More

    ಡಿಜೆ ಹಳ್ಳಿ ಗಲಭೆ ಹಿಂದೆ ಇರುವ ನಾಯಕ ಜಮೀರ್ ಅಹ್ಮದ್: ಈಶ್ವರಪ್ಪ ಗಂಭೀರ ಆರೋಪ

    ಶಿವಮೊಗ್ಗ: ಶಾಸಕ ಜಮೀರ್ ಅಹ್ಮದ್ ಅವರೇ ಬೆಂಗಳೂರಿನ ಡಿಜೆ ಹಳ್ಳಿ ಕೃತ್ಯದ ಹಿಂದಿನ ನಾಯಕ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆರೋಪ ಮಾಡಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಆಗೋಮ್ಮೆ-ಈಗೋಮ್ಮೆ ಬಂದು ಮುಸ್ಲಿಮರ ನಾಯಕ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಡಿಜೆ ಹಳ್ಳಿ ಘಟನೆ ಹಿಂದೆ ಯಾರ ಕೈವಾಡ ಇದೆ ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರೇ ಬಹಿರಂಗಪಡಿಸಿದ್ದು ಅವರ ರಕ್ತದಲ್ಲೇ ಹಿಂದೂ ವಿರೋಧಿ ಗುಣವಿದೆ ಎಂದು ಕಿಡಿಕಾರಿದರು.

    ಸಂಸದ ತೇಜಸ್ವಿಸೂರ್ಯ ಹಾಗೂ ತಮ್ಮ ಬಗ್ಗೆ ಜಮೀರ್ ಅಹ್ಮದ್ ಏನು ಮಾತನಾಡಿದ್ದಾರೆ ಎಂಬುದನ್ನು ಗಮಿಸಿದ್ದೇನೆ. ಅಷ್ಟು ಕೀಳು ಮಟ್ಟದಲ್ಲಿ ಭಾಷೆ ಬಳಸಲು ನಾನು ಇಷ್ಟಪಡಿಸುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜಮೀರ್ ಅಹ್ಮದ್ ಅವರು ಮುಸ್ಲಿಮರ ಪರ ಇರುವುದಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ ಹಿಂದೂಗಳ ಮತಗಳನ್ನು ಹಾಕಿಸಿಕೊಂಡು ಗೆದ್ದಿದ್ದಾರೆ. ಅವರ ಋಣವನ್ನೂ ತೀರಿಸಬೇಕು ಎಂದು ಹೇಳುತ್ತಿದ್ದೇನೆ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಹಲ್ಲು ಬಿಗಿ ಹಿಡಿದು ಮಾತನಾಡಬೇಕು ಎಂದರು.

    ಇದನ್ನೂ ಓದಿ: ಛೋಟಾ ರಾಜನ್ ಇನ್ನೂ ಸತ್ತಿಲ್ಲ, ಬದುಕಿದ್ದಾನೆ ಎಂದ ದೆಹಲಿ ಏಮ್ಸ್​ ವೈದ್ಯರು!

    ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧ: ರಾಜ್ಯದ ಪಾಲಿನ ಆಕ್ಸಿಜನ್ ನೀಡುವುದಕ್ಕೆ ಕೇಂದ್ರ ಸರ್ಕಾರ ಆಕ್ಷೇಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ವ್ಯವಸ್ಥಿತವಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ರಾಜ್ಯದ ನಿರ್ಧಾರ ಪ್ರಶ್ನಿಸಿ ಕೇಂದ್ರ ಇದೀಗ ಮೇಲ್ಮನವಿ ಸಲ್ಲಿಸಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಬದ್ಧವಾಗಬೇಕಿದೆ ಎಂದು ಹೇಳಿದರು.

    ಲಾಕ್‌ಡೌನ್ ಬಗ್ಗೆ ಸರ್ಕಾರ ತೀರ್ಮಾನ: ರಾಜ್ಯದಲ್ಲಿ ಲಾಕ್‌ಡೌನ್ ರಾಜ್ಯ ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ರತಿನಿತ್ಯ ಸಾವಿರಾರು ವಾಹನಗಳನ್ನು ಜಪ್ತಿ ಮಾಡಿದರೂ ಪ್ರಯೋಜನ ಆಗುತ್ತಿಲ್ಲ. ಬಲವಂತದ ಲಾಕ್‌ಡೌನ್ ಮಾಡಬೇಕಾ ಬೇಡವಾ ಎಂಬುದನ್ನು ಸಿಎಂ ಬಿ.ಎಂ.ಯಡಿಯೂರಪ್ಪ ಅವರು ನಿರ್ಧಾರ ತಿಳಿಸಲಿದ್ದಾರೆ ಎಂದರು.

    18,852 ಕುಟುಂಬಗಳಿಗೆ ಹಕ್ಕುಪತ್ರ: ಸಚಿವ ಕೆ.ಎಸ್.ಈಶ್ವರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts