More

    ಕಸ ಎಸೆಯುವವರಿಗೆ ಬುದ್ಧಿ ಕಲಿಸಿದ ನಾಯಿ! ಈ ನಾಯಿಯಿಂದ ಕಲಿಯುವುದು ಸಾಕಷ್ಟಿದೆ…

    ಬೆಂಗಳೂರು: ಎಲ್ಲಿ ಬೇಕೆಂದರಲ್ಲಿ ಕಸ ಎಸೆಯಬಾರದು ಎಂದು ಸಾಕಷ್ಟು ಬಾರಿ ಹೇಳಿದರೂ ನಮ್ಮ ಜನರು ಅದನ್ನು ಪರಿಗಣಿಸುವುದೇ ಇಲ್ಲ. ಕಾರು, ಬಸ್ಸಿನಲ್ಲಿ ಹೋಗುವಾಗಂತೂ ತಿಂದಿದ್ದೆಲ್ಲದರ ಕವರ್​ ರಸ್ತೆಯದ್ದೇ ಪಾಲು ಎನ್ನುವಂತೆ ಬಿಸಾಡಿಬಿಡುತ್ತಾರೆ. ಈ ರೀತಿ ಮಾಡುವವರಿಗೆ ಈ ಒಂದು ನಾಯಿ ವಿಶೇಷ ರೀತಿಯಲ್ಲಿ ಬುದ್ಧಿ ಕಲಿಸಿದೆ.

    ನಾಯಿಯೊಂದು ಸುಮ್ಮನೆ ನಡೆದುಕೊಂಡು ಬರುತ್ತಿರುತ್ತದೆ. ಅದರ ಮುಂದೆ ನಿಂತಿದ್ದ ಕಾರಿನ ಡ್ರೈವರ್​ ಸೀಟಿನಲ್ಲಿದ್ದ ವ್ಯಕ್ತಿ ಒಂದಿಷ್ಟು ಕಸ ತುಂಬಿದ್ದ ಕವರ್​ನ್ನು ಕಾರಿನ ಕಿಟಕಿಯಿಂದ ಹೊರಗೆ ಎಸೆಯುತ್ತಾನೆ. ಅಲ್ಲೇ ಬರುತ್ತಿದ್ದ ನಾಯಿ ಆ ಕಸದ ಕವರ್​ನ್ನು ಕಂಡೊಡನೆ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಕಾರಿನ ಕಿಟಕಿಯೊಳಗೆ ವಾಪಾಸು ಹಾಕುತ್ತದೆ. ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎನ್ನುವುದನ್ನು ಕಾರಿನ ಡ್ರೈವರ್​ಗೆ ಸೂಕ್ಷ್ಮವಾಗಿ ಅರ್ಥವಾಗುವಂತೆ ಮಾಡುತ್ತದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮನುಷ್ಯರಿಗಿಲ್ಲದ ಬುದ್ಧಿ ನಾಯಿಗೆ ಇರುವುದನ್ನು ಕಂಡು ನೆಟ್ಟಿಗರು ನಾಯಿಗೆ ಶಬ್ಬಾಸ್​ ಹೇಳಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. (ಏಜೆನ್ಸೀಸ್)

    ಸ್ಕೂಲ್​ಬ್ಯಾಗ್​ನಿಂದ ಬಂದೂಕು ಹೊರಗೆಳೆದಳು, ಮೂವರ ಮೇಲೆ ಗುಂಡು ಹಾರಿಸಿದಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts