More

    ಮನೆಗೆ ನುಗ್ಗಿ ವಿದ್ಯಾರ್ಥಿನಿ ಕೊಲೆ: ಯುವತಿ ಫೋನ್​ನಲ್ಲಿತ್ತು ಪ್ರಿಯಕರನ ಕುರಿತು ಸ್ಫೋಟಕ ಮಾಹಿತಿ!

    ಹೈದರಾಬಾದ್​: ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದ ಇಂಜಿನಿಯರ್​ ವಿದ್ಯಾರ್ಥಿನಿ ದಿವ್ಯಾ ತೇಜಸ್ವಿನಿ ಬರ್ಬರ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಾಲಕರು ಆಕೆಗೆ ಮದುವೆಯಾಗಿಲ್ಲ ಎಂದು ಹೇಳಿದರೆ, ಮದುವೆಯಾಗಿತ್ತು ಎಂದು ಕೆಲವು ದಾಖಲೆಗಳು ಹೇಳುತ್ತಿವೆ. ಇದರ ನಡುವೆ ಘಟನೆ ನಡೆಯುವ ಮುನ್ನವೇ ದೂರು ನೀಡಿದ್ದರೆ ದಿವ್ಯಾಳನ್ನು ಉಳಿಸಿಕೊಳ್ಳಬಹುದಿತ್ತು ಎಂದು ತಿಳಿದುಬಂದಿದೆ.

    ಕೊಲೆ ಆರೋಪಿ ನಾಗೇಂದ್ರನ ಜತೆ ದಿವ್ಯಾಳ ಮದುವೆಯಾಗಿದೆ ಎಂಬುದನ್ನು ಆಕೆಯ ಪಾಲಕರು ಒಪ್ಪುತ್ತಿಲ್ಲ. ಇದಕ್ಕೂ ಮುನ್ನ ನಾಗೇಂದ್ರ ಒಮ್ಮೆ ಮನೆಗೆ ಫೋನ್​ ಮಾಡಿದಾಗ ಆತ ದಿವ್ಯಾಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂಬುದು ಪಾಲಕರ ಗಮನಕ್ಕೆ ಬಂದಿತ್ತಂತೆ.

    ದಿವ್ಯಾ-ನಾಗೇಂದ್ರ ಇಬ್ಬರು 2018ರ ಮಾರ್ಚ್​ನಲ್ಲಿ ಮಂಗಳಗಿರಿಯ ಪನಕಲಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇಬ್ಬರು ಮದುವೆ ಆಗಿದ್ದರಾ? ಇಲ್ಲವಾ? ಎಂಬುದರ ಬಗ್ಗೆ ಮಾಹಿತಿ ಖಚಿತವಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ದಿವ್ಯಾಳ ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​ ಸಂದೇಶಗಳನ್ನು ಮರಳಿ ಪಡೆಯುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ತಿಳಿದುಬಂದಿರುವಂತೆ ದಿವ್ಯಾ ಮಾರ್ಚ್​ 28 ನಾಗೇಂದ್ರನಿಗೆ ಕರೆ ಮಾಡಿದ್ದಾಳೆ ಮತ್ತು ಏಪ್ರಿಲ್​ 2ರಂದು ನಾಗೇಂದ್ರ ದಿವ್ಯಾಳಿಗೆ ಕರೆ ಮಾಡಿದ್ದಾನೆ.

    ಇದನ್ನೂ ಓದಿ: ಯುವ ಕ್ರಿಕೆಟಿಗರ ಬಗ್ಗೆ ಕಮೆಂಟ್:​ ಧೋನಿ ವಿರುದ್ಧ ತಿರುಬಿದ್ದ ಟೀಮ್​ ಇಂಡಿಯಾ ಮಾಜಿ ನಾಯಕ!

    ಮೊದಲ ಕರೆ ಸಂಭಾಷಣೆಯಲ್ಲಿ ರಹಸ್ಯ ಮದುವೆಯನ್ನು ಹೆಚ್ಚು ದಿನ ಮುಚ್ಚಿಡಲಾಗುವುದಿಲ್ಲ. ನಾನು ತುಂಬಾ ಒತ್ತಡದಲ್ಲಿದ್ದೇನೆ ಎಂದು ನಾಗೇಂದ್ರ ಹೇಳಿದ್ದು, ಪೊಲೀಸರಿಗೆ ದೊರಕಿರುವ ವಿಡಿಯೋ ಒಂದರಲ್ಲಿ ಆತ ತುಂಬಾ ಕೋಪದಲ್ಲಿರುವುದು ಕಂಡುಬಂದಿದೆ. ಆದರೆ, ಆತ ದಿವ್ಯಾಳನ್ನೇಕೆ ಕೊಲೆ ಮಾಡಿದ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.

    ಪೊಲೀಸರ ಪ್ರಕಾರ ಇಬ್ಬರು ಕರೊನಾ ಲಾಕ್​ಡೌನ್​ ಹೇರುವವರೆಗೂ ಸಂಪರ್ಕದಲ್ಲಿದ್ದರಂತೆ. ಇದರ ನಡುವೆ ನಾಗೇಂದ್ರ ಸೈಕೋ ರೀತಿ ಆಡುವುದನ್ನು ನೋಡಿ ಅವನ ನಂಬರ್​ ಬ್ಲಾಕ್​ ಮಾಡಿದ್ದಳು ಎಂಬುದು ಆಕೆಯ ಫೋನ್​ನಲ್ಲಿ ಸಿಕ್ಕ ಮಾಹಿತಿಗಳಿಂದ ಬಹಿರಂಗವಾಗಿದೆ. ತುಂಬಾ ಹಿಂಸೆ ನೀಡುತ್ತಿದ್ದರಿಂದ ನಂಬರ್​ ಬ್ಲಾಕ್​ ಮಾಡಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಅಲ್ಲದೆ, ವಿಡಿಯೋವೊಂದರಲ್ಲಿ ದಿವ್ಯಾ ಕಿರುಕುಳದ ಬಗ್ಗೆಯೇ ಬಹಿರಂಗಪಡಿಸಿದ್ದಾಳೆ. ಅಲ್ಲದೆ, ತನ್ನ ಪಾಲಕರು ಜೀವ ಕಳೆದುಕೊಳ್ಳುವ ಸಂಭವವಿದೆ ಎಂತಲೂ ವಿಡಿಯೋದಲ್ಲಿ ಹೇಳಿದ್ದಾಳೆ.

    ಸದ್ಯ ಪ್ರಕರಣದಲ್ಲಿ ಅನೇಕ ತಿರುವುಗಳಿದ್ದು, ಹೆಚ್ಚಿನ ತನಿಖೆಗೆ ವಿಜಯವಾಡ ಪೊಲೀಸ್​ ಠಾಣೆಯಿಂದ ದಿಶಾ ಠಾಣೆಗೆ ವರ್ಗಾಯಿಸಲಾಗಿದೆ. ಆಂಧ್ರದ ಗೃಹ ಸಚಿವ ಸುಚರಿಥಾ ಸಹ ದಿವ್ಯಾ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ತಿಳಿಸಿ, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಅಕ್ಟೋಬರ್​ 15ರಂದು ವಿಜಯವಾಡದ ಕ್ರಿಸ್ತುರಾಜ್​ಪುರಂನಲ್ಲಿನ ದಿವ್ಯಾ ಮನೆಗೆ ನುಗ್ಗಿದ್ದ ನಾಗೇಂದ್ರ ಚಾಕುವಿನಿಂದ ಇರಿದು ದಿವ್ಯಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. (ಏಜೆನ್ಸೀಸ್​)

    ದಿಢೀರನೇ ವಿದ್ಯಾರ್ಥಿನಿಯ ಕೋಣೆಗೆ​ ನುಗ್ಗಿದ ಯುವಕ: ಬಾಗಿಲು ಮುರಿದು ನೋಡಿದ ಪಾಲಕರಿಗೆ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts