More

    ಮನೆಮನೆಗೆ ಮತದಾನ ಜಾಗೃತಿ ಸ್ಟಿಕ್ಕರ್

    ಚನ್ನರಾಯಪಟ್ಟಣ : ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕಳೆದ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾಗಿರುವ ಗ್ರಾಮ ಹಾಗೂ ನಗರದ ವಿವಿಧ ವಾರ್ಡ್‌ಗಳಲ್ಲಿ ಅಭಿಯಾನದ ಮೂಲಕ ಮನೆಗಳಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಸ್ಟಿಕ್ಕರ್ ಅಂಟಿಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಹರೀಶ್ ತಿಳಿಸಿದರು.

    ಪಟ್ಟಣದ ಕುವೆಂಪು ನಗರದಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನದ ಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಪಟ್ಟಣದಲ್ಲಿ 18 ಮತಗಟ್ಟೆಗಳಿದ್ದು, ಇನ್ನುಳಿದ 6 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. 2019 ಲೋಕಸಭಾ ಚುನಾವಣೆಯಲ್ಲಿ ಪಟ್ಟಣದ ಪ್ರದೇಶದ 6 ಮತಗಟ್ಟೆ ಹಾಗೂ ಪಟ್ಟಣದ ಕುವೆಂಪು ನಗರದಲ್ಲಿ ಶೇ.67 ಕ್ಕಿಂತ ಕಡಿಮೆ ಮತದಾನ ಆಗಿದೆ. ಇಲ್ಲಿನ ಮನೆಗಳಿಗೆ ತೆರಳಿ ಎಲ್ಲಕಡೆ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಈ ಬಾರಿ ಶೇ.85ಕ್ಕಿಂತ ಹೆಚ್ಚು ಮತದಾನವಾಗಬೇಕೆಂಬುದು ಚುನಾವಣಾ ಆಯೋಗದ ಗುರಿಯಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು, 85ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶವನ್ನೂ ನೀಡಿದೆ. ಈಗಾಗಲೇ ಅಂತಹವರ ಪಟ್ಟಿಮಾಡಿ ಅವರ ಅನುಮತಿಯನ್ನೂ ಪಡೆಯಲಾಗಿದೆ ಎಂದರು.

    ಏ.21ರಿಂದ 26ರವರೆಗೆ ನಮ್ಮ ನಡೆ ಮತಗಟ್ಟೆ ಕಡೆ ಎಂಬ ಕಾರ್ಯಕ್ರಮ ಆಯೋಜಿಸಿದ್ದು, ಇದರ ಅಂಗವಾಗಿ ಪ್ರತಿಯೊಂದು ಮತಗಟ್ಟೆಯಲ್ಲೂ ಧ್ವಜಾರೋಹಣ ನೆರವೇರಿಸಲಾಗುವುದು. ಮಾದರಿ ನೀತಿಸಂಹಿತೆಯ ಉಲ್ಲಂಘನೆ ಎಲ್ಲೇ ಕಂಡುಬಂದರೂ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

    ಪುರಸಭೆ ಮುಖ್ಯಾಧಿಕಾರಿ ಕೆ.ಎನ್. ಹೇಮಂತ್, ಪುರಸಭೆ ಮತ್ತು ತಾಪಂ ಸಿಬ್ಬಂದಿ ಮತದಾನದ ಮಹತ್ವ ಸಾರುವ ನಾಮಫಲಕಗಳನ್ನು ಹಿಡಿದು ಜಾಥಾದಲ್ಲಿ ಪಾಲ್ಗೊಂಡರು. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್, ಪುರಸಭಾ ಅಧಿಕಾರಿ ಉಮಾದೇವಿ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts