More

    ರಕ್ತದಾನ ಮಾಡುವಲ್ಲಿ ಮೌಢ್ಯ ಸಲ್ಲ

    ಚಿತ್ರದುರ್ಗ: ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯ. ಈ ವಿಷಯದಲ್ಲಿ ತಪ್ಪು ಮಾಹಿತಿ, ಮೌಢ್ಯ ಸಲ್ಲದು ಎಂದು ಗಾಯತ್ರಿ ಜಿ.ಎಂ.ಸಿದ್ದೇಶ್ವರ್ ಹೇಳಿದರು.
    ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತಕ್ಕೆ ಪರ್ಯಾಯ ಮತ್ತೊಂದಿಲ್ಲ. ಹಾಗಾಗಿ ಎಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗುವ ಮೂಲಕ ಅಮೂಲ್ಯ ವಾದ ಜೀವ ಉಳಿಸಬೇಕು ಎಂದರು.

    ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಮೊದಲಾದ ಸಂದರ್ಭಗಳಲ್ಲಿ ರಕ್ತ ಅಗತ್ಯವಾಗಿ ಬೇಕಾಗುತ್ತದೆ. ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬಹುದು. ಈ ಬಗ್ಗೆ ತಪ್ಪು ಕಲ್ಪನೆ ಬೇಡ ಎಂದು ಹೇಳಿದರು.

    ಸವಿತಾ ಜಿ.ಎಸ್.ಅನಿತ್‌ಕುಮಾರ್, ಚಂದ್ರಿಕಾ ಲೋಕನಾಥ್, ನಂದಿನಾಗರಾಜ್, ವೆಂಕಟೇಶ್, ಶ್ಯಾಮಲಾ ಶಿವಪ್ರಕಾಶ್, ಮಹಡಿ ಶಿವಮೂರ್ತಿ, ಅನ್ವರ್ ಪಾಷಾ, ತೇಜಸ್ವಿನಿ ಕಟ್ಟಿಮನಿ, ನಾಗರಾಜ ಬೇದ್ರೆ, ಉದಯಶಂಕರ್, ಚಂದ್ರಮೋಹನ್ ಮತ್ತಿತರರು ಇದ್ದರು.

    70ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ, ಹಾಲಮ್ಮ ಚಾರಿಟಿ ಫೌಂಡೇಷನ್, ಜಿ.ಎಸ್.ಅನಿತ್‌ಕುಮಾರ್ ಅಭಿಮಾನಿ ಬಳಗ, ಚಿತ್ರದುರ್ಗ, ದಾವಣಗೆರೆ ಹಾಗೂ ಭೀಮಸಮುದ್ರ ಲಯನ್ಸ್ ಕ್ಲಬ್, ದಾವಣಗೆರೆ ಲೈಪ್‌ಲೈನ್ ಬ್ಲಡ್ ಬ್ಯಾಂಕ್, ರೋಟರಿ ಕ್ಲಬ್, ಜಿಲ್ಲಾ ರಕ್ತನಿಧಿ ಕೇಂದ್ರ ಮತ್ತು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts