More

    ಮನೆ ಮನೆಯಲ್ಲಿ ಕ್ಯಾಥೋಲಿಕ್ ಸಭಾ ಅಭಿಯಾನ

    ಮಂಗಳೂರು: ಕ್ಯಾಥೋಲಿಕ್ ಸಭಾ ಶಕ್ತಿನಗರ ಟಕದ ವತಿಯಿಂದ ಮನೆ ಮನೆಯಲ್ಲಿ ಕ್ಯಾಥೋಲಿಕ್ ಸಭಾ ಅಭಿಯಾನ ನಡೆಯಿತು.

    ಶಕ್ತಿನಗರದ ಕ್ಲಾರೆನ್ಸ್ ಸಿಕ್ವೇರಾ ಅವರ ಮನೆಯಲ್ಲಿ ಈ ಅಭಿಯಾನದ ಉದ್ಘಾಟನೆ ನೆರವೇರಿಸಿದ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಕೇಂದ್ರ ಸಮಿತಿ ಅಧ್ಯಕ್ಷ ಆಲ್ವಿನ್ ಡಿ ಸೋಜಾ ಪಾನೀರ್ ಅವರು ವಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿಯೊಂದು ಟಕ ಮತ್ತು ವಲಯದಲ್ಲಿ ನಡೆಯಬೇಕು ಎಂದು ಹೇಳಿದರು.

    ಶಕ್ತಿನಗರ ಟಕದ ಅಧ್ಯಕ್ಷ ಅರುಣ್ ಡಿ ಸೋಜಾ ಅವರನ್ನು ಸನ್ಮಾನಿಸಲಾಯಿತು.

    ಶಕ್ತಿನಗರ ಚರ್ಚ್ ಧರ್ಮಗುರು ಜೆರಾಲ್ಡ್ ಡಿ ಸೋಜಾ, ಕ್ಯಾಥೋಲಿಕ್ ಸಭಾ ವಾಜಿ ಅಧ್ಯಕ್ಷ ರಾಲ್ಫಿ ಡಿ ಕೋಸ್ತಾ, ಫ್ರಾನ್ಸಿಸ್ ಮೊಂತೆರೊ, ಲವೀನಾ ಡಿಸೋಜ, ಸಿಟಿ ವಲಯ ಅಧ್ಯಕ್ಷ ವಿಲ್ಫ್ರೆಡ್ ಅಲ್ವಾರಿಸ್, ವಲಯ ಆಮ್ಚೋ ಸಂದೇಶ ಪ್ರತಿನಿಧಿ ರೊನಾಲ್ಡ್ ರೊಡ್ರಿಗಸ್, ಶಕ್ತಿನಗರ ಚರ್ಚ್ ಉಪಾಧ್ಯಕ್ಷ ಸ್ಟಾೃನಿ ಮಸ್ಕರೇನ್ಹಸ್, ಕಾರ್ಯದರ್ಶಿ ಮೇರಿ ಪಿಂಟೊ, ವಾರ್ಡ್ ಗುರಿಕಾರ ಆಶಾ ಮೊಂತೆರೋ, ವಾಜಿ ಸೈನಿಕ ಕ್ಲಾರೆನ್ಸ್ ಸಿಕ್ವೇರಾ ಉಪಸ್ಥಿತರಿದ್ದರು.

    ಶಕ್ತಿನಗರ ಟಕದ ಅಧ್ಯಕ್ಷ ಅರುಣ್ ಡಿಸೋಜ ಸ್ವಾಗತಿಸಿ, ಕಾರ್ಯದರ್ಶಿ ಟೋನಿ ಪಿಂಟೊ ವಂದಿಸಿದರು. ಪ್ರೀವಾ ಫೆರಾವೋ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts