More

    ಕುಡಿಯುವ ನೀರಿಗೆ ಬರ!


    ಮುಂಡಗೋಡ: ಕುಡಿಯುವ ನೀರಿಗೆ ಮಲೆನಾಡಲ್ಲಿ ಬರ ಎದುರಾಗಿದೆ.

    ಮಲೆನಾಡು ವ್ಯಾಪ್ತಿಗೆ ಬರುವ ಮುಂಡಗೋಡ ತಾಲೂಕಿನಾದ್ಯಂತ ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಳವಾಗಿದ್ದು, ಗ್ರಾಮ ಪಂಚಾಯಿತಿಗಳು ಮನೆಮನೆಗೆ ನೀರು ಸರಬರಾಜು ಮಾಡಲು ತೊಂದರೆ ಎದುರಾಗಿದೆ.

    ತಾಪಮಾನ ಏರಿಕೆ

    ಇದುವರಗೆ ತಾಲೂಕಿನಲ್ಲಿ ಗರಿಷ್ಠ ತಾಪಮಾನ ೩೪ರಿಂದ ೩೬ ಡಿಗ್ರಿವರೆಗೆ ದಾಖಲಾಗುತ್ತಿತ್ತು. ಆದರೆ, ಈ ವರ್ಷ ೩೬ರಿಂದ ೪೦ರವರೆಗೆ ದಾಖಲಾಗಿದೆ.
    ಇದರಿಂದ ತಾಲೂಕಿನ ಜನತೆ ಬಿಸಿಲಿನ ತಾಪಕ್ಕೆ ಬಸವಳಿದಿದ್ದಾರೆ.
    ಜತೆಗೆ ತಾಲೂಕಿನಲ್ಲಿನ ಅಂತರ್ಜಲ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಕೆರೆ ಕಟ್ಟೆಗಳು, ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ ಮತ್ತೆ ಕೆಲವೆಡೆಗಳಲ್ಲಿ ಬೋರ್‌ವೆಲ್ ಹಾಗೂ ತೆರೆದ ಬಾವಿಗಳು ಬತ್ತಿ ಬರಿದಾಗಿವೆ.

    ಖಾಸಗಿ ಬೋರವೇಲ್

    ತಾಲೂಕಿನ ಮಲವಳ್ಳಿ, ಚವಡಳ್ಳಿ, ಹುನಗುಂದ, ಕೆಂದಲಗೇರಿ, ಕರಗಿನಕೊಪ್ಪ, ಹೊಸಕೊಪ್ಪ, ಹೊಸಸಾಲಗಾಂವ ಗ್ರಾಮಗಳಲ್ಲಿ ಬಾಡಿಗೆ ಆಧಾರದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಪಡೆದುಕೊಂಡು ಕುಡಿಯುವ ನೀರು ಪೂರೈಸಲಾಗುತ್ತಿದೆ.
    ಇನ್ನು ತೇಗಿನಕೊಪ್ಪ, ಕರಗೊಳ್ಳಿ, ಕಾವಲಕೊಪ್ಪ, ಕೆಂದಲಗೇರಿ, ಮೈನಳ್ಳಿ, ಗೋದ್ನಾಳ, ಕಳಕಿಕಾರೆ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪ್ರತಿದಿನವೂ ಕುಡಿಯುವ ನೀರು ಪೊರೈಸಲಾಗುತ್ತಿದೆ.
    ತಾಲೂಕಿನ ಭದ್ರಾಪುರ, ರಾಮಾಪುರ, ಕೊಡಂಬಿ, ವೀರಾಪುರ, ಕಲಕೇರಿ, ಅಂದಲಗಿ, ಹೊನ್ನಿಕೊಪ್ಪ, ನ್ಯಾಸರ್ಗಿ, ಹುಲಿಹೊಂಡ, ನಂದಿಪುರ, ಬೆಕ್ಕೋಡ, ಕುರ್ಲಿ, ತೊಗರಳ್ಳಿ, ಹಾಲಹರವಿ, ಕಾಳೆಬೈಲ್ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ.
    ಒಂದು ವಾರದಲ್ಲಿ ಈ ಗ್ರಾಮಗಳಿಗೂ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಖಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಈ ವರ್ಷ ತಾಲೂಕಿನ ಅಂತರ್ಜಲ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಅಲ್ಲಿ ಟ್ಯಾಂಕರ್ ಮೂಲಕ ಪೂರೈಸಿದರೆ ಮತ್ತೆ ಕೆಲವೆಡೆ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತದೆ. ಮುಂದಿನ ವಾರ ಮತ್ತಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
    – ಪ್ರದೀಪ ಭಟ್, ಇಂಜಿನಿಯರ್ ಪಂಚಾಯತ್‌ರಾಜ್ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts