬಾತ ಪರಿಚಯವಾಗಿತ್ತು. ಈತನೊಂದಿಗೆ ಸ್ನೇಹ, ಪ್ರೀತಿಗೆ ತಿರುಗಿ ಬಳಿಕ ಮದುವೆಯಾಗಿದ್ದರು. ಆ್ಯಂಡಿ ಜುಂಬೋ ವಿದೇಶದಿಂದ ಬಟ್ಟೆ ಎಕ್ಸ್​ಪೋರ್ಟ್ ಬಿಸಿನೆಸ್ ಮಾಡುತ್ತಿದ್ದ. ಈತನೂ ಡ್ರಗ್ಸ್​ ಸೇವನೆಯ ಮತ್ತಿನಲ್ಲಿ ಸ್ಥಳೀಯ ಪೊಲೀಸರ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದಾನೆ. ಈ ನಡುವೆ ಅನಿಕಾಗೆ ಅಮೀನಂ ಖಾನ್ ಮೊಹಮದ್ ಎಂಬಾತನ ಪರಿಚಯವಾಗಿದ್ದು, ಈತನ ಮೂಲಕ ಡ್ರಗ್ಸ್​ ದಂಧೆಗೆ ಇಳಿದಿದ್ದಳು.

    ಸದ್ಯ ಅನಿಕಾ ಜೊತೆ ನಗರದ ವಿವಿಧ ಮೂಲೆಯ 18 ಮಂದಿ ಪೆಡ್ಲರ್​ಗಳ ಲಿಂಕ್ ಇರುವುದು ತನಿಖೆಯಲ್ಲಿ ಗೊತ್ತಾಗಿದೆ. ಅನಿಕಾಳ ಶಿಷ್ಯರಾಗಿ ರಿಜೇಶ್ ಮತ್ತು ಅನೂಪ್ ಕೆಲಸ ಮಾಡುತ್ತಿದ್ದರು. ಇವರ ಜೊತೆಗಿದ್ದ ಇನ್ನೊಬ್ಬ ಪೆಡ್ಲರ್ ಡುಗಯ್ ಡುಂಜೋ ಎಂಬಾತ ತಲೆಮರೆಸಿಕೊಂಡಿದ್ದಾನೆ.

    ಬ್ರೇಕಿಂಗ್ ನ್ಯೂಸ್: ‘ನಟಿ ಶರ್ಮಿಳಾ ಮಾಂಡ್ರೆ ಪಕ್ಕದಲ್ಲೇ ಕುಳಿತ್ತಿದ್ದ ಬೆಂಗಳೂರಿನ ದೊಡ್ಡ ಡ್ರಗ್ಸ್ ಪೆಡ್ಲರ್’

    ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?: ಸ್ಯಾಂಡಲ್ವುಡ್​ ರಹಸ್ಯ ಬಿಚ್ಚಿಟ್ಟ ಇಂದ್ರಜಿತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts