More

    ಮಾತೃಭಾಷೆಯನ್ನು ಮರೆಯದಿರಿ

    ಸಾಗರ: ಭಾಷೆ ಸಂವಹನದ ಮಾಧ್ಯಮ ಮತ್ತು ಬಾಂಧವ್ಯವನ್ನು ಬೆಸೆಯುತ್ತದೆ. ಅದನ್ನು ವ್ಯವಸ್ಥಿತವಾಗಿ ಅರಿತುಕೊಳ್ಳಬೇಕು ಎಂದು ಶಿಕ್ಷಣ ಸಂಯೋಜಕ ವಿ.ಟಿ.ಸ್ವಾಮಿ ಹೇಳಿದರು.
    ನಗರದ ನಿರ್ಮಲಾ ಬಾಲಿಕಾ ಪ್ರೌಢಶಾಲೆಯಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಽಕಾರಿ ಕಚೇರಿಯಿಂದ ಏರ್ಪಡಿಸಿದ್ದ ಪ್ರೌಢಶಾಲಾ ಆಂಗ್ಲಮಾಧ್ಯಮ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಾವು ಭಾಷೆಯನ್ನು ಬೆಳೆಸುವುದರ ಜತೆಗೆ ನಿರಂತರವಾಗಿ ಬಳಸಬೇಕು ಎಂದರು.
    ಆಧುನಿಕ ಜಗತ್ತಿನಲ್ಲಿ ಸಂವಹನ ಅತಿಮುಖ್ಯ. ಭಾಷಾ ಪ್ರಾವೀಣ್ಯತೆ ಇರುವವರು ಸುಲಭವಾಗಿ ಯಶಸ್ಸು ಗಳಿಸುತ್ತಾರೆ. ಶಿಕ್ಷಕರು ತಮ್ಮ ಭಾಷೆ ಹಾಗೂ ಬೋಽಸುವ ವಿಷಯದ ಮೇಲೆ ಹಿಡಿತ ಸಾಽಸಬೇಕು. ಸರಳ, ಸಹಜವಾಗಿ ಕಲಿಸುವತ್ತ ಗಮನ ಹರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಒತ್ತು ನೀಡಬೇಕು. ಮಾತೃಭಾಷೆಯ ಜತೆಗೆ ಇತರ ಭಾಷೆಗಳನ್ನೂ ಮಕ್ಕಳಿಗೆ ಕಲಿಸುವ ಕೆಲಸವಾಗಬೇಕು ಎಂದರು.
    ಮುಖ್ಯಶಿಕ್ಷಕಿ ಗೀತಾ ಪಿಂಟೋ ಮಾತನಾಡಿ, ಭಾಷೆಯನ್ನು ಕಲಿಸುವ ಜತೆಗೆ ಅದರ ಮಹತ್ವವನ್ನು ಪರಿಣಾಮಕಾರಿಯಾಗಿ ಬೋಽಸಬೇಕು. ಶಿಕ್ಷಕರು ಕ್ರಿಯಾಶೀಲರಾಗಿದ್ದಷ್ಟೂ ಮಕ್ಕಳ ಜ್ಞಾನಾಭಿವೃದ್ಧಿ ಹೆಚ್ಚುತ್ತದೆ. ನಿರಂತರ ಪರಿಶ್ರಮ ಹಾಕಿದಾಗ ಯಾವ ವಿಷಯದಲ್ಲಿ ಬೇಕಾದರೂ ಪ್ರಬುದ್ಧತೆ ಸಾಽಸಲು ಸಾಧ್ಯ. ಕಲಿಕೆಯ ಗ್ರಹಿಕೆಗೆ ಇಂತಹ ಕಾರ್ಯಾಗಾರಗಳು ಪೂರಕ ಎಂದು ತಿಳಿಸಿದರು.
    ಇಂಗ್ಲಿಷ್ ಕ್ಲಬ್ ಉಪಾಧ್ಯಕ್ಷೆ ರಾಧಾ ಪ್ರಕಾಶ್, ಸಂಪನ್ಮೂಲ ವ್ಯಕ್ತಿ ಅಂತೋನಿ ಫರ್ನಾಂಡಿಸ್, ಎಂ.ಮಹೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts