More

    ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು; ಡಾ.ಜಿ ಪರಮೇಶ್ವರ್​​

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸೀಟುಗಳನ್ನು ಗೆದ್ದು ಭರ್ಜರಿ ಯಶಸ್ಸು ಸಾಧಿಸಿದೆ. ಮುಖ್ಯಮಂತ್ರಿ ಹುದ್ದೆಯ ಹಗ್ಗ ಜಗ್ಗಾಟದಲ್ಲಿ ಕೊನೆಗೂ ಸಿದ್ದರಾಮಯ್ಯ ಪಾಲಾಗಿದೆ. ಡಿಸಿಎಂ ಸ್ಥಾನಕ್ಕೆ ಡಿ.ಕೆ ಶಿವಕುಮಾರ್​​ ಅವರಿಗೆ ಎಂದು ಅಧಿಕೃತ ಎಂದು ಘೋಷಣೆ ಮಾಡಲಾಗಿದೆ. ಈ ಮಧ್ಯ ಕಾಂಗ್ರೆಸ್​ ಡಿಸಿಎಂಗೆ ಪರಮೇಶ್ವರ್ ಬಿಗಿಪಟ್ಟು ಹಿಡಿದಿದ್ದಾರೆ.

    ಹಿಂದೆ ನಾನು ಡಿಸಿಎಂ ಆಗಿದ್ದೇನು, ಹೀಗಾಗಿ ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು. ಡಿ. ಕೆ ಶಿವಕುಮಾರ್ ಒಬ್ಬರೇ ಸಾಕು ಅಂತ ಹೇಳೋಕೆ ಬರೊಲ್ಲ. ಈ ಬಾರಿ ಎಲ್ಲ ಸಮುದಾಯ ಕೈ ಹಿಡಿದಿದೆ. ಹೀಗಾಗಿ ಅಧಿಕಾರ ಕೊಡಬೇಕು ಎಂದು ಡಾ.ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕು ಎನ್ನುವುದು ಸೂಕ್ತ ಅಲ್ಲ. ಡಿಸಿಎಂ ಸ್ಥಾನವನ್ನು ಕೊಡಬೇಕಾಗುತ್ತದೆ. ಎಲ್ಲ ಸಮುದಾಯಗಳನ್ನು ಪರಿಗಣಿಸಿ ಡಿಸಿಎಂ ಸ್ಥಾನ ಕೊಡಬೇಕಾಗುತ್ತದೆ. ನಾನೂ ಕೂಡ ಡಿಸಿಎಂ ಆಗಿದ್ದವನು. ಎಲ್ಲರ ನಾಯಕತ್ವದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದಿದ್ದಾರೆ.

    ಇದನ್ನೂ ಓದಿ: ಆಟೋ ರಿಕ್ಷಾಕ್ಕೆ ಡಿಕ್ಕಿಯಾದ ನಿಂಬೆಹಣ್ಣು ತುಂಬಿದ ಟ್ರಕ್; 6 ಮಹಿಳಾ ಕಾರ್ಮಿಕರು ಮೃತ್ಯು, 6 ಮಂದಿ ಗಂಭೀರ

    ದಲಿತ ಅಭ್ಯರ್ಥಿ ಸಿಎಂ ಆಗುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ‌ವಾಗಿದೆ. ಈಗ ಯಾವ ರೀತಿ ದಲಿತರಿಗೆ ಸ್ಥಾನ ಕೊಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ಬಾರಿ ದಲಿತರು, ಲಿಂಗಾಯತರು, ಅಲ್ಪಸಂಖ್ಯಾತರ ಸ್ಟ್ರಾಂಗ್ ಆಗಿ ಕಾಂಗ್ರೆಸ್ ಪರ ನಿಂತು ಮತ ಹಾಕಿದ್ದಾರೆ. ದಲಿತರ ಸ್ಥಾನದ ಪೈಕಿ 51 ಸ್ಥಾನದಲ್ಲಿ 37 ಸ್ಥಾನ ಗೆದ್ದಿದೆ. ಈ ಸಮುದಾಯಗಳಿಗೆ ನ್ಯಾಯ ಕೊಡುತ್ತಾರೆ ನೋಡಬೇಕು ಎಂದಿದ್ದಾರೆ.
    ಸಿಎಂ ಸ್ಥಾನದ ಬಗ್ಗೆ ಇರುವ ಗೊಂದಲ ಬಗೆಹರಿದಿದೆ. ಅಧಿಕೃತವಾಗಿ ಸಂಜೆ ಘೋಷಣೆ ಮಾಡುತ್ತಾರೆ. CLP ಸಭೆ ಇದೆ ಆಗ ಪ್ರಕಟ ಆಗುತ್ತದೆ. ವೀಕ್ಷಕರು ಬರ್ತಾರೆ. ಅವರೇ ಘೋಷಣೆ ಮಾಡುತ್ತಾರೆ ಎಂದು ಹೇಳಿದ್ದಾರೆ.

    ರಾಜಭವನಕ್ಕೆ ತೆರಳಿದ್ದ ಡಾ ಜಿ ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಯಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಪತ್ರ ನೀಡಿದ ಡಾ ಜಿ ಪರಮೇಶ್ವರ್ , ಮೇ ೨೦ ರಂದು ಪ್ರಮಾಣ ವಚನಕ್ಕೆ ದಿನಾಂಕ ನಿಗದಿ ಮಾಡಲು ಮನವಿ ಮಾಡಿದ್ದಾರೆ.

    ಸ್ನೇಹಿತರ ಜತೆ ಆಟವಾಡುತ್ತಿದ್ದಂತೆ ಪ್ರಾಣ ಬಿಟ್ಟ 8ನೇ ತರಗತಿ ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts