

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಪಪ್ಪಾಯ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಪಪ್ಪಾಯ ಹಣ್ಣು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಪಪ್ಪಾಯ ತಿನ್ನುವುದು ತೂಕ ಇಳಿಸಲು ಸಹಕಾರಿಯಾಗಿದೆ. ಅಲ್ಲದೆ ಮಧುಮೇಹಿಗಳು ಕೂಡ ಮುಕ್ತವಾಗಿ ತಿನ್ನುವ ಹಣ್ಣುಗಳಲ್ಲಿ ಪಪ್ಪಾಯ ಕೂಡ ಒಂದು.ಅದಷ್ಟೆ ಅಲ್ಲ ಕೊಬ್ಬು, ಕಾರ್ಬೋಹೈಡ್ರೇಟ್, ವಿಟಮಿನ್ ಸಿ, ಎ, ಇ, ಬಿ, ಖನಿಜಗಳು, ಪ್ರೊಟೀನ್ ಮತ್ತು ಆಹಾರದ ನಾರುಗಳಂತಹ ಅನೇಕ ರೀತಿಯ ಪೋಷಕಾಂಶಗಳು ಪಪ್ಪಾಯ ಹಣ್ಣಿನಲ್ಲಿ ಕಂಡುಬರುತ್ತವೆ.
ಪಪ್ಪಾಯ ಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ 60 ಮತ್ತು ಆಹಾರದ ಫೈಬರ್ ಇರುವುದರಿಂದ ಫಿಟ್ನೆಸ್ ತಜ್ಞರು ಪ್ರತಿದಿನ ಪಪ್ಪಾಯಿಯನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಪಪ್ಪಾಯದಲ್ಲಿ ಕಂಡುಬರುವ ಪಪೈನ್ ಕಿಣ್ವವು ಅಲರ್ಜಿಯ ವಿರುದ್ಧ ಹೋರಾಡುತ್ತದೆ ಮತ್ತು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದರೆ ಪಪ್ಪಾಯವನ್ನು ಕೆಲವು ಆಹಾರ ಜತೆ ತಿನ್ನುವುದು ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.