More

    ಹಿಜಾಬ್ ಜತೆ ಸಿಖ್ಖರ ಕಿರ್ಪನ್​ ಮತ್ತು ಟರ್ಬನ್​ ಹೋಲಿಕೆ ಇಲ್ಲ: ಸುಪ್ರೀಂ ಕೋರ್ಟ್​

    ನವದೆಹಲಿ: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಹಿಜಾಬ್ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸುಪ್ರೀಂಕೋರ್ಟ್ ಈ ವಿಚಾರವಾಗಿ ಇಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಹಿಜಾಬ್​ಗೂ ಸಿಖ್ಖರ ಕಿರ್ಪನ್ ಮತ್ತು ಟರ್ಬನ್​ಗೂ ಹೋಲಿಕೆ ಇಲ್ಲ ಎಂಬುದಾಗಿ ಹೇಳಿದೆ.

    ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯ ಅವರಿದ್ದ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂಬುದಾಗಿ ಎಎನ್​ಐ ವರದಿ ಮಾಡಿದೆ.

    ದೂರುದಾರರಲ್ಲಿ ಒಬ್ಬರಾಗಿರುವ ಇಸ್ಲಾಂ ಮತ್ತು ಅರೇಬಿಕ್ ವಿದ್ಯಾರ್ಥಿಯ ಪರವಾಗಿ ವಕೀಲ ನಿಜಾಮುದ್ದೀನ್​ ಪಾಷಾ ವಾದಿಸುವಾಗ, ಸಿಖ್ಖರ ಕಿರ್ಪನ್ ಮತ್ತು ಟರ್ಬನ್​ಗೆ ಹಿಜಾಬನ್ನು ಹೋಲಿಕೆ ಮಾಡಿದ್ದರು. ಹಿಜಾಬ್ ಮುಸ್ಲಿಂ ಹುಡುಗಿಯರ ಧಾರ್ಮಿಕ ಪದ್ಧತಿ ಎಂದ ಅವರು, ಸಿಖ್ ವಿದ್ಯಾರ್ಥಿಗಳೂ ಟರ್ಬನ್ ಧರಿಸುತ್ತಾರೆ ಎಂದಿದ್ದರು.

    ಇದನ್ನು ಆಲಿಸಿದ ನ್ಯಾಯಮೂತ್ತಿ ಗುಪ್ತ ಅವರು, ಈ ವಿಚಾರವಾಗಿ ಸಿಖ್ಖರೊಂದಿಗೆ ಹೋಲಿಸುವುದು ಸರಿಯಲ್ಲ. ಕಿರ್ಪನ್​ಗೆ ಸಂವಿಧಾನದಲ್ಲೇ ಮಾನ್ಯತೆ ಇದೆ, ಅದರೊಂದಿಗೆ ಇದನ್ನು ಹೋಲಿಸಬೇಡಿ. ಟರ್ಬನ್​​ಗೆ ಶಾಸನಾತ್ಮಕ ಅವಶ್ಯಕತೆಗಳಿವೆ, ಅವೆಲ್ಲ ಭಾರತೀಯ ಸಂಸ್ಕೃತಿಯಲ್ಲಿ ಸ್ಥಾಪಿತವಾದ ಆಚರಣೆಗಳಾಗಿವೆ ಎಂದಿದ್ದಾರೆ. – ಏಜೆನ್ಸೀಸ್

    ಕತ್ತಿಯಿಂದ ಕುತ್ತಿಗೆ ಕಡಿದು ಅತ್ತಿಗೆಯ ಕೊಲೆ; ಆರೋಪಿ ಮೈದುನ ಪರಾರಿ..

    ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಮಳೆ ಮತ್ತಷ್ಟು ಜೋರು; ಹಲವು ಜಿಲ್ಲೆಗಳಿಗೆ ಅಲರ್ಟ್​ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts