More

    ಮುಧೋಳದಲ್ಲಿ ಹರ್ ಘರ್ ತಿರಂಗಾಕ್ಕೆ ಚಾಲನೆ : ರಾರಾಜಿಸಿದ 75 ಮೀಟರ್ ಉದ್ದದ ರಾಷ್ಟ್ರಧ್ವಜ

    ಮುಧೋಳ : ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶದ 130 ಕೋಟಿ ಜನರೂ ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

    ನಗರದ ನಗರಸಭೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 75 ಮೀಟರ್ ಉದ್ದದ ತಿರಂಗಾ ಧ್ವಜದ ಮೂಲಕ ‘ಹರ್ ಘರ್ ತಿರಂಗಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, 1947ರಲ್ಲಿ ದೊರೆತ ಸ್ವಾತಂತ್ರೃಕ್ಕೆ ಈಗ 75 ವರ್ಷದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಅಮೃತಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಆ. 13 ರಿಂದ 15ರವರೆಗೆ ದೇಶದ ಉದ್ದಗಲಕ್ಕೂ ಎಲ್ಲರ ಮನೆ, ಸರ್ಕಾರಿ ಕಚೇರಿ, ಸಂಘ-ಸಂಸ್ಥೆಗಳ ಮೇಲೆ ನಿರಂತರವಾಗಿ ರಾಷ್ಟ್ರಧ್ವಜ ಹಾರಾಡುವ ವ್ಯವಸ್ಥೆ ಮಾಡಲಾಗಿದೆ. ತತ್ಸಂಬಂಧ ಎಲ್ಲ ಕಡೆ ಪೂರ್ವಭಾವಿ ಸಭೆಗಳು ನಡೆದಿದ್ದು, ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ ನಡ್ಡಾ ನೇತೃತ್ವದಲ್ಲಿಯೂ ಸಭೆ ಜರುಗಿದೆ. 130 ಕೋಟಿ ಜನರು ತಿರಂಗಾ ಹಾರಿಸುವ ಮೂಲಕ ವಿಶಿಷ್ಟವಾಗಿ ಸ್ವಾತಂತ್ರೊೃೀತ್ಸವದ ಅಮೃತಮಹೋತ್ಸವ ಆಚರಿಸಬೇಕು. ಸರ್ಕಾರ ತಿರಂಗಾ ಧ್ವಜವೊಂದಕ್ಕೆ 22 ರೂ. ನಿಗದಿ ಮಾಡಿದೆ ಎಂದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಯಡಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಬಿಜೆಪಿ ತಾಲೂಕು ಘಟಕದ ನಗರ ಅಧ್ಯಕ್ಷ ಡಾ. ರವಿ ನಂದಗಾಂವ, ಗ್ರಾಮೀಣ ಘಟಕದ ಅಧ್ಯಕ್ಷ ಹನಮಂತ ತುಳಸಿಗೇರಿ, ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ, ಮಾಜಿ ಜಿ.ಪಂ. ಸದಸ್ಯ ಭೀಮನಗೌಡ ಪಾಟೀಲ್, ನಗರ ಯೋಜನಾ ಪ್ರಾಕಾರ ಅಧ್ಯಕ್ಷ ಪ್ರಕಾಶ ವಸದ, ನಗರಸಭೆ ಸದಸ್ಯ ವಿನೋದ ಕಲಾಲ, ಡಾ. ಸತೀಶ ಮಲಘಾಣ, ತಹಸೀಲ್ದಾರ ವಿನೋದ ಹತ್ತಳ್ಳಿ, ತಾ.ಪಂ. ಇಓ ಕಿರಣ ಘೋರ್ಪಡೆ ಸಹಿತ ಆಶಾ ಕಾರ್ಯಕರ್ತರು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

    ಮುಧೋಳದ ನಗರಸಭೆಯಿಂದ ಆರಂಭವಾದ ಹರ್ ಘರ್ ತಿರಂಗಾ ಜಾಥಾ ನಗರದ ಪ್ರಮುಖ ವತ್ತ ಹಾಗೂ ಬೀದಿಯಲ್ಲಿ ಸಂಚರಿಸಿ ಮಹಾತ್ಮ ಗಾಂಧಿ ವತ್ತ ತಲುಪಿತು. ಅಲ್ಲಿ ಸಚಿವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.

    ತಾಲೂಕಿನ ಎಲ್ಲಾ ಗ್ರಾ.ಪಂ.ಗಳಿಗೆ 450 ಧ್ವಜಗಳನ್ನು ಪೂರೈಸಿದೆ. 22 ರೂ. ಕೊಟ್ಟು ಧ್ವಜ ತೆಗೆದುಕೊಳ್ಳಲು ಸಾಧ್ಯವಿಲ್ಲದವರಿಗೆ ಎನ್ನುವ ದೇಶಾಭಿಮಾನಿಗಳಿಗೆ ಬಿಜೆಪಿ ಕಾರ್ಯಕರ್ತರು ಧ್ವಜದ ವ್ಯವಸ್ಥೆ ಮಾಡುತ್ತಾರೆ.
    ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts