More

  ಡಾ.ಸಂಕೇಶ್ವರ ದೂರದೃಷ್ಟಿಯಿಂದ ವಿಜಯವಾಣಿ ನಂ.1

  ಬೆಳಗಾವಿ: ಯಾವ ಮಾಧ್ಯಮ ಧರ್ಮಕ್ಕೆ ಒತ್ತು ನೀಡುತ್ತದೆಯೋ ಅದು ನಂ.1 ಆಗುತ್ತದೆ ಎಂದು ಡಾ.ವಿಜಯ ಸಂಕೇಶ್ವರ ಅವರು ಸಾಧಿಸಿ ತೋರಿಸಿದ್ದಾರೆ ಎಂದು ಶ್ರೀಶೈಲ ಪೀಠದ ಶ್ರೀಮದ್ ಗಿರಿರಾಜ ಸೂರ್ಯಸಿಂಹಸನಾಧೀಶ್ವರ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ವಿಜಯವಾಣಿ ಬೆಳಗಾವಿ ಕಚೇರಿಯಲ್ಲಿ ಗುರುವಾರ ರಾತ್ರಿ 2020ನೇ ಸಾಲಿನ ವಿಜಯವಾಣಿ ದಿನದರ್ಶಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

  ಭಾರತ ಧರ್ಮ ಪ್ರಧಾನವಾದ ದೇಶ. ಇಲ್ಲಿ ಧರ್ಮ ಪ್ರಚಾರ, ಪ್ರಸಾರವಾಗಬೇಕಾಗಿರುವುದು ಮಹತ್ವದ ಸಂಗತಿಗಳಲ್ಲಿ ಒಂದು. ಈ ಮಹಾಕಾರ್ಯವನ್ನು ವಿಜಯವಾಣಿ ದಿನಪತ್ರಿಕೆ ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ. ಒಂದು ಕಾಲದಲ್ಲಿ ಧರ್ಮದ ಸುದ್ದಿಗಳಿಗೆ ಮಹತ್ವ ಇರಲಿಲ್ಲ. ಆದರೆ, ಧರ್ಮ ಪ್ರಧಾನ ದೇಶದಲ್ಲಿ ಈ ತಾರತಮ್ಯ ಸರಿಪಡಿಸುವ ಉದಾತ್ತ ಉದ್ದೇಶ ಇಟ್ಟುಕೊಂಡು ವಿಜಯವಾಣಿ ಪತ್ರಿಕೆ ಆರಂಭವಾಗಿದೆ ಎಂದರು.

  ಮಾಲೀಕರಾದ ಡಾ.ವಿಜಯ ಸಂಕೇಶ್ವರ ಅವರ ದೂರದೃಷ್ಟಿಕೋನ, ನಿರಂತರ ಪರಿಶ್ರಮ ಮತ್ತು ಸಮಾಜಮುಖಿ ನಿಲುವಿನಿಂದ ವಿಜಯವಾಣಿ ಕನ್ನಡದ ನಂ.1 ದಿನಪತ್ರಿಕೆಯಾಗಿದೆ. ಈ ಸಾಧನೆಯಲ್ಲಿ ಸಿಬ್ಬಂದಿ ಶ್ರಮ ಅಪಾರ. ಉತ್ತಮ ಸುದ್ದಿ ಪ್ರಸಾರ ಮಾಡುವುದರಿಂದ ಓದುಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಲವು ವರ್ಷಗಳಿಂದ ನಂ.1 ಪಟ್ಟ ಕಾಯ್ದುಕೊಂಡು ಬಂದಿದೆ. ಮುಂಬರುವ ದಿನಗಳಲ್ಲೂ ಈ ಪತ್ರಿಕೆ ಧರ್ಮ ಮತ್ತು ಒಳ್ಳೆಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಿ ಎಂದು ಶುಭ ಹಾರೈಸಿದರು.

  ಬೆಳಗಾವಿ ವಿಆರ್‌ಎಲ್ ಲಾಜಿಸ್ಟಿಕ್‌ನ ವ್ಯವಸ್ಥಾಪಕ ಮಹಾಂತೇಶ ಗಾಡವಿ, ವಿಜಯವಾಣಿ ಸ್ಥಾನಿಕ ಸಂಪಾದಕ ರಾಯಣ್ಣ ಆರ್.ಸಿ., ಜಾಹೀರಾತು ವಿಭಾಗದ ವ್ಯವಸ್ಥಾಪಕ ದಶರಥ ಹಿತ್ತಲಕೇರಿ, ಪ್ರಸಾರಾಂಗ ವಿಭಾಗದ ಸಹಾಯಕ ವ್ಯವಸ್ಥಾಪಕ ರಘುವೀರ ಕುಲಕರ್ಣಿ ಹಾಗೂ ಸಿಬ್ಬಂದಿ ಇದ್ದರು.

  See also  ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts