More

    ತಂತ್ರಜ್ಞಾನವಿಲ್ಲದ ಸ್ವಾತಂತ್ರ್ಯ ಪೂರ್ವದಲ್ಲಿಯೂ ಗಾಂಧೀಜಿ ದೇಶದ ಮೂಲೆ ಮೂಲೆಗೆ ತಲುಪಿದ್ದು ಹೇಗೆ ಗೊತ್ತಾ?

    ಬೆಂಗಳೂರು ಮಹಾತ್ಮ ಗಾಂಧೀಜಿ ಅವರು ದೇಶದ ಬಗ್ಗೆ ಕಂಡಿದ್ದ ಕನಸು, ಅವರು ಬಯಸಿದ ದೇಶ ಇಂದಿಗೂ ನಿರ್ಮಾಣವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

    ಗಾಂಧಿ ಭವನದಲ್ಲಿ ಸೋಮವಾರ ಹಲವು ಇಲಾಖೆಗಳ ಸಹಯೋಗದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

    ಹಳ್ಳಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಗಾಂಧೀಜಿ, ಹಳ್ಳಿಗಳ ಸ್ವಾವಲಂಬನೆ, ಹಳ್ಳಿಗಳ ಉದ್ಧಾರವಾಗದೆ ದೇಶದ ಉದ್ಧಾರ ಸಾಧ್ಯವಿಲ್ಲವೆಂದು ಹೇಳಿದ್ದರು. ಇದಕ್ಕಾಗಿ ಸರಳ ಆರ್ಥಿಕ ನೀತಿಯನ್ನು ಸಹ ತಿಳಿಸಿಕೊಟ್ಟಿದ್ದರು. ಆದರೆ, ಆ ದಾರಿಯಲ್ಲಿ ನಡೆಯುವ ಪ್ರಯತ್ನ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ 100ಕ್ಕೆ 100 ಸಾಧ್ಯವಾಗಿಲ್ಲ ಎಂಬ ಸತ್ಯವನ್ನು ಹೇಳಲೇಬೇಕಿದೆ ಎಂದು ಹೇಳಿದರು.

    ಗಾಂಧೀಜಿ ಅವರು ನಡೆದಿದ್ದ ದಾರಿಯಲ್ಲಿ ನಡೆಯುವುದು ಬಹಳ ಕಷ್ಟ. ಆದರೆ, ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರನ್ನು ಗೌರವಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಗಾಂಧೀಜಿ ಅವರ ಚಿಂತನೆಗಳ ಮೇಲೆ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

    ಸ್ವಾತಂತ್ರ್ಯಪೂರ್ವದಲ್ಲಿ ಇಂದಿನಷ್ಟು ಪ್ರಚಾರದ ತಂತ್ರಜ್ಞಾನ ಅಭಿವೃದ್ಧಿಯಾಗಿರಲಿಲ್ಲ. ಆದರೂ ಗಾಂಧೀಜಿ ಮಾತನಾಡಿದರೆ ಇಡೀ ದೇಶದ ಮೂಲೆ ಮೂಲೆಗೆ ತಲುಪುತ್ತಿತ್ತು. ಅಷ್ಟರ ಮಟ್ಟಿಗೆ ಗಾಂಧೀಜಿ ಜನಪ್ರಿಯರಾಗಿದ್ದರು. ಸ್ವಾತಂತ್ರ್ಯ ತಂದುಕೊಡಲು ಅನುಸರಿಸಿದ ಅಹಿಂಸೆ ಮತ್ತು ಸರಳ ಜೀನವದ ಮೂಲಕವೇ ಇಡೀ ವಿಶ್ವವನ್ನು ತಲುಪಿದ್ದರು. ಈ ಕಾರಣದಿಂದಲೇ ಜವಾಹರ ಲಾಲ್ ನೆಹರು ಅವರು ‘ಗಾಂಧೀಜಿ ಎಲ್ಲಿ ಇರುತ್ತಾರೆ ಅದೇ ದೇವಾಲಯ, ತಿರುಗಾಡುವ ಸ್ಥಳವೇ ಪುಣ್ಯಭೂಮಿ’ ಎಂದು ಬಣ್ಣಿಸಿದ್ದರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts