More

    ಕನಸು ನನಸಾಗಿಸಿಕೊಳ್ಳಲು 90 ಸಾವಿರ ರೂ. ನಾಣ್ಯಗಳಿರುವ ಚೀಲದೊಂದಿಗೆ ಬಂದ ವ್ಯಕ್ತಿ!

    ಗುವಾಹಟಿ: ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ತನ್ನಿಷ್ಟದ ಸ್ಕೂಟರ್​ ಖರೀದಿ ಮಾಡುವ ಮೂಲಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದಾನೆ. ಸ್ಕೂಟರ್​ ಖರೀದಿಸುವುದು ಸಾಮಾನ್ಯ. ಅದರಲ್ಲಿ ಸುದ್ದಿಯಾಗುವಂಥದ್ದು ಏನಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಅದಕ್ಕೆ ಉತ್ತರ ಮುಂದಿದೆ ಓದಿ.

    ಅಸ್ಸಾಂನ ಈ ವ್ಯಕ್ತಿ ಸ್ಕೂಟರ್​ ಖರೀದಿ ಮಾಡಿದ ರೀತಿಯಿಂದಾಗಿ ಸುದ್ದಿಯಾಗಿದ್ದಾರೆ. ಡಿ ಸೈದುಲ್ ಹೊಕ್ ಅವರು ದರ್ರಾಂಗ್ ಜಿಲ್ಲೆಯ ಸಿಪಾಜರ್ ಪ್ರದೇಶದ ನಿವಾಸಿಯಾಗಿದ್ದು, ಗುವಾಹಟಿಯಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ. ಅನೇಕ ವರ್ಷಗಳಿಂದ ಸಂಗ್ರಹಿಸಿದ ನಾಣ್ಯಗಳಿರುವ ಚೀಲದೊಂದಿಗೆ ಸ್ಕೂಟರ್​ ಶೋರೂಮ್​​ಗೆ ಎಂಟ್ರಿ ಕೊಟ್ಟ ಸೈದುಲ್​ ಹೂಕ್​, ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿ ಮಾಡಿದ್ದಾರೆ.

    ಇದನ್ನೂ ಓದಿ: ಕಾಂಚೀಪುರಂನಲ್ಲಿರುವ ಪಟಾಕಿ ಗೋದಾಮಿನಲ್ಲಿ ಸ್ಫೋಟ; 7 ಮಂದಿ ಸಾವು, ಹಲವರಿಗೆ ಗಾಯ

    ಈ ಬಗ್ಗೆ ಮಾತನಾಡಿರುವ ಸೈದುಲ್​ ಹೂಕ್​, ನಾನು ಬೋರಗಾಂವ್ ಪ್ರದೇಶದಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದೇನೆ ಮತ್ತು ಸ್ಕೂಟರ್ ಖರೀದಿಸುವುದು ನನ್ನ ಕನಸಾಗಿತ್ತು. ನಾನು ಸುಮಾರು 5-6 ವರ್ಷಗಳ ಹಿಂದೆ ನಾಣ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಅಂತಿಮವಾಗಿ ನಾನು ನನ್ನ ಕನಸನ್ನು ನನಸಾಗಿಸಿದ್ದೇನೆ. ಈಗ ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ ಎಂದು ಮಾಧ್ಯಮವೊಂದರ ಬಳಿ ಸೈದುಲ್ ಹೊಕ್ ಸಂತಸ ಹಂಚಿಕೊಂಡಿದ್ದಾರೆ.

    ಗ್ರಾಹಕರೊಬ್ಬರು ಸುಮಾರು 90,000 ರೂ. ನಾಣ್ಯಗಳೊಂದಿಗೆ ಸ್ಕೂಟರ್ ಖರೀದಿಸಲು ಶೋರೂಮ್‌ಗೆ ಬಂದಿದ್ದಾರೆ ಎಂದು ನನ್ನ ಕಾರ್ಯನಿರ್ವಾಹಕ ಅಧಿಕಾರಿ ನನಗೆ ಹೇಳಿದಾಗ ತುಂಬಾ ಖುಷಿಯಾಯಿತು. ಇಂತಹ ಸುದ್ದಿಗಳನ್ನು ನಾನು ಟಿವಿಯಲ್ಲಿ ನೋಡಿದ್ದೆ. ಆದರೆ, ಇದೀಗ ನನ್ನ ಶೋರೂಮ್​ನಲ್ಲಿ ಇಂತಹ ಘಟನೆ ನಡೆದಿರುವುದು ಸಂತಸವಾಯಿತು. ಭವಿಷ್ಯದಲ್ಲಿ ಆತ ನಾಲ್ಕು ಚಕ್ರದ ವಾಹನವನ್ನು ಖರೀದಿಸುವಷ್ಟರ ಮಟ್ಟಿಗೆ ಬೆಳೆಯಲಿ ಎಂದು ಬಯಸುತ್ತೇನೆ ಎಂದು ಶೋರೂಮ್​ ಮಾಲೀಕ ಹೇಳಿದರು.

    ಇದನ್ನೂ ಓದಿ: ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!

    ಇನ್ನು ನಾಣ್ಯಗಳ ಮೂಲಕ ಕಾರು ಅಥವಾ ಸ್ಕೂಟರ್ ಖರೀದಿಸಿದ ಘಟನೆ ಇದೇ ಮೊದಲಲ್ಲ. ಕಳೆದ ವರ್ಷದ ಆರಂಭದಲ್ಲಿ ಉತ್ತರಾಖಂಡದ ರುದ್ರಪುರದ ವ್ಯಕ್ತಿಯೊಬ್ಬರು ಸ್ಥಳೀಯ ಟಿವಿಎಸ್ ಡೀಲರ್‌ನಿಂದ ಟಿವಿಎಸ್ ಜೂಪಿಟರ್ ಸ್ಕೂಟರ್ ಖರೀದಿಸಲು 50,000 ರೂ. ನಾಣ್ಯಗಳನ್ನು ನೀಡಿದ್ದರು. 2022ರ ಮಾರ್ಚ್​ನಲ್ಲಿ ತಮಿಳುನಾಡಿನ 29 ವರ್ಷದ ವಿ.ಭೂಪತಿ ಎಂಬುವರು ಬಜಾಜ್ ಡೊಮಿನಾರ್ 400 ಬೈಕ್​ ಖರೀದಿಸಲು 2.6 ಲಕ್ಷ ರೂ. ಅನ್ನು 1 ರೂ. ನಾಣ್ಯಗಳಲ್ಲಿ ಪಾವತಿಸಿದ್ದರು. ನಾಣ್ಯಗಳನ್ನು ಎಣಿಸಲು ಸುಮಾರು 10 ಗಂಟೆ ಸಮಯ ಹಿಡಿದಿತ್ತು. (ಏಜೆನ್ಸೀಸ್​)

    ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ ಪ್ರಕರಣ: ಕಾರು ಚಾಲಕನ ಮಾತು ನಂಬಿ ಕೆಟ್ಟ ಮನೆಗೆಲಸದಾಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts