More

    ಉಡುಪಿಯಲ್ಲೊಬ್ಬ ಡ್ರೋನ್ ಪ್ರವೀಣ, ವಿದ್ಯಾರ್ಥಿ ದೆಸೆಯಲ್ಲೇ ಬಿಡಿಭಾಗ ಜೋಡಿಸಲು ಕಲಿತ ಗ್ಲೆನ್

    ಉಡುಪಿ: ಡ್ರೋನ್ ಪ್ರತಾಪನಂತೆ ಡ್ರೋನ್ ತಯಾರಕನೆಂದು ಹೇಳಿಕೊಂಡವ ಯುವಕನಲ್ಲ. ಆನ್‌ಲೈನ್ ಮೂಲಕ ಬಿಡಿಭಾಗಗಳನ್ನು ತರಿಸಿಕೊಂಡು ಸ್ವಂತ ಆಸಕ್ತಿಯಿಂದ ಡ್ರೋನ್ ತಯಾರಿಕೆಯಲ್ಲಿ ಪರಿಣತಿ ಪಡೆದಿರುವಾತ. ಹೀಗೆ ಸಿದ್ಧಗೊಳಿಸಿರುವ ಡ್ರೋನ್‌ಗಳ ಸಂಖ್ಯೆ 22.

    ಫೋಟೊ, ವೀಡಿಯೊ, ಡೆಲಿವರಿ, ಕೃಷಿ ಚಟುವಟಿಕೆಗಳಿಗೆ (ಕಸ್ಟಮೈಸ್ಡ್ ಡ್ರೋನ್) ಹೀಗೆ ಎಲ್ಲದಕ್ಕೂ ಈಗ ಡ್ರೋನ್ ಬಳಕೆ ಸಾಮಾನ್ಯವಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸುವವರಿದ್ದಾರೆ. ಇಂಥವರಿಗೆ ಸಾಥ್ ನೀಡುತ್ತಿರುವವನು ಮೂಡುಬೆಳ್ಳೆ ಸಂತ ಲಾರೆನ್ಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ 18ರ ಹರೆಯದ ಗ್ಲೆನ್ ರೆಬೆಲ್ಲೊ. 10ನೇ ತರಗತಿಯಿಂದಲೇ ಡ್ರೋನ್ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದ ಹುಡುಗ ಮುಂದೆ ಮಣಿಪಾಲದಲ್ಲಿ ಏರೋನಾಟಿಕ್ಸ್ ಇಂಜಿನಿಯರಿಂಗ್ ಕಲಿಯುವ ಆಸೆ ಹೊಂದಿದ್ದಾರೆ.

    ಹೊರಗಿನಿಂದ ಖರೀದಿಸುವ ಒಂದು ಡ್ರೋನ್‌ಗೆ 1.5 ಲಕ್ಷ ರೂ.ಗಿಂತ ಹೆಚ್ಚು ಬೆಲೆ ಇರುತ್ತದೆ. ಆದರೆ ಗ್ಲೆನ್ ಇದಕ್ಕೆ ಬೇಕಾದ ಉಪಕರಣಗಳನ್ನು ಖರೀದಿಸಿ ಕೇವಲ 32 ಸಾವಿರ ರೂ. ವೆಚ್ಚದಲ್ಲಿ ಡ್ರೋನ್ ಸಿದ್ಧಪಡಿಸುತ್ತಾರೆ. ನಿರ್ಮಾಣದ ಜತೆಗೆ ದುರಸ್ತಿಯನ್ನೂ ಕಲಿತಿದ್ದಾರೆ. ಜಿಲ್ಲೆಯ ಛಾಯಾಗ್ರಾಹಕರು ತಮ್ಮ ಡ್ರೋನ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಮೊದಲು ಇವರನ್ನೇ ಸಂಪರ್ಕಿಸುವ ಮಟ್ಟಕ್ಕೆ ಗ್ಲೆನ್ ಬೆಳೆದಿದ್ದಾರೆ.

    ಹೊಸತೇನನ್ನೂ ಸಂಶೋಧನೆ ಮಾಡಿಲ್ಲ. ಇರುವ ತಂತ್ರಜ್ಞಾನಗಳನ್ನು ಬಳಸಿ, ಕುತೂಹಲದಿಂದ ಕಲಿತು ಮಾಡುತ್ತಿದ್ದೇನೆ. ಮುಂದೆ ಹೊಸ ಸಂಶೋಧನೆ ನಡೆಸುವ ಇಚ್ಛೆ ಇದೆ. ಅನೇಕ ಕಡೆ ರೇಸಿಂಗ್ ಡ್ರೋನ್ ಪೈಲಟ್ ಕೆಲಸಕ್ಕೆ ಆಹ್ವಾನಿಸುತ್ತಿದ್ದಾರೆ. ನನ್ನಲ್ಲಿ ರಿಪೇರಿಗೆ ಬರುವ ಡ್ರೋನ್‌ಗಳ ಎಲ್ಲ ಮಾಹಿತಿಯನ್ನು ಸರ್ಕಾರದ ಡಿಜಿಟಲ್ ಸ್ಕೈ ಪೋರ್ಟಲ್‌ನಲ್ಲಿ ದಾಖಲಿಸುತ್ತಿದ್ದೇನೆ.
    – ಗ್ಲೆನ್ ರೆಬೆಲ್ಲೊ, ಮೂಡುಬೆಳ್ಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts