More

    ಕಟ್ಟಡ ಉದ್ಘಾಟನೆಗೆ ಕಾಲಹರಣ ಬೇಡ

    ಹಳಿಯಾಳ: ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯ ಮುಗಿದಲ್ಲಿ ಅವುಗಳನ್ನು ತಕ್ಷಣ ಬಳಸಲು ಆರಂಭಿಸಿ. ಉದ್ಘಾಟನೆಗಾಗಿ ತಿಂಗಳುಗಟ್ಟಲೇ ಕಾಯುತ್ತ ದಿನದೂಡಬೇಡಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಹೇಳಿದರು.

    ಶುಕ್ರವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪ್ರೋಟೋಕಾಲ್ ನಿಯಮಾವಳಿಯಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ನಾನಾಗಲಿ ಉದ್ಘಾಟನೆಗೆ ಲಭ್ಯವಿಲ್ಲದಿದ್ದರೇ ಆಯಾ ಗ್ರಾಪಂ, ಜಿಪಂ, ತಾಪಂ ಪ್ರತಿನಿಧಿಗಳಿಂದಲೇ ಉದ್ಘಾಟನೆ ನೆರವೇರಿಸಿ ಎಂದು ಆದೇಶಿಸಿದರು.

    ಸಮನ್ವಯತೆಯಿರಲಿ: ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳು ಆರಂಭವಾದಾಗ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಕಾಮಗಾರಿಯ ಹಂತ, ಆಗಬೇಕಾದ ಕಾರ್ಯಗಳ ಬಗ್ಗೆ ರ್ಚಚಿಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಬೇಕು ಎಂದರು.

    ಗಣರಾಜ್ಯೋತ್ಸವದ ಮುನ್ನ ತಾಲೂಕಿನೆಲ್ಲೆಡೆ ಸ್ವಚ್ಛತಾ ಸಪ್ತಾಹ ಆರಂಭಿಸಬೇಕು. ಈ ದಿಸೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು, ತಾಪಂ, ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳನ್ನು ಕರೆದು ಜ. 13ರಂದು ಸಭೆ ನಡೆಸಿ ಸ್ವಚ್ಛತಾ ಕಾರ್ಯ ಆರಂಭಿಸಬೇಕು ಎಂದು ತಹಸೀಲ್ದಾರರಿಗೆ ಸೂಚಿಸಿದರು.

    ತಾಲೂಕಿನಲ್ಲಿನ ಅತಿಕ್ರಮಣದಾರರು ಈ ಹಿಂದೆ ಅತಿಕ್ರಮಣ ಮಾಡಿದ ಜಮೀನು ಹೊರತು ಪಡಿಸಿ ಇನ್ನೂ ಹೆಚ್ಚಿನ ಒತ್ತುವರಿ ಮಾಡಲು ಮುಂದಾಗಬಾರದು ಎಂದು ಮನವಿ ಮಾಡಿದರು. ಸಾಂಬ್ರಾಣಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಎದುರಾಗಿರುವ ಅರಣ್ಯ ಅತಿಕ್ರಮಣದ ಸಮಸ್ಯೆಗೆ ಕಾನೂನಿನ ನಿಯಮಾವಳಿಯಂತೆ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಗೆ ಸೂಚಿಸಿದರು.

    ಅತಿವೃಷ್ಟಿ ಸಂತ್ರಸ್ತರಿಗೆ ನೀಡಿದ ಪರಿಹಾರದ ಮಾಹಿತಿಯನ್ನು ನೀಡಿದ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ 859 ಮನೆಗಳಿಗೆ ಹಾನಿಯಾಗಿದ್ದು, ಇಲಾಖೆಯಿಂದ 2.26ಕೋಟಿ ಹಾಗೂ ಎನ್​ಡಿಆರ್​ಎಫ್​ನಿಂದ 1.84ಕೋಟಿ ಅನುದಾನ ನೀದಲಾಗಿದೆ. ಕೆಸರೊಳ್ಳಿಯ ಸಂತೃಸ್ಥರಿಗೆ ಮನೆ ನಿರ್ವಣಕ್ಕಾಗಿ ವಾರದಲ್ಲಿ ಸ್ಥಳವನ್ನು ನಿಗದಿ ಪಡಿಸಿ ನೀಡಲಾಗುವುದೆಂದರು.

    ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಕೃಷ್ಣ ಪಾಟೀಲ, ಮಹೇಶ್ವರಿ ಮಿಶಾಳೆ, ತಾ.ಪಂ ಅಧ್ಯಕ್ಷೆ ರೀಟಾ ಸಿದ್ದಿ, ಉಪಾಧ್ಯಕ್ಷೆ ನೀಲವ್ವ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.

    ನರೇಗಾದಲ್ಲಿ ಜಿಲ್ಲೆಗೆ ಪ್ರಥಮ: ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನಕುಮಾರ ಸಾಲಿ ಇಲಾಖೆಯ ವರದಿಯನ್ನು ಮಂಡಿಸಿ, ನರೇಗಾ ಯೋಜನೆಯಲ್ಲಿ ಅತಿ ಹೆಚ್ಚು ಕೂಲಿಯನ್ನು (ಮಾನವ ದಿನಗಳನ್ನು) ನೀಡಿರುವ ಹಳಿಯಾಳ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಎಂದರು. ಆದರೆ, ಸರ್ಕಾರದಿಂದ 45 ದಿನಗಳ ನರೇಗಾ ವೇತನ 58ಲಕ್ಷ ಇನ್ನೂ ಬಿಡುಗಡೆಯಾಗ ಬೇಕಿದೆ. ವಿವಿಧ ವಸತಿ ಯೋಜನೆಯಡಿ ನಿರ್ವಿುಸಿದ 1298 ಮನೆಗಳಿಗೆ ಸರ್ಕಾರದಿಂದ 7.69ಕೋಟಿ ಮಂಜೂರಾಗ ಬೇಕಿದ್ದು, ವಸತಿ ನಿರ್ವಣದ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದರು. ತಕ್ಷಣ ಶಾಸಕ ದೇಶಪಾಂಡೆ ರಾಜೀವ ಗಾಂಧಿ ವಸತಿ ನಿಗಮದ ರಾಜ್ಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಫೋನ್ ಮೂಲಕ ಸಂರ್ಪಸಿ ಬಾಕಿಯಿರುವ ಬಿಲ್ ಬಿಡುಗಡೆ ಮಾಡಲು ಮನವಿ ಮಾಡಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts