More

    ಕೇಂದ್ರ ತಂಡದಿ೦ದ ಜಿಲ್ಲೆಯಲ್ಲಿ ಬರ ಅಧ್ಯಯನ; ಹೆಚ್ಚಿನ ಪರಿಹಾರ ಬಿಡುಗಡೆಗೆ ರೈತರ ಒತ್ತಾಯ

    ಧಾರವಾಡ: ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಶನಿವಾರ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು. ಶೇಂಗಾ, ಸೋಯಾಬೀನ್, ಗೋವಿನಜೋಳ, ಹೆಸರು, ಈರುಳ್ಳಿ, ಕಬ್ಬು ಇತರ ಬೆಳೆಗಳ ಸ್ಥಿತಿಯನ್ನು ಅಽಕಾರಿಗಳು ಪರಿಶೀಲಿಸಿದರು. ಮಳೆ ಇಲ್ಲದೆ ಬೆಳೆಗಳು ಹಾಳಾಗಿದ್ದು, ಕೂಡಲೇ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಿಸಿ ಎಂದು ಅಲವತ್ತುಕೊಂಡರು.
    ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ವೀರಣ್ಣ ಕುರುಬರ ಅವರ ಜಮೀನಿನಲ್ಲಿದ್ದ ಈರುಳ್ಳಿ ಬೆಳೆ ಹಾನಿ ಮತ್ತು ರೈತ ಮಹಿಳೆ ಬಸವ್ವ ಉದ್ಮೇಶಿ ಅವರ ಜಮೀನಿನಲ್ಲಿದ್ದ 3 ಎಕರೆ ಹತ್ತಿ ಬೆಳೆ ಹಾನಿ ಪರಿಶೀಲಿಸಿದರು.
    ನಂತರ ಅಮ್ಮಿನಭಾವಿ ಗ್ರಾಮದ ರೈತ ಅನ್ವರ್ ಶೇಖ್ ಅವರ ಜಮೀನಿನಲ್ಲಿದ್ದ 2 ಎಕರೆ ಈರುಳ್ಳಿ ಬೆಳೆ ಹಾನಿ ಮತ್ತು ಸುಮಾರು ೨೦ ಗುಂಟೆ ಮೆಣಸಿನಕಾಯಿ ಬೆಳೆ ಹಾನಿ ಪರಿಶೀಲಿಸಿದರು. ನಂತರ ಅಮ್ಮಿನಭಾವಿಯ ರೈತ ಶಿವಪುತ್ರಪ್ಪ ಹೆಬ್ಬಳ್ಳಿ ಅವರ ಜಮೀನಿನಲ್ಲಿದ್ದ 3 ಎಕರೆ ಶೇಂಗಾ ಮತ್ತು 2 ಎಕರೆ ಹತ್ತಿ ಬೆಳೆ ಹಾನಿ ಪರಿಶೀಲಿಸಿದರು. ಬಳಿಕ ಧಾರವಾಡ ವಿ. ಹೋಬಳಿಯ ರೈತ ಪ್ರಕಾಶ ದಂಡಿನ ಅವರ ಜಮೀನಿಗೆ ಭೇಟಿ ನೀಡಿ 3 ಎಕರೆ ಸೋಯಾಬೀನ್ ಬೆಳೆ ಹಾನಿ ಪರಿಶೀಲಿಸಿದರು.
    ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್‌ಕುಮಾರ್ ಸಾಹು, ಎಣ್ಣೆ ಬೀಜಗಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ. ಜೆ. ಪೊನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯ, ನೀತಿ ಆಯೋಗದ ಸಂಶೋಧನಾಧಿಕಾರಿ ಶಿವಚರಣ್ ಮೀನಾ, ರಾಜ್ಯ ಕೃಷಿ ಆಯುಕ್ತ ವೈ.ಎಸ್. ಪಾಟೀಲ ಅವರನ್ನು ಒಳಗೊಂಡಿದ್ದ ತಂಡ ರೈತರು, ಕೂಲಿ ಕಾರ್ಮಿಕರಿಂದ ಮಾಹಿತಿ ಪಡೆಯಿತು.
    ಜಿಲ್ಲೆಯಲ್ಲಿ ಬಿತ್ತನೆಯಾದ ಕೃಷಿ ಬೆಳೆ, ತೋಟಗಾರಿಕೆ ಬೆಳೆ, ಹಾನಿ ಪ್ರಮಾಣದ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು. ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳಿದ್ದರು.

    ಈ ಬಾರಿ ಮಳೆ ಕೊರತೆಯಿಂದ ಬಿತ್ತನೆ ವಿಳಂಬವಾಗಿದೆ. ಶೇ. 65ರಷ್ಟು ಮಳೆ ಕೊರತೆಯಿಂದ ಕೇವಲ ಶೇ. 68ರಷ್ಟು ಬಿತ್ತನೆಯಾಗಿದೆ. ಶೇ. 91ರಷ್ಟು ಬೆಳೆಹಾನಿಯಾಗಿದ್ದು, ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಿಸಿ ವರದಿ ಮಾಡಿಕೊಂಡಿದ್ದಾರೆ. – ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

    ಮುಂಗಾರು ಹಂಗಾಮಿನಲ್ಲಿ ಈರುಳ್ಳಿ, ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದೆ. ಮಳೆಯಾಗದಿರುವುದರಿಂದ ಇಳುವರಿ ಇಲ್ಲ. ಅಽಕಾರಿಗಳು ಕೇಳಿದ ಮಾಹಿತಿ ನೀಡಿದ್ದೇನೆ. ಬೆಳೆ ನಷ್ಟ ಪರಿಹಾರ ಜಮೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ.- ಅನ್ವರ್ ಶೇಖ್, ಧಾರವಾಡ ಹೋಬಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts