More

    ಸೂರು ಯೋಜನೆಯ ಕನಸು ಶೀಘ್ರ ನನಸು

    ನಿಪ್ಪಾಣಿ: 2000 ರಿಂದ ವಸತಿ ರಹಿತರ ಕನಸು ನನಸಾಗುವ ದಿನ ಬಂದಿದೆ. ಈ ಮೂಲಕ ಹಲವು ದಿನಗಳಿಂದ ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ವಸತಿ ರಹಿತರಿಗೆ ವಸತಿ ಕಲ್ಪಿಸುವ ನಮ್ಮ ಕನಸು ಸಹ ನನಸಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹರ್ಷ ವ್ಯಕ್ತಪಡಿಸಿದರು.
    ವಸತಿ ರಹಿತರಿಗೆ ಮನೆ ಕಲ್ಪಿಸುವ ನಿಟ್ಟಿನಲ್ಲಿ ನಗರದ ಬಸವ ಜ್ಯೋತಿ ಗಾರ್ಮೆಂಟ್ಸ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ವಸತಿ ರಹಿತರು ವಸತಿ ಯೋಜನೆಗೆ ಮಾಡುವ ಸಾಲಕ್ಕೂ ಬ್ಯಾಂಕ್ ನಿಗದಿಸಿ ಆ ಸಾಲವನ್ನು ತೀರಿಸಲು ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗವಕಾಶ ಒದಗಿಸಿಕೊಡಲಾಗುವುದು. ಈ ಯೋಜನೆಯು ದೇಶಕ್ಕೆ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

    ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ನಗರದಲ್ಲಿಯ ವಸತಿರಹಿತರಿಗೆ ಆರ್‌ಸಿಸಿ ಮನೆಗಳನ್ನು ಶೀಘ್ರ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರ, ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಶಿಂಧೆ ನಗರ, ದನಗಳ ಪೇಟೆ ಹತ್ತಿರ ಮತ್ತು ಹಾಲಶುಗರ್ ಕಾರ್ಖಾನೆ ಬಳಿ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು ಅಲ್ಲಿ 394 ಚದರ್ ಅಡಿ ಕ್ಷೇತ್ರದಲ್ಲಿಯ ಒಂದು ಬಿಎಚ್‌ಕೆ ಮನೆ ನಿರ್ಮಿಸಲು 6.81 ಲಕ್ಷ ರೂ. ಮತ್ತು 2 ಬಿಎಚ್‌ಕೆ ಮನೆ ನಿರ್ಮಿಸಲು 9.22 ಲಕ್ಷ ರೂ. ವೆಚ್ಚವಾಗಲಿದೆ. ಎರಡೂ ಮನೆಗಳಿಗೆ 2.7 ಲಕ್ಷ ರೂ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಅನುದಾನ, 2 ಲಕ್ಷ ರೂ. ಕಾರ್ಮಿಕ ಇಲಾಖೆಯಿಂದ ಅನುದಾನ ದೊರೆಯಲಿದೆ ಎಂದರು. ಪೌರಾಯುಕ್ತ ಮಹಾವೀರ ಬೋರಣ್ಣವರ, ರಾಜ ಪಠಾಣ, ಗೋಪಾಳರಾವ ನಾಯಿಕ, ಚಂದ್ರಕಾಂತ ಕೋಠಿವಾಲೆ, ಎಪಿಎಂಸಿ ಚೇರ್ಮನ್ ಅಮಿತ ಸಾಳವೆ, ಪ್ರವೀಣ ಶಹಾ, ಅಭಯ ಮಾನವಿ, ವಿಭಾವರಿ ಖಾಂಡಕೆ, ಬಂಡಾ ಘೋರ್ಪಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts