More

    ಊಟಕ್ಕಾಗಿ ಮಕ್ಕಳು ಸುಡು ಬಿಸಿಲಿನಲ್ಲಿ ಕಿಮೀ ಗಟ್ಟಲೆ ನಡಿಯಬೇಕೇ? ಬೇಸಿಗೆ ಬಿಸಿಯೂಟಕ್ಕೆ ಬಿಸಿಲೇ ಸಮಸ್ಯೆ

    ಬೆಂಗಳೂರು ರಾಜ್ಯದಲ್ಲಿ ಇಂದೆಂದೂ ಕಾಣದ ಬಿಸಿಲಿನ ಬೇಗೆ ಸುಡುತ್ತಿದ್ದು, ಮನೆಯಿಂದ ಹೊರಗೆ ಕಾಲಿಡಲು ಸಹ ಜನರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂದ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕಾಗಿ 2ರಿಂದ 3 ಕಿಮೀ ದೂರ ನಡೆದು ಹೋಗಿ ಊಟ ಮಾಡಬೇಕಾಗಿದೆ.

    ಇದರಿಂದ ಹಲವು ಜಿಲ್ಲೆಗಳಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಊಟಕ್ಕಾಗಿ ಬಿಸಿಲಿನಲ್ಲಿ ಹೋಗುವುದು ಬೇಡ ಎಂದು ಪಾಲಕರು ಹೇಳುತ್ತಿದ್ದಾರೆ.

    ರಾಜ್ಯದ 223 ಬರಪೀಡಿತ ತಾಲ್ಲೂಕುಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆ ಮಾಡಲು ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ, ಸ್ಥಳೀಯ ಅಧಿಕಾರಿಗಳು ಬಿಸಿಯೂಟ ವಿತರಣೆಗೆ ಗುರುತಿಸಿರುವ ಊಟ ವಿತರಿಸುವ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ 2ರಿಂದ 3 ಕಿಮೀ ದೂರದಲ್ಲಿವೆ. ಸುಡುವ ಬಿಸಿಲಿನಲ್ಲಿ ಊಟಕ್ಕಾಗಿ ಮಕ್ಕಳು ನಡಿಯನೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

    ಬೇಸಿಗೆ ರಜೆಯಲ್ಲಿರುವ ಮಕ್ಕಳಿಗೆ ಏಪ್ರಿಲ್ ಮತ್ತು ಮೇ ತಿಂಗಳಿನ 41 ದಿನಗಳ ಕಾಲ ಮಕ್ಕಳಿಗೆ ಬಿಸಿಯುಟ ವಿತರಣೆ ಮಾಡಲಾಗುತ್ತದೆ. ಬಿಸಿಯೂಟ ವಿತರಣೆಯ ಕೇಂದ್ರದ ಶಾಲೆಯನ್ನು ಗುರುತಿಸುವ ವೇಳೆ ಮಕ್ಕಳ ಹಿತದೃಷ್ಟಿಯನ್ನು ಪರಿಗಣಿಸಿ ಕ್ರಮ ವಹಿಸಬೇಕು. ಯೋಜನೆ ಅನುಷ್ಠಾನಕ್ಕೆ ಶಾಲೆಗಳ ಪಟ್ಟಿಯನ್ನು ಡೈಸ್ ಮಾಹಿತಿ ಆಧಾರದ ಮೇಲೆ ಗುರುತಿಸಿ ಅಂತಿಮಗೊಳಿಸಬೇಕು. ಆಯಾ ಶಾಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮ್ಯಾಪಿಂಗ್ ಕಾರ್ಯವನ್ನು ಸಹಯೋಗದಲ್ಲಿ ಮಾಡಬೇಕು ಎಂದು ಶಾಲಾ ಶಿಕ್ಷಣ ಆಯುಕ್ತರು ಸೂಚಿಸಿದ್ದಾರೆ.

    ಆದರೆ, ಗ್ರಾಮೀಣ ಭಾಗದಲ್ಲಿ ಶಾಲೆಯನ್ನು ಗುರುತಿಸುವ ವೇಳೆ ಹೆಚ್ಚು ಮಕ್ಕಳಿರುವ ಶಾಲೆಯನ್ನು ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಇದರಿಂದ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಮಕ್ಕಳು ನಡೆದುಕೊಂಡು ಹೋಗಬೇಕಿದೆ. ಗ್ರಾಮದಿಂದ ಗ್ರಾಮಕ್ಕೆ ಕನಿಷ್ಟ 2ರಿಂದ 3 ಕಿಮೀ ಇರುವುದರಿಂದ ಸುಡುವ ಬಿಸಿಲಿನಲ್ಲಿ ಹೋಗಿ ಬರಲು ಮಕ್ಕಳಿಗೆ ಆಯಾಸವಾಗುತ್ತಿದೆ. ಸರ್ಕಾರದ ಯೋಜನೆ ಜನೋಪಕಾರಿಯಾಗಿದ್ದರೂ ಅನುಷ್ಠಾನದಲ್ಲಿ ಸ್ಥಳೀಯ ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

    ಪಾಲಕರ ಸಲಹೆಗಳೇನು?

    ಬಿಸಿಲಿನ ತಾಪ ಅತಿ ಹೆಚ್ಚಾಗಿರುವ ಕಾರಣ ಬಿಸಿಯೂಟ ಕೇಂದ್ರಗಳನ್ನು ವಿತರಣೆ ಮಾಡುವುದಕ್ಕಿಂತ ಆಯಾ ಶಾಲೆಗಳಲ್ಲಿಯೇ ವಿತರಣೆ ಮಾಡುವುದು ಉತ್ತಮ.
    ಇಲ್ಲವಾದಲ್ಲಿ ಒಂದು ಕಿಮೀ ನೊಳಗೆ ಕೇಂದ್ರವಿದ್ದರೆ ಯಾವುದೇ ತೊಂದರೆ ಇಲ್ಲ. ಆದರೆ, 2ರಿಂದ 3 ಕಿಮೀ ನಡೆದುಕೊಂದು ಹೋಗುವುದು ಸರಿಯಾದ ಕ್ರಮವಲ್ಲ.
    ದೂರದ ಗ್ರಾಮಗಳಿಗೆ ಮಕ್ಕಳು ನಡೆದುಕೊಂಡು ಹೋಗುವುದನ್ನು ತಪ್ಪಿಸಲು ವಾಹನ ವ್ಯವಸ್ಥೆ ಮಾಡಿ 5ರಿಂದ 10 ಮಕ್ಕಳಿರುವ ಸ್ಥಳವಿರುವ ಜಾಗಕ್ಕೆ ಊಟ ತಲುಪಿಸುವ ಕ್ರಮ ಮಾಡಬಹುದೇ ಎಂಬ ಯೋಚಿಸಬೇಕು ಎಂದು ಪಾಲಕರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts