More

    ಮನೆ-ಮನೆಗೆ ಮಂತ್ರಾಕ್ಷತೆ ಇಂದು ಚಾಲನೆ

    ಬೈಲಹೊಂಗಲ: ಅಯೋಧ್ಯೆ ಮಂತ್ರಾಕ್ಷತೆ ಮನೆ, ಮನೆಗೆ ತಲುಪಿಸುವ ಪುಣ್ಯ ಕಾರ್ಯಕ್ಕೆ ಜ.6ರಂದು ಮೂರುಸಾವಿರಮಠದಿಂದ ಚಾಲನೆ ನೀಡಲಾಗುವುದರಿಂದ ನಾಡಿನ ಎಲ್ಲ ಪೂಜ್ಯರನ್ನು ಆಹ್ವಾನಿಸಲಾಗಿದೆ. ರುದ್ರ ಹೋಮ, ಪೂರ್ಣಾಹುತಿ ನೆರವೇರಿಸಲಾಗುವುದು ಎಂದು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

    ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ವಿಶ್ವಹಿಂದು ಪರಿಷತ್, ಬಜರಗಂದಳ ತಾಲೂಕು ಘಟಕದಿಂದ ಅಯೋಧ್ಯೆ ಮಂತ್ರಾಕ್ಷತೆ ಮನೆ, ಮನೆಗೆ ತಲುಪಿಸುವ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರಭು ಶ್ರೀರಾಮನ ಸನ್ನಿಧಿಯಿಂದ ಪೂಜಿಸಲ್ಪಟ್ಟ ಅಕ್ಷತೆಯ ವಿತರಣೆ ಪುಣ್ಯ ಕೆಲಸವಾಗಿದೆ. ನಮ್ಮ ಕಾಲದಲ್ಲಿ ಅಯೋಧ್ಯೆ ಪ್ರಭು ಶ್ರೀರಾಮನ ಮಂದಿರ ಉದ್ಘಾಟನೆಗೊಳ್ಳುತ್ತಿರುವುದು ಇತಿಹಾಸ ಎಂದರು.

    ವಿಶ್ವಹಿಂದು ಪರಿಷತ್ ಜಿಲ್ಲಾ ಘಟಕ ಉಪಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ಯುವ ಮುಖಂಡ ಗೌತಮ ಇಂಚಲ, ಮುಖಂಡರಾದ ವಿವೇಕಾನಂದ ಪೂಜೇರ, ಗುರು ಮೆಟಗುಡ್ಡ, ಪ್ರಫುಲ್ ಪಾಟೀಲ, ವಿಜಯ ಪತ್ತಾರ, ಎಂ.ವಿ.ಸಾಲಿಮಠ, ಸಂಗಮೇಶ ಸಂವದತ್ತಿಮಠ, ಸಚಿನ ಚೀಲದ, ಪ್ರಶಾಂತ ಅಮ್ಮನಿಬಾವಿ, ಗಿರೀಶ ಹರಕುಣಿ, ಬಸವರಾಜ ಶಿಂತ್ರಿ, ಸಾಗರ ಭಾವಿಮನಿ, ಮಲ್ಲಿಕಾರ್ಜುನ ವಕ್ಕುಂದಮಠ, ಆದರ್ಶ ಗುಂಡಗವಿ, ಸುಭಾಸ ತುರಮರಿ, ಬಸವರಾಜ ದೊಡಮನಿ, ಸಚಿನ ಖಡಿ, ಮಧು ಬುಲಬುಲೇ, ಸಂತೋಷ ಹಡಪದ, ಮಲ್ಲು ಬೆಳಗಾವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts