More

  ಶ್ರೀರಾಮನವಮಿ ದಿನ ಹೀಗೆ ಮಾಡಿದ್ರೆ ಅದೃಷ್ಟ ಒಲಿದು ಬರುತ್ತದೆ, ಹಣದ ಕೊರತೆ ಇರುವುದಿಲ್ಲ!

  ಬೆಂಗಳೂರು:  ಮನೆಯಲ್ಲಿ ಹಣದ ಕೊರತೆಯಾಗಬಾರದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ನಮ್ಮ ಕ್ರಿಯೆಗಳು ಆರ್ಥಿಕ ಪರಿಸ್ಥಿತಿಯನ್ನು ನಿರ್ಧರಿಸುತ್ತದೆ ಎಂದು ವಾಸ್ತು ಶಾಸ್ತ್ರವೊಂದು ಹೇಳುತ್ತದೆ. ಈ ವರ್ಷ ಬರುವ ಶ್ರೀರಾಮ ನವಮಿಯ ದಿನ ಹೀಗೆ ಮಾಡಿದರೆ ಹಣದ ಕೊರತೆಯಿಲ್ಲದೆ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ.

  ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮನವಮಿ ಹಬ್ಬವನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನಾಂಕದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನು ಜನಿಸಿದ ದಿನ ಇದಾಗಿದೆ. ಈ ವರ್ಷ ಏಪ್ರಿಲ್ 17ರಂದು ನಡೆಯಲಿದೆ

  ರಾಮ ಮಂತ್ರಗಳನ್ನು ಪಠಿಸುವುದು ವ್ಯಕ್ತಿಯ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಏಕೆಂದರೆ ಅವರು ತಮ್ಮ ದೇಹ ಮತ್ತು ಆತ್ಮವನ್ನು ಧನಾತ್ಮಕ ಶಕ್ತಿಯನ್ನು ತುಂಬುತ್ತಾರೆ. ನಿಯಮಿತವಾಗಿ ರಾಮ ಮಂತ್ರಗಳನ್ನು ಹರಿಸುವುದರಿಂದ ಪ್ರದರ್ಶಕನ ಸಂಕಲ್ಪ ಬಲಗೊಳ್ಳುತ್ತದೆ.

  ಶ್ರೀರಾಮ ನವಮಿಯ ದಿನದಂದು ಸೀತಾರಾಮರ ವಿಗ್ರಹವಿದ್ದರೆ ಅದಕ್ಕೆ ಅಭಿಷೇಕ ಮಾಡಿ. ಅರಿಶಿನ ಬರೆದು ಶ್ರೀಗಂಧ ಕುಂಕುಮ ಹಚ್ಚಿ ಕೆಂಪು ಹೂಗಳಿಂದ ಪೂಜಿಸಿ ಅದೃಷ್ಟ ನಿಮಗೆ ಒಲಿದು ಬರುತ್ತದೆ.

  ಬೆಳ್ಳಿ ನಾಣ್ಯಕ್ಕೂ ಹೀಗೆ ಅಭಿಷೇಕ ಮಾಡಿ ಮಾಡಬಹುದು. ಬೆಳ್ಳಿ ನಾಣ್ಯಗಳಿಲ್ಲದವರು ತಾಮ್ರದ ನಾಣ್ಯಗಳನ್ನು ಬಳಸವುದರಿಂದ ನಿಮಗೆ ಒಳ್ಳೆಯದ್ದಾಗುತ್ತದೆ

  ಹಿತ್ತಾಳೆ ಅಥವಾ ಬೆಳ್ಳಿಯ ಕುಂಡಗಳಲ್ಲಿ ತುಪ್ಪದಿಂದ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡಿದರೂ ಸೀತಾರಾಮ್ ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ. ಹಣದ ಹೊಳೆಯೆ ನಿಮ್ಮ ಮನೆಗೆ ಹರಿದು ಬರುತ್ತದೆ.

  ಬೆಳ್ಳಿ ನಾಣ್ಯ, ತಾಮ್ರದ ನಾಣ್ಯ ಕೂಡ ಇಲ್ಲದವರು ಒಂದು ರೂಪಾಯಿ ನೋಟುಗಳಾದರೂ ಅಭಿಷೇಕ ಮಾಡಿದರೆ ಅದೃಷ್ಟ ಒಲಿದು ಬರುತ್ತದೆ. ನಂತರ ಅವುಗಳನ್ನು ನಿಮ್ಮ ಕಬಾರ್ಡ್​​ನಲ್ಲಿ ಇರಿಸಿ. ಹೀಗೆ ಮಾಡಿದರೆ ವರ್ಷಪೂರ್ತಿ ನಿಮ್ಮ ಬಳಿ ಹಣದ ಹೊಳೆ ಹರಿದು ಬರುತ್ತದೆ.

  ರಾಮನವಮಿ ದಿನ ರಾಮನ ಆರಾಧನೆ ಮಾಡುವುದರಿಂದ ನೆಮ್ಮದಿ, ಶಾಂತಿ ನಿಮಗೆ ಲಭ್ಯವಾಗುತ್ತದೆ.

  ರಾಮನವಮಿ ಸಂಭ್ರಮ: ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts