More

    ಈ ರಾಜ್ಯದಲ್ಲಿ ಬೌಬೌ ಬಿರಿಯಾನಿ ತಿನ್ನುವುದು ನಿಷೇಧ!

    ನವದೆಹಲಿ: ಕರೊನಾ ವೈರಾಣುವಿನ ಜನಕ, ಕೋವಿಡ್​-19 ಸೋಂಕನ್ನು ಇಡೀ ವಿಶ್ವಕ್ಕೆ ಪ್ರಸರಣ ಮಾಡಿದ ಕುಖ್ಯಾತಿಯ ಚೀನಾದಲ್ಲಿ ಈಗ ಬೌಬೌ ಬಿರಿಯಾನಿ ಸೇರಿ ವಿವಿಧ ಪ್ರಾಣಿಗಳ ಮಾಂಸ ಭಕ್ಷಣೆಯನ್ನು ನಿಷೇಧಿಸಲಾಗಿದೆ. ಆದರೆ, ಭಾರತದಲ್ಲಿ ಕೂಡ ಬೌಬೌ ಬಿರಿಯಾನಿ ತಿನ್ನುವವರು ಇದ್ದಾರೆಯೇ?

    ಖಂಡಿವಾಗಿಯೂ ಇದ್ದಾರೆ. ನಾಗಾಲ್ಯಾಂಡ್​ನ ಜನರು ಬೌಬೌ ಬಿರಿಯಾನಿಯನ್ನು ತಿನ್ನುತ್ತಾರೆ. ಅಷ್ಟೇ ಅಲ್ಲ, ನಾಯಿ ಮಾಂಸವನ್ನು ರಫ್ತು ಮಾಡುವ ಜತೆಗೆ ಚಿಲ್ಲರೆಯಾಗಿ ಮಾರಾಟವನ್ನೂ ಮಾಡುತ್ತಾರೆ. ಆದರೆ, ಈಗ ಈ ರಾಜ್ಯದಲ್ಲಿ ಬೌಬೌ ಬಿರಿಯಾನಿಯನ್ನಾಗಲಿ, ಬೇಯಿಸಿದ ಅಥವಾ ಹಸಿಯಾದ ನಾಯಿ ಮಾಂಸವನ್ನಾಗಲಿ ಮಾರಾಟ ಮಾಡುವುದನ್ನು ನಿಷೇಧಿಸಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.

    ಈ ವಿಷಯವನ್ನು ತಿಳಿಸಿರುವ ನಾಗಾಲ್ಯಾಂಡ್​ನ ಮುಖ್ಯ ಕಾರ್ಯದರ್ಶಿ ತೆಂಜೆನ್​ ಟಾಯ್​, ಭಾರತೀಯ ಪ್ರಾಣಿ ಸಂರಕ್ಷಣಾ ಸಂಘಟನೆಗಳ ಮಹಾಒಕ್ಕೂಟದ (ಎಫ್ಐಎಪಿಒ) ಒತ್ತಾಯದ ಮೇರೆಗೆ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯದಲ್ಲಿ ನಾಯಿ ಮಾಂಸ ಮಾರಾಟ, ವಹಿವಾಟನ್ನು ನಿಷೇಧಿಸಿರುವುದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ರಕ್ಷಿಸಿ, ಸಾಕಿದಾಕೆ ಸತ್ತಳೆಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಯಿ!

    ಧೀಮಾಪುರದ ಮಾಂಸದ ಮಾರುಕಟ್ಟೆಯಲ್ಲಿ ನಾಯಿಗಳನ್ನು ಅತ್ಯಂತ ಭಯಾನಕ ಪರಿಸ್ಥಿತಿಯಲ್ಲಿ ಇರಿಸಲಾಗಿದೆ. ಇದನ್ನು ಕಂಡು ನಮಗೆ ಭಾರಿ ಆಘಾತವೇ ಆಗಿದೆ. ವಧೆ ಮಾಡಲೆಂದು ತರಲಾಗಿದ್ದ ನಾಯಿಗಳನ್ನು ಗೋಣಿಚೀಲದಲ್ಲಿ ತುಂಬಿ ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಇರಿಸಲಾಗಿತ್ತು. ಇದನ್ನು ಕಂಡು ಬೇಸರವಾಗಿ ನಾವು ರಾಜ್ಯದಲ್ಲಿ ನಾಯಿ ಮಾಂಸ ಮಾರಾಟವನ್ನು ನಿಷೇಧಿಸುವಂತೆ ಕೋರಿ ಅತ್ಯಂತ ಭಾರವಾದ ಹೃದಯದಿಂದ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಎಫ್​ಐಎಪಿಒ ಇತ್ತೀಚೆಗೆ ನಾಗಾಲ್ಯಾಂಡ್​ ಸರ್ಕಾರಕ್ಕೆ ಪತ್ರ ಬರೆದಿತ್ತು. ಸರ್ಕಾರ ಇದನ್ನು ಪರಿಗಣಿಸಿ ರಾಜ್ಯದಲ್ಲಿ ನಾಯಿ ಮಾಂಸ ಮಾರಾಟವನ್ನು ನಿಷೇಧಿಸಿದೆ.

    ಸಾಮಾನ್ಯವಾಗಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ನಾಯಿಗಳನ್ನು ನಾಗಾಲ್ಯಾಂಡ್​ಗೆ ಕಳ್ಳಸಾಗಣೆ ಮಾಡಲಾಗುತ್ತದೆ. ಈ ರಾಜ್ಯದಲ್ಲಿ ಬೌಬೌ ಬಿರಿಯಾನಿ ಭಾರಿ ಜನಪ್ರಿಯವಾಗಿರುವುದೇ ಇದಕ್ಕೆ ಕಾರಣ.

    ಆ.15ಕ್ಕೆ ಬಿಡುಗಡೆ ಸಜ್ಜಾಗುತ್ತಿರುವ ಕೊವ್ಯಾಕ್ಸಿನ್​ ಬಗ್ಗೆ ಭಾರತ್​ ಬಯೋಟೆಕ್​ ಸಿಎಂಡಿ ಏನು ಹೇಳುತ್ತಾರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts