More

    ಹಾಸನ ಚಿಕ್ಕಮಗಳೂರು ಜಿಲ್ಲೆಯ ಜನ ನಿರಾಳ

    ಚಿಕ್ಕಮಗಳೂರು: ಕರೊನಾ ಫಾಲ್ಸ್ ಪಾಸಿಟಿವ್ ಎಂಬುದು ತಿಳಿಯುತ್ತಿದ್ದಂತೆಯೇ ಐಸೋಲೇಷನ್​ನಿಂದ ಬಿಡುಗಡೆಯಾಗಿರುವ ಮೂಡಿಗೆರೆ ತಾಲೂಕಿನ ನಂದಿಪುರ ಆಸ್ಪತ್ರೆ ವೈದ್ಯರು ತಕ್ಷಣದಿಂದಲೇ ಕರ್ತವ್ಯ ನಿರ್ವಹಿಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ವೈದ್ಯರಿಗೆ ಕರೊನಾ ಇಲ್ಲದಿರುವುದರಿಂದ ಚಿಕ್ಕಮಗಳೂರು ಮತ್ತು ಜಿಲ್ಲೆಯ ಗಡಿ ಭಾಗದ ಹಾಸನ ಜಿಲ್ಲೆಯ ಜನ ನಿರಾಳರಾಗಿದ್ದಾರೆ.

    ವೈದ್ಯರ ಪ್ರಾಥಮಿಕ ಸಂಪರ್ಕಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ ಸೇರಿದ್ದ 485 ಮಂದಿಯನ್ನು ಬಸ್​ಗಳಲ್ಲಿ ಅವರ ಊರುಗಳಿಗೆ ಕಳಿಸಿಕೊಡಲಾಗಿದೆ. ಹೋಂ ಕ್ವಾರಂಟೈನ್​ನಲ್ಲಿರುವ ಅವರ ಎರಡನೇ ಹಂತದ 961 ಸಂರ್ಪತರನ್ನು ಸಹ ಮುಕ್ತಗೊಳಿಸಲು ಜಿಲ್ಲಾಡಳಿತ ತೀರ್ವನಿಸಿರುವುದಾಗಿ ಜಿಲ್ಲಾಧಿಕಾರಿ ಡಾ. ಎಸ್.ಬಗಾದಿ ಗೌತಮ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು.

    ಕರೊನಾ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಸಾಮಾನ್ಯವಾಗಿ ನಿಗದಿತ ಅವಧಿಗೆ ತಪಾಸಣೆಗೆ ಒಳಪಡಿಸಲಾಗುತ್ತದೆ. ಆ ಸಂದರ್ಭದಲ್ಲೇ ಮೂಡಿಗೆರೆ ವೈದ್ಯರಿಗೆ ಸೋಂಕಿರುವುದು ಖಚಿತವಾಯಿತು. ನಂತರ ಬೆಂಗಳೂರಿನ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಗಂಟಲು ದ್ರವ, ರಕ್ತದ ಮಾದರಿ ಕಳಿಸಿದಾಗ ಅಲ್ಲೂ ಸೋಂಕಿದೆ ಎಂದು ವರದಿ ಬಂದಿತ್ತು. ಬೇರೆ ಬೇರೆ ಆರೋಗ್ಯ ಸಮಸ್ಯೆಗೆ ವೈದ್ಯರ ನಿಕಟ ಸಂಪರ್ಕಕ್ಕೆ ಬಂದಿದ್ದ 13 ಮಂದಿ ಹಾಗೂ ಮೊದಲ ಸಂಪರ್ಕದ 15 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶದಲ್ಲಿ ಸೋಂಕಿಲ್ಲ ಎನ್ನುವ ಫಲಿತಾಂಶ ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts