More

    ಉಚಿತ ಸೇವಾ ಕೇಂದ್ರಕ್ಕೆ ಚಾಲನೆ; ಕೇಂದ್ರ ರೇಷ್ಮೆ ಮಂಡಳಿಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಉದ್ಘಾಟನೆ

    ದೊಡ್ಡಬಳ್ಳಾಪುರ: ಸರ್ಕಾರ ೋಷಿಸಿರುವ ಲಾಕ್‌ಡೌನ್ ಪರಿಹಾರಧನ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್ ಅಪ್ಲಿಕೇಷನ್ ಸಲ್ಲಿಸುವ ಉಚಿತ ಸೇವಾಕೇಂದ್ರವನ್ನು ಅಂಜನಾದ್ರಿ ಟ್ರಸ್ಟ್ ಆರಂಭಿಸಿದ್ದು ಕೇಂದ್ರ ರೇಷ್ಮೆ ಮಂಡಳಿಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಬುಧವಾರ ಉದ್ಘಾಟಿಸಿದರು.

    ಸರ್ಕಾರದ ಪರಿಹಾರಧನ ಹಾಗೂ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಜನತೆ ಸರ್ಕಾರಿ ಕಚೇರಿಗೆ ಅಲೆಯುವುದನ್ನ ತಪ್ಪಿಸಲು ಸೇವಾಕೇಂದ್ರ ತೆರೆದಿರುವುದನ್ನು ಶ್ಲಾಸಿದರು. ಟ್ರಸ್ಟ್ ಮುಖ್ಯಸ್ಥ ಹಾಗೂ ಬಿಜೆಪಿ ಮುಖಂಡ ಮುನಿರಾಜು ಮಾತನಾಡಿದರು.

    ನೇಕಾರ್ ಸಮ್ಮಾನ್, ಮಡಿವಾಳ, ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರಿಗೆ ಲಾಕ್‌ಡೌನ್ ಪರಿಹಾರ ಧನ ಹಾಗೂ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಕಿಸಾನ್ ಕಾರ್ಡ್, ಹೆಲ್ತ್ ಕಾರ್ಡ್, ಕೂಲಿ ಕಾರ್ಮಿಕರ ಕಾರ್ಡ್ ಸೇರಿ ನಾನಾ ರೀತಿಯ ಯೋಜನೆಗಳ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ತಿಳಿಯದೆ, ಹಣವಿಲ್ಲದೆ ಜನರು ಪರದಾಡುವಂತಹ ಸ್ಥಿತಿ ಇದೆ. ಇಂತಹವರ ನೆರವಿಗಾಗಿ ಈ ಉಚಿತ ಸೇವಾ ಕೇಂದ್ರ ಆರಂಭಿಸಿದ್ದೇವೆ ಎಂದರು.

    ಅಂಜನಾದ್ರಿ ಟ್ರಸ್ಟ್ ನಿರ್ದೇಶಕ ಧೀರಜ್ ಮುನಿರಾಜು, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ಜೊ.ನಾ ಮಲ್ಲಿಕಾರ್ಜುನ, ಮಾಜಿ ನಗರ ಸಭಾ ಸದಸ್ಯರಾದ ನಂಜಪ್ಪ, ನಾಗರಾಜು, ಎನ್‌ಕೆ ರಮೇಶ್, ಲೀಲಾ ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts