More

    ದಾಖಲೆಯ 42ನೇ ಬಾರಿ ರಣಜಿ ಟ್ರೋಫಿ ಗೆದ್ದ ಮುಂಬೈ: ಕರ್ನಾಟಕ ಎಷ್ಟು ಬಾರಿ ಜಯಿಸಿದೆ ಗೊತ್ತಾ?

    ಮುಂಬೈ: ಆತಿಥೇಯ ಮುಂಬೈ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ 89ನೇ ಆವೃತ್ತಿಯಲ್ಲಿ ದಾಖಲೆಯ 42ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಮುಕ್ತ್ತಾಯಗೊಂಡ ೈನಲ್ ಪಂದ್ಯದಲ್ಲಿ ನಾಯಕ ಅಕ್ಷಯ್ ವಾಡ್ಕರ್ (102 ರನ್, 199 ಎಸೆತ, 9 ಬೌಂಡರಿ, 1 ಸಿಕ್ಸರ್) ಶತಕದ ಹೋರಾಟದ ನಡುವೆಯೂ ಪ್ರವಾಸಿ ವಿದರ್ಭ ತಂಡ 169 ರನ್‌ಗಳಿಂದ ಮುಂಬೈ ತಂಡಕ್ಕೆ ಶರಣಾಯಿತು. ಇದರೊಂದಿಗೆ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಸಾರಥ್ಯದ ಮುಂಬೈ ತಂಡ 8 ವರ್ಷಗಳ ಬಳಿಕ ಅಂದರೆ 2015-16ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಎತ್ತಿ ಹಿಡಿಯಿತು. ಈ ಮೂಲಕ 2023-24ರ ದೇಶೀಯ ಕ್ರಿಕೆಟ್ ಋತುವಿಗೆ ತೆರೆ ಬಿದ್ದಿದ್ದು, ಇನ್ನು ಎಲ್ಲರ ಗಮನ ಐಪಿಎಲ್ ಟಿ20 ಹಬ್ಬದತ್ತ ಹರಿಯಲಿದೆ.

    ಮುಂಬೈ ನೀಡಿದ 538 ರನ್‌ಗಳ ಕಠಿಣ ಗುರಿಗೆ ಪ್ರತಿಯಾಗಿ ವಿದರ್ಭ ಐದನೇ ಹಾಗೂ ಅಂತಿಮ ದಿನ ಇನ್ನೂ 290 ರನ್ ಗಳಿಸುವ ಸವಾಲು ಹೊಂದಿತ್ತು. 5 ವಿಕೆಟ್‌ಗೆ 248 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ವಿದರ್ಭ, ಅಂತಿಮವಾಗಿ 134.3 ಓವರ್‌ಗಳಲ್ಲಿ 368 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

    ಬೆಳಗ್ಗೆ 56 ಹಾಗೂ 11 ರನ್‌ಗಳಿಂದ ಬ್ಯಾಟಿಂಗ್ ಆರಂಭಿಸಿದ ಅಕ್ಷಯ್ ವಾಡ್ಕರ್ ಹಾಗೂ ಹರ್ಷ ದುಬೆ (65 ರನ್, 199 ಎಸೆತ, 9 ಬೌಂಡರಿ, 1 ಸಿಕ್ಸರ್) ಜೋಡಿ 6ನೇ ವಿಕೆಟ್‌ಗೆ 255 ಎಸೆತಗಳಲ್ಲಿ 130 ರನ್‌ಗಳಿಸಿತು. ಭೋಜನಾ ವಿರಾಮಕ್ಕೆ ಮುನ್ನ ಮುಂಬೈ ಬೌಲರ್‌ಗಳಿಗೆ ಈ ಜೋಡಿ ಸವಾಲೆನಿಸಿತು. ವಿರಾಮದ ಬಳಿಕ ಶತಕ ಸಿಡಿಸಿದ ಬೆನ್ನಲ್ಲೇ ಅಕ್ಷಯ್ ವಾಡ್ಕರ್ ಔಟಾದರು. ನಂತರ ಕೇವಲ 15 ರನ್‌ಗಳ ಅಂತರದಲ್ಲಿ ಕೊನೆಯ 4 ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ವಿದರ್ಭ ತಂಡದ 3ನೇ ಟ್ರೋಫಿ ಕನಸು ಭಗ್ನಗೊಂಡಿತು. ಮುಂಬೈ ಪರ ಸ್ಪಿನ್ನರ್ ತನುಷ್ ಕೋಟ್ಯಾನ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

    ಮುಂಬೈ: 224 ಹಾಗೂ 418.
    ವಿದರ್ಭ: 105 ಹಾಗೂ 134.3 ಓವರ್‌ಗಳಲ್ಲಿ 368 (ಅಕ್ಷಯ್ ವಾಡ್ಕರ್ 102, ಹರ್ಷ 65, ಆದಿತ್ಯ 3, ಯಶ್ 6, ಉಮೇಶ್ ಯಾದವ್ 6, ತನುಷ್ ಕೋಟ್ಯಾನ್ 95ಕ್ಕೆ 4, ಮುಶೀರ್ 48ಕ್ಕೆ 2).

    42: ಮುಂಬೈ ತಂಡ ರಣಜಿ ಟ್ರೋಫಿಯ ಒಟ್ಟು 89 ಆವೃತ್ತಿಗಳಲ್ಲಿ ಆಡಿದ 48 ೈನಲ್‌ನಲ್ಲಿ 42ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಕರ್ನಾಟಕ ತಂಡ 8 ಬಾರಿ ಪ್ರಶಸ್ತಿ ಗೆದ್ದಿರುವುದೇ ನಂತರದ ಗರಿಷ್ಠವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts