More

    ಡಾ. ಹೆಗ್ಗೆಡೆಯವರ ತೇಜೋವಧೆ ಖಂಡನಿಯ

    ಧಾರವಾಡ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಳಂಕರಹಿತ ವ್ಯಕ್ತಿತ್ವ ಹೊಂದಿದವರು. ಅವರ ಶ್ರೇಯಸ್ಸನ್ನು ಕಂಡು ಸಹಿಸಲಾರದೆ ಕೆಲ ದೈವವಿರೋಧಿ ಮನಸ್ಸುಗಳು 10 ವರ್ಷಗಳ ಹಿಂದಿನ ಸೌಜನ್ಯಳ ಹತ್ಯೆಯನ್ನು ನೆಪವಾಗಿಟ್ಟುಕೊಂಡು ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದ್ದಾರೆ.
    ಪ್ರಕಟಣೆ ನೀಡಿರುವ ಅವರು, ಸರ್ವಧರ್ಮ ಸಮನ್ವಯ ಕೇಂದ್ರವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಬಹುಕೋಟಿ ಭಕ್ತರ ಪವಿತ್ರ ಕ್ಷೇತ್ರ. ಪುಣ್ಯ ಪ್ರಾಪ್ತಿಗಾಗಿ ದಿನನಿತ್ಯ ಸಾವಿರಾರು ಭಕ್ತರು ಕ್ಷೇತ್ರಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಡಾ. ಹೆಗ್ಗಡೆಯವರು ಚತುರ್ವಿದ ದಾನಗಳಲ್ಲಿ ಒಂದಾದ ಅನ್ನದಾಸೋಹದ ಮೂಲಕ ನಿತ್ಯ ಲಕ್ಷಾಂತರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ. ಸೌಜನ್ಯ ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಹೆಗ್ಗಡೆಯವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು. ಆ ಪ್ರಕಾರ ಸಿಬಿಐ ತನಿಖೆಯಾಗಿ ನ್ಯಾಯಾಲಯದ ತೀರ್ಪು ಬಂದಿದೆ. ಆದರೂ ಕಪೋಲಕಲ್ಪಿತ ಕತೆಗಳನ್ನು ಕಟ್ಟಿ ವಿನಾಕಾರಣ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ಹೆಸರನ್ನು ತಳಕು ಹಾಕಿ ಜಾಲತಾಣಗಳ ಮೂಲಕ ಅಪಮಾನ ಮಾಡುತ್ತಿರುವುದು ಸಮಂಜಸವಲ್ಲ.
    800 ವರ್ಷಗಳ ಐತಿಹಾಸಿಕ, ಧಾರ್ಮಿಕ ಪರಂಪರೆ ಹೊಂದಿರುವ ಶ್ರೀಕ್ಷೇತ್ರ ಇಂದಿನವರೆಗೂ ಸರ್ವಜನಾಂಗದ ಶಾಂತಿಯ ತೋಟವಾಗಿ ಬೆಳೆದು ಬಂದಿದೆ. ಇಂತಹ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ಕುಟುಂಬದ ಅವಹೇಳನ ಮಾಡುತ್ತಿರುವ ದೈವವಿರೋಧಿಗಳ ಪ್ರಯತ್ನಕ್ಕೆ ಕಡಿವಾಣ ಹಾಕಬೇಕು ಎಂದು ಡಾ. ಅಜಿತ ಪ್ರಸಾದ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts