More

    ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿ; ಅಧಿಕೃತ ಘೋಷಣೆ: ಅಭಿನಂದನೆಗಳ ಮಹಾಪೂರ..

    ನವದೆಹಲಿ: ಅಧಿಕೃತ ಘೋಷಣೆಗೂ ಮುನ್ನವೇ ದ್ರೌಪದಿ ಮುರ್ಮು ಅವರ ಗೆಲುವು ನಿಚ್ಚಳಗೊಂಡಿದ್ದು, ಇದೀಗ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ವಿಜಯ ಗಳಿಸಿದ್ದಾರೆ ಎಂಬ ಅಧಿಕೃತ ಘೋಷಣೆ ಕೂಡ ಆಗಿದೆ.

    ರಾಜ್ಯಸಭೆಯ ಸೆಕ್ರೆಟರಿ-ಜನರಲ್, ರಾಷ್ಟ್ರಪತಿ ಚುನಾವಣೆಯ ಅಧಿಕಾರಿಯೂ ಆಗಿರುವ ಪಿ.ಸಿ. ಮೋಡಿ, ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿ 2022ರ ರಾಷ್ಟ್ರಪತಿ ಚುನಾವಣೆಯಲ್ಲಿ ವಿಜಯ ಗಳಿಸಿದ್ದಾರೆ ಎಂಬುದನ್ನು ಘೋಷಣೆ ಮಾಡಿದ್ದಾರೆ.

    ಈ ಚುನಾವಣೆಯಲ್ಲಿ ಒಟ್ಟು 4754 ಮತ ಚಲಾವಣೆ ಆಗಿದ್ದು, ಅದರಲ್ಲಿ 53 ಅಸಿಂಧುವಾಗಿದ್ದು, 4701 ಸಿಂಧುವಾಗಿದೆ. ರಾಷ್ಟ್ರಪತಿಯಾಗಿ ಆಯ್ಕೆಯಾಗಲು 5,28,491 ಮತಮೌಲ್ಯ ಅಗತ್ಯವಿದ್ದು, ದ್ರೌಪದಿ ಮುರ್ಮು ಅವರಿಗೆ 2824 ಮತ ಚಲಾವಣೆ ಆಗಿದ್ದು, ಅವುಗಳ ಮತಮೌಲ್ಯ 6,76,803 ಆಗಿದೆ ಎಂದು ಸೆಕ್ರೆಟರಿ ಜನರಲ್ ತಿಳಿಸಿದ್ದಾರೆ.

    ಇನ್ನು ದ್ರೌಪದಿ ಮುರ್ಮು ಅವರ ಗೆಲುವು ಖಚಿತವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ನಿವಾಸದಲ್ಲಿ ದ್ರೌಪದಿ ಅವರನ್ನು ಭೇಟಿಯಾಗಿ ಅಭಿನಂದನೆಗಳನ್ನು ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರದ ಸಚಿವರು, ಸಂಸದರು ಮುಂತಾದವರೆಲ್ಲ ಪ್ರತ್ಯಕ್ಷ/ಪರೋಕ್ಷವಾಗಿ ಶುಭ ಹಾರೈಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

    ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ

    ಸೇತುವೆ ಮೇಲೆ ಡಿಯೋ ನಿಲ್ಲಿಸಿ, ನದಿಗೆ ಹಾರಿದ ವಿದ್ಯಾರ್ಥಿನಿ; ತಾಲೂಕು ಪಂಚಾಯಿತಿ ಸದಸ್ಯನ ಪುತ್ರಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts