More

    ‘ಕರೊನಾ ಟೆಸ್ಟ್ ಉಚಿತ’ ಅಂತ ನಿಮಗೂ ಮೆಸೇಜ್ ಬಂದಿದೆಯಾ? ಹುಷಾರಾಗಿರಿ!

    ಬೆಂಗಳೂರು: ಕಡಿಮೆ ಬೆಲೆಗೆ ಮಾಸ್ಕ್, ಸ್ಯಾನಿಟೈಸರ್ ಕೊಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಸೈಬರ್ ಖದೀಮರು ಇದೀಗ ಕರೊನಾಗೆ ಉಚಿತ ಪರೀಕ್ಷೆ ಮಾಡಿಸುವ ನೆಪದಲ್ಲಿ ಅಮಾಯಕರಿಗೆ ಬಲೆ ಬೀಸುತ್ತಿದ್ದಾರೆ.

    ಸೈಬರ್ ವಂಚಕರು, ಉಚಿತ ಕೋವಿಡ್-19 ಪರೀಕ್ಷೆ ಮಾಡಿಸುತ್ತೇವೆ ಎಂದು ಕೇಂದ್ರ ಸರ್ಕಾರದ ಹೆಸರಿನಲ್ಲಿ ಇ-ಮೇಲ್ ಮತ್ತು ಮೊಬೈಲ್‌ಗಳಿಗೆ ಸಂದೇಶಗಳನ್ನು ಕಳುಹಿಸುತ್ತಾರೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಳಾಸ, ಹೆಸರು, ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರ ಭರ್ತಿ ಮಾಡಿ ಎಂದು ಸೂಚಿಸುತ್ತಾರೆ. ಅವರು ಕೇಳುವ ವಿವರ ಭರ್ತಿ ಮಾಡಿದರೆ ಸಾಕು ನಿಮ್ಮ ಬ್ಯಾಂಕ್ ಅಥವಾ ವ್ಯಾಲೆಟ್‌ನಲ್ಲಿ ಇರುವ ಹಣವನ್ನು ನಿಮಗೆ ಗೊತ್ತಾಗದಂತೆ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಇಂತಹ ಸಂದೇಶ ಇತ್ತೀಚೆಗೆ ಬಹಳಷ್ಟು ಮಂದಿಯ ಇಮೇಲ್ ಮತ್ತು ಮೊಬೈಲ್‌ಗಳಿಗೆ ಬರುತ್ತಿವೆ.

    ಇದನ್ನೂ ಓದಿ: ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಆದಾಯದ ಗುರಿ ನೀಡಿದ್ದ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ

    ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಅಹಮದಾಬಾದ್ ಮತ್ತು ಬೆಂಗಳೂರಿನ ನಿವಾಸಿಗಳನ್ನೇ ಹೆಚ್ಚಾಗಿ ಸೈಬರ್ ಕಳ್ಳರು ಟಾರ್ಗೆಟ್ ಮಾಡಿದ್ದಾರೆ. ಟೆಸ್ಟ್ ಅಷ್ಟೇ ಅಲ್ಲ, ದಿನಗೂಲಿ ಕಾರ್ಮಿಕರು, ರೈತರು ಮತ್ತಿತರರಿಗೆ ಸರ್ಕಾರ ೋಷಣೆ ಮಾಡಿರುವ ಹಣಕ್ಕೂ ಸೈಬರ್ ಕಳ್ಳರು ವಂಚನೆ ಮಾಡಲು ಬಲೆ ಬೀಸುತ್ತಿದ್ದಾರೆ. ಪ್ರಧಾನ ಮಂತ್ರಿ ಧನ ಸಹಾಯ ನೀಡುವುದಾಗಿಯೂ ಲಿಂಕ್‌ಗಳನ್ನು ಮೊಬೈಲ್‌ಗಳಿಗೆ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ. ಇದು ಸಹ ವಂಚಕರ ಮತ್ತೊಂದು ಮುಖವಾಡವಾಗಿದೆ.

    ರಾಷ್ಟ್ರೀಯ ಸುರಕ್ಷೆ: ಮೋದಿ ಬಗ್ಗೆ ಶೇ. 73ರಷ್ಟು ಜನರಿಗೆ ನಂಬಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts