More

    ಆಕ್ಸಿಜನ್ ಸಿಲಿಂಡರ್ ಹೊತ್ತುಕೊಂಡು ಬಂದು, ಕೋವಿಡ್ ರೋಗಿ ಉಳಿಸಿ ಕೊಡಬೇಕು ಎಂದು ವೈದ್ಯರಿಗೆ ಧಮಕಿ ಹಾಕಿದ್ರು!

    ಚಿಕ್ಕಬಳ್ಳಾಪುರ: “ಇದೋ ತಗ್ಗೊಳ್ಳಿ, ಆಸ್ಪತ್ರೇಲಿ ಆಕ್ಸಿಜನ್ ಕೊರತೆ ಇದೆ ಅಂತಾ ಹೇಳಿ ವಾಪಸ್ ಕಳುಹಿಸಲು ಪ್ರಯತ್ನ ಮಾಡುತ್ತೀರಲ್ಲ, ಹೆಂಗೋ ಎಲ್ಲಿಂದಲೋ ಒಂದು ಸಿಲಿಂಡರ್ ತಂದಿದ್ದೇವೆ. ನಮ್ಮ ರೋಗಿಯನ್ನು ಉಳಿಸಿ, ಏನಾದರೂ ಹೆಚ್ಚು ಕಡಿಮೆಯಾದರೆ ನೆಟ್ಟಗಿರುವುದಿಲ್ಲ….”

    ಇದು ಚಿಕ್ಕಬಳ್ಳಾಪುರ ನಗರದಲ್ಲಿನ ಹಳೇ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ಕೊ ರತೆಯ ವಿಚಾರವಾಗಿ ರೋಗಿ ಸಂಬಂಧಿಕರು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ರಮೇಶ್ ನಡುವೆ ನಡೆದ ಮಾತಿಕ ಚಕಮಕಿ ಪರಿ. ಕುಟುಂಬಸ್ಥರೇ ಕಾಳಸಂತೆಯಲ್ಲಿ ಆಮ್ಲಜನಕ ಸಿಲಿಂಡರ್ ತಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದೇ ವೇಳೆ ಕರೊನಾ ಚಿಕಿತ್ಸಾ ಕೇಂದ್ರಕ್ಕೆ ಜನರು ನುಗ್ಗುತ್ತಿದ್ದಂತೆ ಗೊಂದಲ ಉಂಟಾಯಿತು. ವೈದ್ಯರನ್ನು ಮುತ್ತಿಕೊಂಡು ಜನರು, ಸರ್ಕಾರವು ಎಲ್ಲ ಸೌಲಭ್ಯ ಇದೆ ಎಂದು ಹೇಳುತ್ತದೆ. ಇಲ್ಲಿ ಎಲ್ಲದರಲ್ಲೂ ಕೊರತೆ ಇದೆ. ಹೊಂದಾಣಿಕೆಗೆ ಸುಳ್ಳು ಹೇಳಲಾಗುತ್ತಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.

    ಅವಾಚ್ಯ ಶಬ್ದಗಳ ನಿಂದನೆ ಪ್ರಯೋಗವಾಗುತ್ತಿದ್ದಂತೆ ಆಕ್ರೋಶಗೊಂಡ ಜಿಲ್ಲಾ ಶಸ್ತ್ರಚಿಕಿತ್ಸಕ ರಮೇಶ್, ಮರ್ಯಾದೆ ಇಲ್ಲದೇ ಮಾತನಾಡಿದರೆ ಚೆನ್ನಾಗಿರುವುದಿಲ್ಲ. ಆಸ್ಪತ್ರೆಯೊಳಗೆ ಅಕ್ರಮ ಪ್ರವೇಶ ಸರಿಯಲ್ಲ ಎಂದು ತಿರುಗಿ ಬಿದ್ದರು. ಪೊಲೀಸರು ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಿದರು.

    ಇದನ್ನೂ ಓದಿ: ಕೋವಿಡ್ ಸೋಂಕಿತ ಬಡ ರೋಗಿಗಳಿಗೆ ಉಚಿತ ಆಮ್ಲಜನಕ ಪೂರೈಕೆ

    ಕರೊನಾ ಸೋಂಕಿಗೆ ತುತ್ತಾದ 88 ವರ್ಷದ ಸಂಬಂಧಿಯನ್ನು ಇಲ್ಲಿನ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಆಕ್ಸಿಜನ್ ಇಲ್ಲ ಎಂಬುದಾಗಿ ರೋಗಿಯೇ ಹೇಳಿದ್ದು ಇದನ್ನು ವೈದ್ಯರ ಬಳಿ ಪ್ರಶ್ನಿಸಿದಾಗ ಒಪ್ಪಿಕೊಂಡಿದ್ದಾರೆ. ಇದೀಗ ಆಮ್ಲಜನಕ ಸಿಲಿಂಡರ್ ತಂದು ಕೊಟ್ಟು ಪ್ರಶ್ನಿಸಿದ ತಕ್ಷಣ ರಾಗ ಬದಲಾಯಿಸಿದ್ದಾರೆ ಎಂದು ಆರೋಪಿಸಿದರು.

    ಮತ್ತೊಂದೆಡೆ ಆಸ್ಪತ್ರೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಇಲ್ಲ. ಹೆಚ್ಚುವರಿ ದಾಸ್ತಾನಿಟ್ಟುಕೊಳ್ಳಲಾಗಿದೆ. ರೋಗಿಯು ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಕ್ಸಿಜನ್ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ ಎಂಬ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಸಿಲಿಂಡರ್ ಕೆಲವರು ತಂದಿದ್ದು ಕಾಳಸಂತೆಯಲ್ಲಿ ಮಾರಾಟ ಮತ್ತು ಅಕ್ರಮ ದಾಸ್ತಾನು ಅಪರಾಧ. ಅವರಿಗೆ ಎಲ್ಲಿ ಸಿಕ್ಕಿತ್ತೂ ಗೊತ್ತಿಲ್ಲ ಎಂದು ತಿಳಿಸಿದರು.

    ನಿಮಿಷಕ್ಕೆ 27 ಲಕ್ಷ ಜನರ ನೋಂದಣಿ; ಕರೊನಾ ಲಸಿಕೆ ನೋಂದಣಿಗೆ ಮುಗಿಬಿದ್ದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts