More

    ಸೋನಿಯಾ, ರಾಹುಲ್‌ರನ್ನೇ ಬಿಟ್ಟಿಲ್ಲ ನನ್ನನ್ನು ಬಿಡ್ತಾರಾ?: ಇ.ಡಿ. ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

    ಚನ್ನಪಟ್ಟಣ: ನನಗೆ ಖೆಡ್ಡಾ ತೋಡಲು ಏನು ಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನೇ ಬಿಟ್ಟಿಲ್ಲ, ಇನ್ನು ನಮ್ಮನ್ನು ಬಿಡುತ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕು ಮಾರ್ ಆರೋಪಿಸಿದ್ದಾರೆ.


    ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಗುರುವಾರ ನಡೆದ ಭೀಮನ ಅವಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಮತ್ತೆ ಇ.ಡಿ.ಯಲ್ಲಿ ಸಿಲುಕಿಸಲು ಸಾಕಷ್ಟು ತಯಾರಿ ನಡೆಯುತ್ತಿದೆ. ಆದರೆ, ನನ್ನನ್ನು ರಕ್ಷಣೆ ಮಾಡಲು ತಾಯಿ ಚಾಮುಂಡಿ ಇದ್ದಾಳೆ. ನಾನೇನಾದರೂ ತಪ್ಪು ಮಾಡಿದ್ದರೆ ತೊಂದರೆಯಾಗುತ್ತದೆ. ತಪ್ಪು ಮಾಡಿಲ್ಲ ಅಂದರೆ ಎಲ್ಲವನ್ನೂ ಈ ತಾಯಿ ನೋಡಿಕೊಳ್ಳುತ್ತಾಳೆ ಎಂದರು.


    ಕೆಲವರು ಏನೇನೋ ಆಸೆ ಇಟ್ಟುಕೊಂಡಿದ್ದಾರೆ. ಏನಾದರೂ ಆಸೆ ಇಟ್ಟುಕೊಳ್ಳಲಿ. ನಾನು ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಇ.ಡಿ.ಮುಂದೆ ಹಾಜರಾಗಲಿದ್ದೇನೆ. ಅವರು ಏನೇನು ಮಾಡುತ್ತಾರೋ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.


    ಆಗಸ್ಟ್‌ನಲ್ಲೇ ಖೆಡ್ಡಾ ತೋಡುತ್ತಾರೆ ಅಂಥ ಶಿವಕುವಾರ್ ಅವರು ಮೊದಲೇ ನೀಡಿದ್ದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಏನೇನು ಮಾಡುತ್ತಾರೆ ಅನ್ನೋದನ್ನು ನಿಧಾನವಾಗಿ ಹೇಳ್ತೀನಿ ಎಂದರು.

    ಯಾರಿಗೂ ಅನ್ಯಾಯವಾಗಬಾರದು: ತಾಯಿ ಚಾಮುಂಡೇಶ್ವರಿ ಹತ್ತಿರ ಏನು ವರ ಕೇಳಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಎಲ್ಲ ವೈರಿಗಳು, ತೊಂದರೆ ನೀಡುವುದನ್ನು ದೂರ ಮಾಡು. ಎಲ್ಲರ ದುಃಖವನ್ನು ದೂರ ಮಾಡು. ದುರ್ಗಾ ದೇವಿ ಸ್ವರೂಪವಾಗಿ ಇಲ್ಲಿ ನೆಲೆಸಿದ್ದೀಯಾ. ಈ ಭಾಗದ ಜನರಿಗೆ ನೆಮ್ಮದಿ ಕರುಣಿಸು. ಒಳ್ಳೆಯ ಮಳೆ, ಬೆಳೆಯಾಗಲಿ, ಯಾರಿಗೂ ಅನ್ಯಾಯವಾಗಬಾರದು ಎಂದು ತಾಯಿ ಬಳಿ ನಿವೇದಿಸಿಕೊಂಡಿದ್ದೇನೆ ಎಂದರು.


    ಬಿಜೆಪಿ ಜನೋತ್ಸವ ರದ್ದು ವಾಡಿದ ವಿಚಾರಕ್ಕೆ ಪತ್ರಿಕ್ರಿಯಿಸಿ ಡಿ.ಕೆ.ಶಿವಕುವಾರ್, ಸಿಎಂ ಬಸವರಾಜು ಬೊವ್ಮಾಯಿ ಉತ್ತಮ ನಿರ್ಧಾರ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಜನೋತ್ಸವ ಮಾಡುವ ಅವಶ್ಯಕತೆ ಇಲ್ಲ ಎಂದು ಮೊದಲೇ ಹೇಳಿದ್ದೆ ಎಂದರು.


    ಪ್ರವೀಣ್ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪಾಪ ಆತ ಇನ್ನೂ ಯುವಕ, ಈ ರೀತಿ ಆಗಬಾರದಿತ್ತು. ಈ ವಿಚಾರವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇನೆ. ಪಕ್ಷದ ಕಾರ್ಯಕರ್ತರ ನೋವು ಏನೆಂದು ನಮಗೆ ಅರಿವಿದೆ. ಪ್ರವೀಣ್ ಹಂತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ಏನೆಲ್ಲ ಕಾನೂನುಗಳಿವೆಯೋ ಅದನ್ನೆಲ್ಲ ಬಳಸಿಕೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಆ ಮೂಲಕ ಎಲ್ಲ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ವಾಡಬೇಕು. ಯಾವುದೇ ಪಕ್ಷವಾಗಲಿ, ಧರ್ಮವಾಗಲಿ ಈ ವಿಚಾರದಲ್ಲಿ ರಾಜಕಾರಣ ಮಾಡೋದು ಬೇಡ ಎಂದರು.

    ಕ್ಷೇತ್ರದ ಬಗ್ಗೆ ಮೆಚ್ಚುಗೆ: ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಕೆಲವು ತಿಂಗಳ ಹಿಂದೆ ಮಾಹಿತಿ ಕೊಟ್ಟಿದ್ದರು. ಶಕ್ತಿಯ ಅನುಗ್ರಹ ಇಲ್ಲದೆ ಇಷ್ಟ್ಟು ದೊಡ್ಡ ಮಟ್ಟಕ್ಕೆ ಕ್ಷೇತ್ರವನ್ನು ಮಾಡಲು ಸಾಧ್ಯವಿಲ್ಲ. ಈ ಸನ್ನಿಧಿಯಲ್ಲಿ ಸಾಕಷ್ಟು ಶಕ್ತಿಯಿದೆ. ತಾಯಿಗೆ ಶಕ್ತಿ ಇರುವ ಕಾರಣದಿಂದಲೇ ಇಲ್ಲಿ ಜನಸಾಗರ ಸೇರಿದೆ. ಪವಿತ್ರವಾದ ಈ ದಿನದಂದು ಭೇಟಿ ಕೊಟ್ಟಿದ್ದೇನೆ. ತಾಯಿಯ ಅನುಗ್ರಹ ರಾಜ್ಯದ ಜನರ ಮೇಲಿರಲಿ. ಎಲ್ಲ ದುಃಖಗಳನ್ನು ತಾಯಿ ದೂರ ಮಾಡಲಿ, ಕ್ಷೇತ್ರ ಇನ್ನಷ್ಟು ಬೆಳೆಯಲಿ ಎಂದು ಡಿ.ಕೆ. ಶಿವಕುಮಾರ್ ಶುಭ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts