More

    ಡೌನ್ ಸಿಂಡ್ರೋಮ್ ಮಕ್ಕಳನ್ನು ಕಡೆಗಣಿಸಬೇಡಿ : ಡಾ.ಎಸ್.ಎನ್. ಮೋತಿ

    ಮೈಸೂರು: ಡೌನ್ ಸಿಂಡ್ರೋಮ್ ಮಕ್ಕಳಿಂದ ಯಾವುದೇ ರೀತಿಯ ಸಾಧನೆ ಸಾಧ್ಯವಿಲ್ಲ ಎಂಬ ಭಾವನೆಯನ್ನು ಯಾವುದೇ ಕಾರಣಕ್ಕೂ ಪಾಲಕರು ಹೊಂದಬಾರದು. ಅವರಿಗೆ ಸಾಧನೆ ತೋರುವ ಅವಕಾಶಗಳನ್ನು ನೀಡಿದರೆ ನಿಶ್ಚಿತವಾಗಿಯೂ ಅವರು ಸಾಧಿಸುತ್ತಾರೆ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ರಾಜ್ಯಾಧ್ಯಕ್ಷ ಡಾ.ಎಸ್.ಎನ್. ಮೋತಿ ವಿಶ್ವಾಸ ವ್ಯಕ್ತಪಡಿಸಿದರು.

    ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಡೌನ್ ಸಿಂಡ್ರೋಮ್ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡೌನ್ ಸಿಂಡ್ರೋಮ್ ಮಕ್ಕಳು ಯಾವಾಗಲೂ ನಗುಮೊಗದಲ್ಲಿ ಇರುತ್ತಾರೆ. ಅವರು ಭಾವನೆಗಳನ್ನು ಅತ್ಯುತ್ತಮವಾಗಿ ಹಂಚಿಕೊಳ್ಳುತ್ತಾರೆ. ಈ ಕಾರಣಕ್ಕೆ ಈ ಮಕ್ಕಳು ತುಂಬಾ ವಿಶೇಷವಾದ ಮಕ್ಕಳು ಎಂದರು.

    ಡೌನ್ ಸಿಂಡ್ರೋಮ್ ಹೊಂದಿರುವವರಿಗೆ ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಸೂಕ್ತ ಪ್ರೋತ್ಸಾಹ ನೀಡಿದರೆ ಅವರು ಉತ್ತಮ ಸಾಧನೆಗಳನ್ನು ತೋರಬಲ್ಲರು. ಡೌನ್‌ಸಿಂಡ್ರೋಮ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಡೌನ್ ಸಿಂಡ್ರೋಮ್ ಇರುವ ವ್ಯಕ್ತಿಗಳಿಗೆ ಉತ್ತಮ ಅವಕಾಶಗಳನ್ನು ನೀಡಿ ಅವರಿಗೆ ಸಾಧನೆ ತೋರಲು ಅವಕಾಶ ನೀಡುವುದನ್ನು ಸಾಮಾಜಿಕ ಹೊರೆ ಅಂದುಕೊಳ್ಳದೆ ಸಾಮಾಜಿಕ ಹೊಣೆಗಾರಿಕೆ ಎಂದು ಸಮಾಜ ಭಾವಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts